More

    ನಕಲಿ ಆಧಾರ್, ಪಡಿತರ ಚೀಟಿಗಳ ಮುದ್ರಣ ಕೇಂದ್ರವಾಗಿತ್ತು ಎಐಎಂಐಎಂ ನಾಯಕನ ಮನೆ !

    ಥಾಣೆ: ಆಧಾರ್, ಪಡಿತರ ಚೀಟಿ ಬೇಕಾದ್ರೆ ತಲೆನೋವೇ ಇಲ್ಲ ಕೂಡ್ಲೇ ಕೊಟ್ಟು ಬಿಡ್ತೇವೆ ಎಂದು ಹೇಳುತ್ತಿದ್ದ ಎಐಎಂಐಎಂ ನಾಯಕನ ಮನೆ ನಕಲಿ ಆಧಾರ್, ನಕಲಿ ಪಡಿತರ ಚೀಟಿಗಳ ಮುದ್ರಣ ಕೇಂದ್ರವಾಗಿತ್ತು! ಪೊಲೀಸ್ ದಾಳಿ ನಡೆಸಿದಾಗ ಆ ಮನೆಯಲ್ಲಿ ಸೀಲು ಹೊಂದಿದ್ದ 38 ಖಾಲಿ ರೇಷನ್ ಕಾರ್ಡ್​, 30 ಆಧಾರ್​ ಕಾರ್ಡ್​ಗಳು ಪತ್ತೆಯಾಗಿದ್ದವು. ಅವೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.

    ಆರೋಪಿಗಳನ್ನು ಕಳೆದ ತಿಂಗಳೇ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಖಾಲಿದ್ ಗುಡ್ಡು ಮತ್ತು ಆತನ ಸಹೋದರ ಬಬ್ಲು ಎಂದು ಗುರುತಿಸಲಾಗಿದೆ. ಖಾಲಿದ್​ ಗುಡ್ಡು ಎಐಎಂಐಎಂನ ಭಿವಾಂಡಿ ಘಟಕದ ಅಧ್ಯಕ್ಷ. ಇವರ ವಿರುದ್ಧ ಒತ್ತೆ ಹಣಕ್ಕಾಗಿ ಅಪಹರಣ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಪ್ರಕರಣವೂ ಸೇರಿ ಅನೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿರುವುದಾಗಿ ಝೋನ್ ಎರಡರ ಡಿಸಿಪಿ ರಾಜ್​ ಕುಮಾರ್ ಶಿಂಧೆ ತಿಳಿಸಿದ್ದಾರೆ.

    ಇದನ್ನೂ ಓದಿ: ನನಗೆ ಮದ್ವೆ ಮಾಡಿ ಎಂದು ಪೀಡಿಸುತ್ತಿದ್ದ 22ರ ಯುವಕನ ದುರಂತ ಅಂತ್ಯ!

    ವಿಚಾರಣೆ ಸಂದರ್ಭದಲ್ಲಿ ನಕಲಿ ಆಧಾರ್, ನಕಲಿ ಪಡಿತರ ಚೀಟಿ ವಿಚಾರ ಬಾಯ್ಬಿಟ್ಟ ಖಾಲಿದ್, ಚುನಾವಣೆಯ ಉದ್ದೇಶಕ್ಕಾಗಿ ಇವನ್ನೆಲ್ಲ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಗೂಂಡಾಗಿರಿ ರಾಜಕೀಯ ಮಾಡುತ್ತಿದ್ದ ಖಾಲಿದ್​ ನೀಡಿರುವ ಮಾಹಿತಿ ಪ್ರಕಾರವೇ ಪೊಲೀಸರು ಆತನ ಮನೆಯ ಮೇಲೆ ದಾಳಿ ನಡೆಸಿ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಮನೆಯೊಳಗೆ ಬಂತು ಸಯಾಮಿ ಹಾವು- ಒಂದೇ ದೇಹ ಎರಡು ತಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts