More

    ಫ್ಯಾನ್ಸಿ ಉಡುಗೆ ತೊಟ್ಟು ಬೀದಿಗಿಳಿದ ಮಹಿಳೆ ಬಗ್ಗೆ ಹರಿದಾಡುತ್ತಿರೋ ಸುಳ್ಳು ಸುದ್ದಿಯ ಸತ್ಯಾಂಶ ಇಲ್ಲಿದೆ!

    ನವದೆಹಲಿ: ಫ್ಯಾನ್ಸಿ ಉಡುಗೆ ತೊಟ್ಟಿರುವ ಮಹಿಳೆ ಮತ್ತು ಆಕೆಯ ಹಿಂದೆ ಕೆಲವರು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿರುವ ಮಹಿಳೆ, ದೆಹಲಿಯ ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯ (ಜೆಎನ್​ಯು)ದ ವಿದ್ಯಾರ್ಥಿಯಾಗಿದ್ದು, ಆಕೆ ಸೀರೆ ಮತ್ತು ಸಿಂಧೂರ ಧರಿಸುವ ಹಿಂದು ಮಹಿಳೆಯರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಳೆಂಬ ಅಡಿಬರಹದೊಂದಿಗೆ ಫೋಟೋವನ್ನು ಹರಿಬಿಡಲಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವೇಳೆ ಹಿಂದು ಸಂಸ್ಕೃತಿ ವಿರೋಧಿಸುವ ಕೆಲವನ್ನು ಮಹಿಳೆ ಮಾಡಿದ್ದಾಳೆಂದು ಹೇಳಲಾಗಿದೆ. ಹೀಗಾಗಿ ಅನೇಕರು ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು, ಹಿಂದು ಸಂಸ್ಕೃತಿಯನ್ನು ಗುರಿಯಾಗಿಸುವ ಚಳುವಳಿ ಏತಕ್ಕಾಗಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಅನೇಕ ಫೇಸ್​ಬುಕ್​ ಮತ್ತು ಟ್ವಿಟರ್​ ಬಳಕೆದಾರರು ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿರಿ: ಯಾರನ್ನೇ ಮದ್ವೆಯಾದ್ರೂ ನನ್ನ ಜತೆ ಕೂಡಲೇಬೇಕು ಎಂದಿದ್ದೇನೆ- ಇದರಲ್ಲಿ ತಪ್ಪೇನಿದೆ ಮೇಡಂ?

    ಫ್ಯಾನ್ಸಿ ಉಡುಗೆ ತೊಟ್ಟು ಬೀದಿಗಿಳಿದ ಮಹಿಳೆ ಬಗ್ಗೆ ಹರಿದಾಡುತ್ತಿರೋ ಸುಳ್ಳು ಸುದ್ದಿಯ ಸತ್ಯಾಂಶ ಇಲ್ಲಿದೆ!

    ಮಹಿಳೆಯ ಫೋಟೋವನ್ನು ಎಡಪಂಥೀಯ ಆದರ್ಶ ಮತ್ತು ಮಾನಸಿಕ ವಿಕೃತಿ ಎಂದು ನೆಟ್ಟಿಗರು ಜರಿದಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್ ನಡೆಸಿದ್ದು, ವೈರಲ್​ ಆಗಿರುವ ಫೋಟೋಗೂ ಸಿಎಎ ಪ್ರತಿಭಟನೆಗೂ ಮತ್ತು ಹಿಂದು ಸಂಸ್ಕೃತಿ ವಿರೋಧಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಅಂದಹಾಗೆ ಫೋಟೋವನ್ನು 2019ರಲ್ಲಿ ಕೊಲ್ಕತದಲ್ಲಿ ನಡೆದ ಪರೇಡ್​ ವೇಳೆ ತೆಗೆಯಲಾಗಿದೆ.

    ಇದನ್ನೂ ಓದಿರಿ: ಮದ್ವೆಯಾದ ಒಂದೇ ತಿಂಗಳಲ್ಲಿ ಉಪವಲಯ ಅರಣ್ಯಾಧಿಕಾರಿ ಆತ್ಮಹತ್ಯೆಗೆ ಶರಣು

    ಫೋಟೋದಲ್ಲಿರುವ ಮಹಿಳೆ ದೃಶ್ಯ ಕಲಾವಿದೆ ಮತ್ತು ಕಾರ್ಯಕರ್ತೆ ಪಾಂಚಾಲಿ ಕರ್​ ಎಂದು ಕರೆಯಲಾಗಿದೆ. ಈಕೆ ಜೆಎನ್​ಯು ವಿದ್ಯಾರ್ಥಿನಿ ಅಲ್ಲವೇ ಅಲ್ಲ. ಆದರೂ ಇದೊಂದು ಎಲ್​ಜಿಬಿಟಿಕ್ಯುಐಎ + ಸಮುದಾಯದ ಹೆಮ್ಮೆಯ ಜಾಥ ಆಗಿದ್ದು, ಇದೇ ಜಾಥದಲ್ಲಿ ಸಿಎಎ ವಿರೋಧಿ ಘೋಷಣೆಯನ್ನು ಕೂಗಲಾಯಿತು.

    ಇದು ಜೆಎನ್​ಯು ಕಾರ್ಯಕ್ರಮವಲ್ಲ
    ಫೋಟೋವನ್ನು ರಿವರ್ಸ್​ ಸರ್ಚ್​ ಇಂಜಿನ್​ ಮೂಲಕ ಹುಡುಕಾಡಿದಾಗ ಪಶ್ಚಿಮ ಬಂಗಾಳ ನ್ಯೂಬ್​ ವೆಬ್​ಸೈಟ್​ “ಖಾಸ್​ ಖಬರ್​”ನಲ್ಲಿ ಸುದ್ದಿಯೊಂದು ಪ್ರಕಟವಾಗುರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಆಕೆಯನ್ನು ಪಾಂಚಾಲಿ ಕರ್ ಎಂದು ಗುರುತಿಸಲಾಗಿದೆ. ಈಕೆ ದೃಶ್ಯ ಕಲಾವಿದೆಯಾಗಿದ್ದು, ವಿವಾದಾತ್ಮಕ ಫೇಸ್​ಬುಕ್​ ಪೋಸ್ಟ್​ ಮತ್ತು ಚಿತ್ರಗಳಿಂದ ಖ್ಯಾತರಾಗಿದ್ದಾರೆ.

    ಫ್ಯಾನ್ಸಿ ಉಡುಗೆ ತೊಟ್ಟು ಬೀದಿಗಿಳಿದ ಮಹಿಳೆ ಬಗ್ಗೆ ಹರಿದಾಡುತ್ತಿರೋ ಸುಳ್ಳು ಸುದ್ದಿಯ ಸತ್ಯಾಂಶ ಇಲ್ಲಿದೆ!

    ಸದ್ಯ ವೈರಲ್​ ಆಗಿರುವ ಫೋಟೋವನ್ನು ಪಾಂಚಾಲಿ 2019, ಡಿಸೆಂಬರ್​ 30ರಂದು ಪೋಸ್ಟ್​ ಮಾಡಿದ್ದಾರೆ. “ಪ್ರೈಡ್​ 2019” ಎಂದು ಅಡಿಬರಹ ಬರೆಯಲಾಗಿದೆ. ಕೋಲ್ಕತದ ಬಾಗ್​ಬಜಾರ್​ ಬೀದಿಯಲ್ಲಿ ನಡೆದಿದ್ದು ಎಂದು ಉಲ್ಲೇಖಿಸಲಾಗಿದೆ. ಪಾಂಚಾಲಿಗೂ ಜೆಎನ್​ಯುಗೂ ಸಂಬಂಧವಿದೆ ಎನ್ನುವ ಒಂದೇ ಒಂದು ಸುಳಿವು ಇಡೀ ಫೇಸ್​ಬುಕ್​ನಲ್ಲಿ ಇಲ್ಲ.

    ಇದನ್ನೂ ಓದಿರಿ: ಕ್ಲಾಸ್​ಮೇಟ್​ ನಂಬಿ ಚಾಟಿಂಗ್​ ಮಾಡುತ್ತಿದ್ದ ಯುವತಿಗೆ ವರ್ಷದ ಬಳಿಕ ಕಾದಿತ್ತು ಬಿಗ್​ ಶಾಕ್​!

    ಕೆಲವು ನ್ಯೂಸ್​ ವೆಬ್ ಪೋರ್ಟಲ್‌ಗಳ ಪ್ರಕಾರ, ಇದು ಎಲ್​ಜಿಬಿಟಿಕ್ಯುಐಎ + ಸಮುದಾಯದ ವಾರ್ಷಿಕ ಕಾರ್ಯಕ್ರಮವಾಗಿದೆ. ಕೋಲ್ಕತ್ತಾದಲ್ಲಿ 2019 ಡಿಸೆಂಬರ್ 29 ರಂದು ನಡೆದ ಕಾರ್ಯಕ್ರಮದಲ್ಲಿ ತೆಗೆದಂತಹ ಫೋಟೋ ಆಗಿದೆ. ಈ ಜಾಥದ ವೇಳೆ ಸಿಎಎ ಮತ್ತು ಎನ್​ಎಎ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದರು. ಹೀಗಾಗಿ ಮಹಿಳೆಗೂ, ಸಿಎಎ ಮತ್ತು ಜೆಎನ್​ಯುಗೂ ಸಂಬಂಧವಿಲ್ಲ. (ಏಜೆನ್ಸೀಸ್​)

    FACTCHECK| ಕೋವಿಡ್ ಲಸಿಕೆ ಪಡೆದವರು ಇತರ ರೋಗಿಗಳನ್ನು ತಿನ್ನುತ್ತಿದ್ದಾರಾ?

    ಪ್ರತಿಭಟನೆಯಲ್ಲಿಯೇ ಪಂಬಾಬ್‌ನ ‘ರೈತ’ ಮೃತಪಟ್ಟದ್ದು ನಿಜನಾ? ವೈರಲ್‌ ಫೋಟೋದ ಹಿಂದಿನ ಅಸಲಿಯತ್ತೇನು?

    ನಾಲ್ಕು ಕಣ್ಣುಳ್ಳ ವಿಚಿತ್ರ ಜೀವಿ ಪತ್ತೆಯಾಗಿದ್ದೆಲ್ಲಿ? ಇದರ ಬಗ್ಗೆ ಹರಿದಾಡುತ್ತಿರೋ ಸ್ಫೋಟಕ ಸುದ್ದಿ ನಿಜವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts