More

    VIDEO| ಇಂಧನ ದರ ಏರಿಕೆಯ ಆಕ್ರೋಶಕ್ಕೆ ಪೆಟ್ರೋಲ್​ ಪಂಪ್​ ಧ್ವಂಸ: ಘಟನೆ ಹಿಂದಿನ ಅಸಲಿಯತ್ತೇ ಬೇರೆ!

    ನವದೆಹಲಿ: ದಿನೇದಿನೆ ಇಂಧನ ದರ ಏರಿಕೆಯಾಗುತ್ತಿರುವ ನಡುವೆಯೇ ಉದ್ರಿಕ್ತ ಯುವಕರ ಗುಂಪೊಂದು ಬಂಕ್​ ಒಂದರ ಪೆಟ್ರೋಲ್​ ಪಂಪ್​ಗಳಿಗೆ ಹಾನಿ ಮಾಡುತ್ತಿರುವ ವಿಡಿಯೋವೊಂದು ತಪ್ಪು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅನೇಕ ಫೇಸ್​ಬುಕ್​ ಬಳಕೆದಾರರು ಎರಡು ನಿಮಿಷ ಎಂಟು ಸೆಕೆಂಡ್​ವುಳ್ಳ ವಿಡಿಯೋ ತುಣುಕನ್ನು ಹಿಂದಿ ಅಡಿಬರಹದೊಂದಿಗೆ ಪೋಸ್ಟ್​ ಮಾಡಿಕೊಂಡಿದ್ದು, ಅದರ ಸಾರ ಹೀಗಿದೆ… ಸಾರ್ವಜನಿಕರ ಆಕ್ರೋಶವನ್ನು ನೋಡಿ. ದಿನೇದಿನೆ ಹೆಚ್ಚುತ್ತಿರುವ ಪೆಟ್ರೋಲ್​ ಹಾಗೂ ಡೀಸೆಲ್ ದರದಿಂದ ಆಕ್ರೋಶಗೊಂಡಿರುವ ಜನರು​ ಪೆಟ್ರೋಲ್​ ಪಂಪ್​ಗಳನ್ನು ಧ್ವಂಸ ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬರೆಯಲಾಗಿದ್ದು, ಸಾಕಷ್ಟು ವೈರಲ್​ ಆಗಿದೆ. ಆ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.

    ಇದನ್ನೂ ಓದಿ: ಅರೆಬೆತ್ತಲೆ ದೇಹದ ಮೇಲೆ ಮಕ್ಕಳಿಂದಲೇ ಡ್ರಾಯಿಂಗ್​ ಬಿಡಿಸಿಕೊಂಡಿದ್ದ ರೆಹಾನಾಗೆ ಮತ್ತೊಂದು ಸಂಕಷ್ಟ!

    ये देखिये जनता का आक्रोशभड़क चुकी है जनता अब #पेट्रोल #डीज़ल के बढ़ते दाम पे और महंगाई को लेकर कर रही पेट्रोल पंप पर बवाल.#मोदी सरकार नाकाम

    Posted by Md Faizan on Wednesday, June 24, 2020

    ಆದರೆ, ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಆಗಿರುವ ಪೋಸ್ಟ್ ನಕಲಿಯಾಗಿದ್ದು, ಅದು ಎರಡು ವರ್ಷಗಳ ಹಿಂದಿನ ವಿಡಿಯೋ ಆಗಿದ್ದು, ಪ್ರಸ್ತುತ ಉಂಟಾಗಿರುವ ಇಂಧನ ದರ ಏರಿಕೆಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.

    ಹಾಗದ್ರೆ ವಿಡಿಯೋ ಎಲ್ಲಿಯದ್ದು?
    ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದ ಮೂಲಕ ವಿಡಿಯೋವನ್ನು ಹುಡುಕಾಡಿದಾಗ ಇದೇ ವಿಡಿಯೋ 2018ರಲ್ಲಿ ವೈರಲ್​ ಆಗಿತ್ತು ಹಾಗೂ ಈ ಘಟನೆ ಒಡಿಶಾದ ಪುರಿಯಲ್ಲಿ ನಡೆದಿತ್ತು ಎಂದು ತಿಳಿದುಬಂದಿದೆ. ಫ್ಯಾಕ್ಟ್​ಚೆಕ್​ ವೆಬ್​ಸೈಟ್​ ಬೂಮ್​ ಕೂಡ ವೈರಲ್​ ಪೋಸ್ಟ್​ ನಕಲಿ ಎಂದು ಸಾಬೀತು ಪಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ “ಒಡಿಶಾ ಟಿವಿ” ಮತ್ತು “ಒಡಿಶಾ ಬೈಟ್ಸ್” ಎಂಬ ನೂಸ್​ ಚಾನೆಲ್​​ 2018ರ ಸೆಪ್ಟೆಂಬರ್ 29ರಂದು ವರದಿಯನ್ನು ಮಾಡಿವೆ.​

    ಇದನ್ನೂ ಓದಿ: ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!

    VIDEO| ಇಂಧನ ದರ ಏರಿಕೆಯ ಆಕ್ರೋಶಕ್ಕೆ ಪೆಟ್ರೋಲ್​ ಪಂಪ್​ ಧ್ವಂಸ: ಘಟನೆ ಹಿಂದಿನ ಅಸಲಿಯತ್ತೇ ಬೇರೆ!

    ನ್ಯೂಸ್​ ಚಾನೆಲ್​ಗಳ ವರದಿಯ ಪ್ರಕಾರ 2018ರ ಸೆಪ್ಟೆಂಬರ್​ 28ರಂದು ಪುರಿಯ ಮೆಡಿಕಲ್​ ಛಾಕ್​ ಬಳಿ ಈ ಉದ್ವಿಘ್ನತೆ ಉಂಟಾಗಿತ್ತು. ಪೆಟ್ರೋಲ್​ ಪಂಪ್​ ಸಿಬ್ಬಂದಿ ಕಡಿಮೆ ಪೆಟ್ರೋಲ್​ ಹಾಕುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ದೂರು ನೀಡಿದಾಗ, ಸ್ಥಳೀಯರು ಪೆಟ್ರೋಲ್​ ಪಂಪ್​ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ಕೂಡ ನಡೆಸಿದ್ದರು.

    ಇದನ್ನೂ ಓದಿ: ಟಿಕ್​ ಟಾಕ್ ಸ್ಟಾರ್​​​ ಆತ್ಮಹತ್ಯೆಗೆ ಕಾರಣವೇನು? ಪೊಲೀಸರಿಗೆ ಸ್ಪೋಟಕ ಮಾಹಿತಿ ನೀಡಿದ ಕುಟುಂಬ​

    ಅಂತಿಮ ತೀರ್ಮಾನವೇನು?
    ಫ್ಯಾಕ್ಟ್​ಚೆಕ್​ ಪ್ರಕಾರ ವೈರಲ್​ ಆಗಿರುವ ವಿಡಿಯೋಗೂ ಪ್ರಸ್ತುತ ಇಂಧನ ದರ ಏರಿಕೆಗೂ ಸಂಬಂಧವಿಲ್ಲ. ತಪ್ಪು ಮಾಹಿತಿ ಹರಡುವ ಉದ್ದೇಶದಿಂದ ಎರಡು ವರ್ಷದ ಹಿಂದಿನ ವಿಡಿಯೋವನ್ನು ಈಗ ಮತ್ತೊಮ್ಮೆ ವೈರಲ್​ ಮಾಡಿದ್ದಾರೆ. ಇನ್ನೊಂದೆಡೆ ದೇಶಾದ್ಯಂತ ಪೆಟ್ರೋಲ್​ ಬೆಲೆ ದಿನೇದಿನೆ ಏರಿಕೆಯಾಗುತ್ತಿದ್ದು, 80ರ ಗಡಿ ದಾಟಿ ಮುನ್ನುಗ್ಗುತ್ತಿದೆ. (ಏಜೆನ್ಸೀಸ್​)

    ಬೈಕ್​ ಮೇಲೆ ಮಲಗಿರುವ ರೀತಿ ಮೃತ ದೇಹ ಪತ್ತೆ: ಮ.ಬೆಟ್ಟದ ರಸ್ತೆಯಲ್ಲಿ ಶಾಕಿಂಗ್​ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts