More

    ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್​​ ಸಾವಿನ ಸುದ್ದಿ ಪ್ರಕಟಿಸಿ ತೀವ್ರ ಮುಜುಗರಕ್ಕೀಡಾದ ಪಾಕ್​ ಮುಂಚೂಣಿ ಮಾಧ್ಯಮ!

    ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ಕರೊನಾ ವೈರಸ್​ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆಯಲ್ಲಿ ಪಾಕಿಸ್ತಾನದ ಮುಂಚೂಣಿ ಮಾಧ್ಯಮ ಡಾನ್​(Dawn) ಬೋರಿಸ್​ ಜಾನ್ಸನ್​ ಸಾವಿನ ಸುದ್ದಿಯನ್ನು ಪ್ರಕಟಿಸಿ ಮುಜುಗರಕ್ಕೀಡಾಗಿದೆ.

    ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​​ಚೆಕ್​ನಲ್ಲಿ ಎಲ್ಲವು ಬಹಿರಂಗವಾಗಿದೆ. ಡಾನ್​ ಮಾಧ್ಯಮವು ತಪ್ಪು ವರದಿಯನ್ನು ಪ್ರಕಟಿಸಿದ್ದು, ಸದ್ಯ ಸೋಂಕಿಗೆ ಒಳಗಾಗಿರುವ ಜಾನ್ಸನ್​ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪು ವರದಿಯನ್ನು ಪತ್ರಕರ್ತರಾದ ನಲಿಯಾ ಇನಾಯತ್​ ಮತ್ತು ಆಟಿಕ ರೆಹಮಾನ್​ ಸೇರಿದಂತೆ ಅನೇಕ ನೆಟ್ಟಿಗರು ಗುರುತಿಸಿ, ಟೀಕಾ ಪ್ರಹಾರವನ್ನು ನಡೆಸಿದ್ದಾರೆ.

    ಅಧಿಕೃತ ಎಂದು ಖಚಿತಪಡಿಸುವ ನೀಲಿ ಮಾರ್ಕ್​ ಇಲ್ಲದ ಬಿಬಿಸಿ ಬ್ರೇಕಿಂಗ್​ ನ್ಯೂಸ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಆದಂತಹ ಜಾನ್ಸನ್​ ಸಾವಿನ ಸುದ್ದಿಯನ್ನು ನಿಜವೆಂದು ಡಾನ್​ ನಂಬಿದೆ. ಯಾವುದೇ ಪೂರ್ವಾಪರವನ್ನು ತಿಳಿಯದೇ ಟಿವಿಯಲ್ಲಿ ಬ್ರೇಕಿಂಗ್​ ನ್ಯೂಸ್​ ಆಗಿ ಪ್ರಕಟಿಸಿದೆ. ಅಲ್ಲದೆ, ಅದಕ್ಕೆ ಬಿಬಿಸಿ ಕೃಪೆ ಎಂತಲೂ ನಮೂದಿಸಿ ದೊಡ್ಡ ಪ್ರಮಾದವೊಂದನ್ನು ಮಾಡಿಕೊಂಡಿದೆ. ಟ್ವಿಟರ್​ ನಿಯಮಗಳಿಗೆ ವಿರುದ್ಧವಾಗಿದ್ದರಿಂದ ಬಿಬಿಸಿ ಬ್ರೇಕಿಂಗ್​ ನ್ಯೂಸ್​ ಹೆಸರಿನ ಟ್ವಿಟರ್ ಖಾತೆಯಲ್ಲಿದ್ದ ಟ್ವೀಟ್​ ಅನ್ನು ಸದ್ಯ ಡಿಲೀಟ್​ ಮಾ​ಡಲಾಗಿದೆ.

    ಅಸಲಿಗೆ ಬಿಬಿಸಿ ಬ್ರೇಕಿಂಗ್​ ನ್ಯೂಸ್​ ವಿಭಾಗದ ಟ್ವಿಟರ್​ ಖಾತೆ ಬಿಬಿಸಿ ಬ್ರೇಕಿಂಗ್​(@BBCBreaking) ಎಂಬ ಹೆಸರಿನಲ್ಲಿದೆ. ಆದರೆ ಫೇಕ್​ ಖಾತೆಯ ಹೆಸರು ಬಿಬಿಸಿ ಬ್ರೇಕಿ(@BBCbreaki) ಎಂದಿದೆ.

    ಇನ್ನು ಪ್ರಧಾನಿ ಬೋರಿಸ್​ ಜಾನ್ಸನ್​ ಆರೋಗ್ಯದ ಬಗ್ಗೆ ಏಪ್ರಿಲ್​ 7ರಂದು ಎಲ್​ಬಿಸಿ ರೆಡಿಯೋದಲ್ಲಿ ಯುಕೆ ಸಂಪುಟ ಸಚಿವ ಮೈಕೆಲ್​ ಗಾವ್​ ಮಾತನಾಡಿದ್ದಾರೆ. ಜಾನ್ಸನ್​ ಅವರಿಗೆ ಆಮ್ಲಜನಕ ಒದಗಿಸುವುದರೊಂದಿಗೆ ಅವರನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಆದರೆ, ಅವರಿಗೆ ವೆಂಟಿಲೇಟರ್​ ಅಳವಡಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಇಷ್ಟೇ ಅಲ್ಲದೆ, ಅನೇಕ ಪ್ರಮುಖ ಮಾಧ್ಯಮಗಳು ಜಾನ್ಸನ್​ ಅವರ ಆರೋಗ್ಯದ ಮೇಲೆ ಹೆಚ್ಚಿನ ಗಮನವಹಿಸಿ ಪ್ರತಿನಿತ್ಯ ಅವರ ಆರೋಗ್ಯ ಕುರಿತ ಮಾಹಿತಿಯನ್ನು ನೀಡುತ್ತಾ ಬರುತ್ತಿವೆ. ಇದೆಲ್ಲದರ ನಡುವೆಯೂ ಪಾಕ್​ನ ಮುಂಚೂಣಿ ಮಾಧ್ಯಮ ಡಾನ್​ ಸುದ್ದಿಯ ಅಸಲಿಯತ್ತು ತಿಳಿಯದೇ ಪ್ರಮುಖ ವ್ಯಕ್ತಿಯೊಬ್ಬರ ಸಾವಿನ ಸುದ್ದಿಯನ್ನು ಪ್ರಕಟಿಸಿ ಮುಖಭಂಗ ಅನುಭವಿಸಿದೆ. (ಏಜೆನ್ಸೀಸ್​)

    ಲಾಕ್​ಡೌನ್​ ಅವಧಿಯಲ್ಲಿ ಜನ ಮನೇಲಿ ಏನು ಮಾಡುತ್ತಿದ್ದಾರೆ…?

    ಭಾರತದಲ್ಲಿ ಒಂದೇ ದಿನ 32 ಬಲಿ, 5194 ಸೋಂಕಿತರು: ಸಾವಿನ ಸಂಖ್ಯೆ 149ಕ್ಕೆ ಏರಿಕೆ, 402 ಮಂದಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts