More

    ಸರ್ಕಾರಿ ನೌಕರಿಗಾಗಿ ನಕಲಿ ಅಂಕಪಟ್ಟಿ ಸಲ್ಲಿಕೆ! ಮೂರು ವರ್ಷದ ನಂತರ ಕೃತ್ಯ ಬೆಳಕಿಗೆ

    ಬೆಂಗಳೂರು: ಅಸ್ಸಾಂನ ಗೌಹಾಟಿ ಐಐಟಿಯ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಕೇಂದ್ರ ವಿದ್ಯುತ್ ಸಂಶೋಧನ ಸಂಸ್ಥೆ(ಸಿಪಿಆರ್‌ಐ)ಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ ಇಂಜಿನಿಯರ್ ಒಬ್ಬರು ಸಿಂಧುತ್ವ ಪರೀಕ್ಷೆ ವೇಳೆ ಸಿಕ್ಕುಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂ ಬಿಇಎಲ್ ರಸ್ತೆಯ ನಿವಾಸಿಯಾದ ಮನೀಶ್ ಸಿಂಗ್ (26) ಎಂಬುವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    2018ನೇ ಸಾಲಿನಲ್ಲಿ ಸಿಪಿಆರ್‌ಐ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಕರೆದಿದ್ದ ಇಂಜಿನೀಯರಿಂಗ್ ಅಧಿಕಾರಿ ಹುದ್ದೆಗೆ ಮನೀಶ್ ಸಿಂಗ್ ನೇಮಕಗೊಂಡಿದ್ದರು. ನೇಮಕಾತಿ ವೇಳೆ ಮನೀಶ್ ಸಲ್ಲಿಸಿದ್ದ ಐಐಟಿ ಅಂಕಪಟ್ಟಿ ಸಿಂಧುತ್ವ ಪರಿಶೀಲನೆಗಾಗಿ ಅಸ್ಸಾಂನ ಗೌಹಾಟಿ ಐಐಟಿಗೆ ಕಳುಹಿಸಲಾಗಿತ್ತು. ಅಂಕಪಟ್ಟಿ ಪರಿಶೀಲನೆ ನಡೆಸಿದ ಐಐಟಿ ಅಧಿಕಾರಿಗಳು, ನಕಲಿ ಎಂದು ದೃಢೀಕರಿಸಿದ್ದಾರೆ. ಡಿಜಿಟಲ್ ಬೆರಳಚ್ಚು ಬೇರೊಬ್ಬ ಅಭ್ಯರ್ಥಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ ಎನ್ನಲಾಗಿದೆ.

    ಇದನ್ನೂ ಓದಿ: ಕಾರ್ಗೋ ಜೆಟ್​​ನಲ್ಲಿ ಕಾಬುಲ್​ ತೊರೆದ ಅಫ್ಘನ್​ ಪಾಪ್​ ಸ್ಟಾರ್​ ಅರ್ಯಾನಾ!

    ಸಿ.ವಿ.ರಾಮನ್ ನಗರದ ಸಿಪಿಆರ್‌ಐ ಆಡಳಿತಾಧಿಕಾರಿ ಕೆ.ಪ್ರವೀಣ್ ಕುಮಾರ್ ಸದಾಶಿವನಗರ ಪೊಲೀಸ್​​ ಠಾಣೆಗೆ ದೂರು ನೀಡಿದ್ದು, ಸರ್ಕಾರಿ ನೌಕರಿ ಸಲುವಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ ಅಧಿಕಾರಿ ಮನೀಷ್​​ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇದರ ಅನ್ವಯ ಆರೋಪಿ ವಿರುದ್ಧ ಎಫ್​ಐಆರ್ ದಾಖಲಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಪ್ರಾಥಮಿಕ ಶಾಲೆಗಳ ಆರಂಭ ಯಾವಾಗ? ಸಿಎಂ ಹೇಳಿದ್ದೇನು?

    ಸಂಸ್ಕೃತ ಕಲಿಯಬೇಕೆ? ಇಲ್ಲಿವೆ ಸರಳ ಮಾರ್ಗಗಳು!

    ‘ಕೇವಲ ಸೋದರರಲ್ಲ, ಸೋದರಿಯರೂ ರಕ್ಷಿಸಬಲ್ಲರು’ ಎನ್ನುತ್ತಾರೆ ನೃತ್ಯಜೋಡಿ ಶಕ್ತಿ, ಮುಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts