More

    ದೆಹಲಿ ಹಿಂಸಾಚಾರಕ್ಕೆ ಬಾಳೆಹಣ್ಣಿನಲ್ಲಿಟ್ಟು ಹಣ ಸಾಗಿಸಿದ್ದು ನಿಜವೇ: ಜಾಲತಾಣಗಳಲ್ಲಿ ವೈರಲ್​ ಆಗಿದ್ದ ವಿಡಿಯೋ ಅಸಲಿಯತ್ತೇನು?

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರುದ್ಧ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ವೇಳೆಯಲ್ಲಿ ಗಲಭೆಕೋರರಿಗೆ ಹಂಚಲು ಹಣವನ್ನು ಬಾಳೆಹಣ್ಣಿನಲ್ಲಿ ಇಟ್ಟು ಕಳುಹಿಸಲಾಗುತ್ತಿದೆ ಎಂದು ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

    ಬಾಳೆಹಣ್ಣಿನಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಮತ್ತು 500 ರೂ. ಕರೆನ್ಸಿಯನ್ನು ತೆಗೆಯುವ ವಿಡಿಯೋ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಹಣವನ್ನು ದೆಹಲಿ ಗಲಭೆಗೆ ಬಳಸಲು ವಿವಿಧೆಡೆಯಿಂದ ಕಳುಹಿಸಲಾಗುತ್ತಿದೆ ಎಂದು ಸುದ್ದಿಯಾಗಿತ್ತು.

    ಬಾಳೆಹಣ್ಣಿನಿಂದ ಹೊರ ತೆಗೆವ ವಿಡಿಯೋಗೆ ಇಲ್ಲಿ ನೋಡಿ ದೆಹಲಿ ಹಿಂಸಾಚಾರಕ್ಕೆ ಸಿದ್ಧತೆ ಹೇಗಿದೆ ಎಂದು ಬರೆಯಲಾಗಿತ್ತು. ಇನ್ನೊಂದರಲ್ಲಿ ದೆಹಲಿ ಹಿಂಸಾಚಾರವನ್ನು ಹೀಗೆ ಬಾಳೆಹಣ್ಣಿನಲ್ಲಿ ಬಚ್ಚಿಡಲಾಗಿದೆ ಎಂದು ಬರೆಯಲಾಗಿತ್ತು. ಈ ವಿಡಿಯೋ 13 ಸಾವಿರ ಮಂದಿ ಹಂಚಿಕೊಂಡಿದ್ದರು ಮತ್ತು 8 ಸಾವಿರ ಮಂದಿ ಲೈಕ್​ ಮಾಡಿದ್ದರು.

    ಆದರೆ ಇಂಡಿಯಾ ಟುಡೇ ಫ್ಯಾಕ್ಟ್​ಚೆಕ್​ನಲ್ಲಿ ಪತ್ತೆ ಹಚ್ಚಿದಂತೆ ಇಂದು 2 ವರ್ಷಗಳ ಹಳೇ ವಿಡಿಯೋ. ಅಲ್ಲದೆ ಇದನ್ನು ಹಣದ ಕಳ್ಳ ಸಾಗಣೆ ಮಾಡುವಾಗ ವಿಡಿಯೋ ತೆಗೆಯಲಾಗಿತ್ತು. ಆದರೆ ಯಾವಾಗ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.

    ವಿಡಿಯೋ ಜಾಲ ಹಿಡಿದು ಪತ್ತೆ ಹಚ್ಚಲು ಹೊರಟವರಿಗೆ ತಿಳಿದಿದ್ದು ಈ ಸುದ್ದಿಯು 2017 ಅಕ್ಟೋಬರ್​ 31ರಂದು ಡೈಲಿ ಭಾಸ್ಕರದಲ್ಲಿ ಪ್ರಕಟವಾಗಿತ್ತು ಎಂಬುದು. ಆ ವರದಿ ಪ್ರಕಾರ ಹಣವನ್ನು ಕದ್ದು ಬಳಸಲು ಹೀಗೆ ಬಾಳೆ ಹಣ್ಣಿನಲ್ಲಿ ಇಡಲಾಗಿತ್ತು.

    ಆದರೆ ಆ ವರದಿಯಲ್ಲಿಯೇ ತಿಳಿಸಿದಂತೆ ಇದನ್ನು ರೆಕಾರ್ಡ್​ ಮಾಡಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ಅಲ್ಲದೆ ಇದು ಯಾವ ಸ್ಥಳ ಎಂಬುದು ಪತ್ತೆಯಾಗಿಲ್ಲ. ಆದರೆ ಇದು ಪಾಕಿಸ್ತಾನದ ಮೂಲದ್ದು ಎಂಬುದು ಸ್ಪಷ್ಟವಾಗಿತ್ತು.

    2017ರ ಫೆಬ್ರವರಿಯಲ್ಲಿಯೂ ಇಂತಹ ಹಣ ಸಾಗಣೆಯ ಇನ್ನೊಂದು ವರದಿ ಪತ್ತೆಯಾಗಿತ್ತು. ಅದರಲ್ಲಿ ಕೇರಳದ ಕರಿಪುರ್​ ಎಂಬಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು ಎಂಬುದಾಗಿ ತಿಳಿದು ಬರುತ್ತದೆ. ಅವರು ಸೌದಿಯ ರಿಯಾಲ್ಸ್​ಗಳನ್ನು ಹೀಗೆ ಬಾಳೆಹಣ್ಣಿನಲ್ಲಿ ಸಾಗಿಸುತ್ತಿದ್ದರು ಎಂದು ಆ ವರದಿ ತಿಳಿಸಿತ್ತು. ಆದರೆ ಈ ವಿಡಿಯೋಗಳನ್ನು ಈಗ ಡಿಲಿಟ್​ ಮಾಡಲಾಗಿದೆ.

    ಇಷ್ಟೆಲ್ಲ ಅಂಶಗಳಿಂದ ತಿಳಿಯುವುದೇನೆಂದರೆ ಈ ಹಣ ದೆಹಲಿ ಹಿಂಸಾಚಾರಕ್ಕೆ ಬಳಸಿದ್ದಲ್ಲ. ಅದಕ್ಕಿಂತ ಮುಂಚೆ ನಡೆದ ಕ್ರೈಂ ಕೃತ್ಯಗಳಲ್ಲಿ ಈ ಪ್ರಕಣವನ್ನು ವರದಿ ಮಾಡಲಾಗಿತ್ತು. ಅಲ್ಲದೆ ಇದೂ 2 ವರ್ಷಕ್ಕೂ ಮುಂಚಿನದ್ದು. ಹಾಗಾಗಿ ದೆಹಲಿ ಹಿಂಸಾಚಾರಕ್ಕೂ, ಈ ಹಣ ಸಾಗಣೆಗೂ ಯಾವ ಸಂಬಂಧವೂ ಇಲ್ಲ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts