More

    ಲಾಕ್​ಡೌನ್ ತಂದ ನಿರುದ್ಯೋಗ: ಉದ್ಯೋಗ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿ ಭೂಮಿ ಖರೀದಿಸಿದರು

    ಗಾಜಿಯಾಬಾದ್: ಲಾಕ್​ಡೌನ್ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿರುವುದನ್ನೇ ದುರುಪಯೋಗ ಪಡಿಸಿಕೊಂಡು, ಉದ್ಯೋಗ ಕೊಡಿಸುವ ಭರವಸೆ ನೀಡಿ ವಂಚಿಸುತ್ತಿರುವ ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿವೆ.
    ಗಾಜಿಯಾಬಾದ್‌ನಲ್ಲಿ ಉದ್ಯೋಗದ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸುವ ನಕಲಿ ಕಾಲ್ ಸೆಂಟರ್ ಮೇಲೆ ಶುಕ್ರವಾರ ಸಂಜೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
    ಈ ದಂಧೆಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ರವಿ ಚೌಹಾಣ್ ಪ್ರಮುಖ ಆರೋಪಿಯಾಗಿದ್ದು, ಪ್ರಮೋದ್ ಮತ್ತು ವಿಕಾಸ್ ಬಂಧಿಸಲ್ಪಟ್ಟ ಇತರ ಇಬ್ಬರು ಆರೋಪಿಗಳು.

    ಇದನ್ನೂ ಓದಿ:  ಶ್ರೀನಗರ ಜಿಲ್ಲೆಯಲ್ಲೀಗ ಸಕ್ರಿಯ ಉಗ್ರರೇ ಇಲ್ಲ: ಜಮ್ಮು-ಕಾಶ್ಮೀರ ಪೊಲೀಸ್ ಘೋಷಣೆ


    ಲಾಕ್ ಡೌನ್ ಸಮಯದಲ್ಲಿ ಉದ್ಯೋಗ ಹುಡುಕುತ್ತಿದ್ದವರನ್ನೇ ಆರೋಪಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
    ಸಾಮಾನ್ಯವಾಗಿ ಉದ್ಯೋಗ ಹುಡುಕಾಟದಲ್ಲಿರುವವರು ಆನ್​ಲೈನ್​ನಲ್ಲಿ ಉದ್ಯೋಗ ಹುಡುಕುತ್ತಿರುತ್ತಾರೆ. ಆರೋಪಿಗಳು ಇದನ್ನೇ ಗುರಿಯಾಗಿಟ್ಟುಕೊಂಡು ಆನ್‌ಲೈನ್ ಪ್ಲಾಟ್‌ಫಾರ್ಮ್‌ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದರು. ಆನಂತರ ಉದ್ಯೋಗಾಸಕ್ತರು www.data-entry.online ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಆರೋಪಿಗಳು ಕರೆಯಿತ್ತರು. ಈ ಆನ್​ಲೈನ್ ನೋಂದಣಿ ಪ್ರಕ್ರಿಯೆಯಲ್ಲಿ, ಅರ್ಜಿ ಸಲ್ಲಿಸಚ್ಛಿಸುವ ಅಭ್ಯರ್ಥಿಗಳು 1,500 ರೂ.ನಿಂದ 15,000 ರೂ.ಗಳವರೆಗೆ ನೋಂದಣಿ ಶುಲ್ಕವನ್ನು ಪಾವತಿಸುವಂತೆ ತಿಳಿಸಲಾಗಿತ್ತು.

    ಇದನ್ನೂ ಓದಿ: ಶ್ವಾನಕ್ಕೆ ಅನ್ನ ಹಾಕುತ್ತಿದ್ದ ಬಾಲಕರೇ ಶ್ವಾನ ಸಂಭೋಗಿಯನ್ನು ಹಿಡಿದುಕೊಟ್ಟರು


    ಅಭ್ಯರ್ಥಿಗಳ ಆನ್​ಲೈನ್ ನೋಂದಣಿ ಪ್ರಕ್ರಿಯೆ ಮುಗಿದ ನಂತರ, ಆರೋಪಿಗಳು ಅವರೊಂದಿಗೆ ವಾಟ್ಸಾಪ್ ಸಂಖ್ಯೆಯನ್ನು ತಿಳಿಸುತ್ತಾರೆ. ಟೆಲಿಫೋನಿಕ್ ಸಂದರ್ಶನಕ್ಕಾಗಿ ಮತ್ತು ನೌಕರಿ ಆರೋಶ ಪತ್ರ ಕಳುಹಿಸಲು 2 ಲಕ್ಷ ರೂ.ಗಳವರೆಗೆ ಹಣಕ್ಕೆ ಬೇಡಿಕೆ ಇಡುತ್ತಾರೆ. ಅಭ್ಯರ್ಥಿಗಳು ಹಣವನ್ನು ಪಾವತಿಸಿದ ನಂತರ, ಆರೋಪಿಗಳು ಅವರ ಕರೆಗಳನ್ನು ನಿರಾಕರಿಸುತ್ತಾರೆ. ಇದಿಷ್ಟು ಈ ಆರೋಪಿಗಳ ದಂಧೆಯಾಗಿತ್ತು.
    ಲಾಕ್​ಡೌನ್ ಅವಧಿಯಲ್ಲೇ ಅವರು ಕಳೆದ ನಾಲ್ಕು ತಿಂಗಳಲ್ಲಿ ಕನಿಷ್ಠ 70 ಜನರಿಗೆ ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡಿದ್ದಾರೆ. ಆರೋಪಿಗಳು ಅಕ್ರಮವಾಗಿ ಸಂಪಾದಿಸಿದ ಹಣದಿಂದ ದೆಹಲಿಯಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

    ಸ್ನಾತಕೊತ್ತರ ಪದವೀಧರರೆ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ನಲ್ಲಿದೆ 55 ಸಾವಿರ ರೂ. ಸಂಬಳದ ಉದ್ಯೋಗ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts