More

    FACT CHECK| ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಗ್ರೇಸ್ ಮಾರ್ಕ್​ ಸಿಗುತ್ತಾ?

    ಬೆಂಗಳೂರು: ದ್ವಿತೀಯ ಪಿಯುಸಿಯ ಇಂಗ್ಲಿಷ್ ಭಾಷಾ ಪರೀಕ್ಷೆ ಹಾಜರಾದ ಮಕ್ಕಳಿಗಷ್ಟೇ 26 ಗ್ರೇಸ್ ಮಾರ್ಕ್​ ಸಿಗಲಿದೆ ಎಂಬ ಒಕ್ಕಣೆ ಇರುವ ಸಚಿವ ಸುರೇಶ್ ಕುಮಾರ್ ಅವರ ಟ್ವೀಟೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಟ್ವೀಟ್​ನ ಮಾಹಿತಿ ಇಷ್ಟು- ಸಚಿವ ಸುರೇಶ್ ಕುಮಾರ್ ಅವರ ಖಾತೆಯಿಂದಲೇ ಜುಲೈ 13 ರ ಸಂಜೆ 6.50ಕ್ಕೆ ಮಾಡಿರುವ ಟ್ವೀಟ್​ ಸಂದೇಶದಂತೆ ಇದೆ ಆ ಇಮೇಜ್​. ಅದರಲ್ಲಿರುವ ಟಿಪ್ಪಣಿ ಇಷ್ಟು- ಮಧ್ಯಾಹ್ನದ ನಂತರ ದ್ವಿತೀಯ ಪಿಯುವಿನ ಬಹಳಷ್ಟು ಮಕ್ಕಳು ನನಗೆ ಕರೆ ಮಾಡುತ್ತಿದ್ದಾರೆ. ಜೂನ್​ 18ರಂದು ನಡೆಸಲಾದ ಇಂಗ್ಲಿಷ್ ಭಾಷೆಯ ಪರೀಕ್ಷೆಗೆ ಸಂಬಂಧಿಸಿ ಗ್ರೇಸ್ ಮಾರ್ಕ್ಸ್ ಕುರಿತು ಕೇಳತೊಡಗಿದ್ದಾರೆ. ಎಲ್ಲ ಮೌಲ್ಯಮಾಪಕರಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದ್ದು, ಇಂಗ್ಲಿಷ್ ಭಾಷಾ ಪರೀಕ್ಷೆಗೆ ಹಾಜರಾದವರಿಗೆ ಮಾತ್ರವೇ 26 ಗ್ರೇಸ್ ಅಂಕ ಕೊಡಿ ಎಂದು ಸೂಚಿಸಲಾಗಿದೆ.

    ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿಗೆ ಅಗ್ರಪಟ್ಟ, ಚಿತ್ರದುರ್ಗಕ್ಕೆ ಕೊನೇ ಸ್ಥಾನ

    ಸತ್ಯಾಂಶ ಏನು?: ಸಚಿವ ಸುರೇಶ್ ಕುಮಾರ್ ಅವರು ಈ ಟ್ವೀಟ್ ನ ಸ್ಕ್ರೀನ್ ಶಾಟ್​ ಇಮೇಜ್ ಟ್ವೀಟ್​ ಮಾಡಿದ್ದಾರೆ. ಅದರ ಮೇಲೆ ಫೇಕ್ ಎಂದು ಷರಾ ಬರೆದು ಊಹಾಪೋಹ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಅರ್ಥಾತ್​, ಇಂಗ್ಲಿಷ್ ಭಾಷಾ ಪರೀಕ್ಷೆ ಬರೆದವರಿಗೆ ಗ್ರೇಸ್ ಮಾರ್ಕ್​ ನೀಡುತ್ತಿರುವ ಸುದ್ದಿ ಸುಳ್ಳು ಎಂಬುದನ್ನು ಖಚಿತ ಪಡಿಸಿದ್ದಾರೆ.

    ದ್ವಿತೀಯ ಪಿಯು ಫಲಿತಾಂಶ ಇಂದು 11.30ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts