More

    ಚುನಾವಣಾ ಕರ್ತವ್ಯಕ್ಕೆ ತೆರಳುವಾಗ ಬಸ್​ ಉರುಳಿಬಿದ್ದು 9 ಯೋಧರು ಹುತಾತ್ಮ: ಸುದ್ದಿಯ ಸತ್ಯಾಂಶವೇ ಬೇರೆ..!

    ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ನಡುವೆಯೇ ಉರುಳಿಬಿದ್ದಿರುವ ಬಸ್​ ಒಂದನ್ನು ಸುತ್ತುವರಿದಿರುವ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯೋಧರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಬಿಹಾರದ ದರ್ಭಂಗ್​ ಜಿಲ್ಲೆಯ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ವೇಳೆ ಬಿಎಸ್​ಎಫ್​ ಯೋಧರಿಂದ ತುಂಬಿದ್ದ ಬಸ್​ ಉರುಳಿಬಿದ್ದು 9 ಯೋಧರು ಮೃತಪಟ್ಟಿದ್ದಾರೆ ಎಂದು ಫೋಟೋಗೆ ಅಡಿಬರಹ ಬರೆದು ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಲ್ಲದೆ, ಜೈ ಹಿಂದ್​, ಹುತಾತ್ಮ ಯೋಧರಿಗೆ ನನ್ನದೊಂದು ಸೆಲ್ಯೂಟ್​ ಎಂದೂ ಬರೆಯಲಾಗಿದೆ.

    ಚುನಾವಣಾ ಕರ್ತವ್ಯಕ್ಕೆ ತೆರಳುವಾಗ ಬಸ್​ ಉರುಳಿಬಿದ್ದು 9 ಯೋಧರು ಹುತಾತ್ಮ: ಸುದ್ದಿಯ ಸತ್ಯಾಂಶವೇ ಬೇರೆ..!

    ಆದರೆ, ಇದು ಸುಳ್ಳು ಸುದ್ದಿ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಸೂಕ್ತ ಕೀ ವರ್ಡ್​ ಸಹಾಯದಿಂದ ಹುಡುಕಾಡಿದಾಗ ಅಪಘಾತದಲ್ಲಿ 9 ಬಿಎಸ್​ಎಫ್​ ಯೋಧರು ಮೃತಪಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ವರದಿ ಪ್ರಕಟವಾಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆದರೆ, ವಾಸ್ತವ ಏನೆಂದರೆ ನ. 4ರಂದು ಬಿಹಾರದ ದರ್ಭಂಗ್​-ಮುಜಾಫರ್​ಪುರ್​ ಗಡಿಯಲ್ಲಿ ಬಿಎಸ್​ಎಫ್​ ಯೋಧರಿದ್ದ ಬಸ್​ ಉರುಳಿಬಿದ್ದಿದ್ದು ಸತ್ಯ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಇದನ್ನೂ ಓದಿ: ಮಸೀದಿಯಲ್ಲಿ ಹೋಮ ಮಾಡುತ್ತೇವೆ! ವಿವಾದಾತ್ಮಕ ಹೇಳಿಕೆ ಹಿಂಪಡೆದ ವಿಎಚ್​ಪಿ ನಾಯಕಿ

    ಈ ಸಂಬಂಧ ಹಿಂದೂಸ್ತಾನ್​ ವೆಬ್​ಸೈಟ್​ನಲ್ಲಿ ಸುದ್ದಿ ಪ್ರಕಟವಾಗಿದ್ದು, ನ. 4ರಂದು ನಡೆದ ಅವಘಡದಲ್ಲಿ ಬಸ್​ ಚಾಲಕ ಸೇರಿದಂತೆ 10 ಬಿಎಸ್​ಎಫ್​ ಯೋಧರು ಗಾಯಗೊಂಡಿರುವುದು ವರದಿಯಾಗಿದೆ. ರಸ್ತೆಯಲ್ಲಿದ್ದ ಸುಮಾರು 10 ಅಡಿ ಆಳದ ಗುಂಡಿಗೆ ಚಕ್ರಗಳು ಸಿಲುಕಿ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್​ ಉರುಳಿಬಿದ್ದಿತ್ತು. ಯೋಧರು ಚುನಾವಣಾ ಕರ್ತವ್ಯಕ್ಕೆಂದು ಸಿಂಘವಾಡಾಗೆ ತೆರಳಿದ್ದ ವೇಳೆ ಮುಜಾಫರ್​ಪುರ್​ ಜಿಲ್ಲೆಯ ಕತ್ರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಬುಧಕರ್​ ಗ್ರಾಮದ ಬಳಿಯ ಸಿಂಘವಾಡಾ-ಬರ್ರಿ ಕೊಥಿ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು.

    ಅನೇಕ ವೆಬ್​ಸೈಟ್​ಗಳು ಈ ಸಂಬಂಧ ಸುದ್ದಿ ಪ್ರಕಟಿಸಿವೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಆಜ್​ ತಕ್​ ಮಾಧ್ಯಮ ನ.5ರಂದು ಸುದ್ದಿ ಪ್ರಸಾರ ಮಾಡಿತು. ಸದ್ಯ ಯೋಧರು ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾವು ಸಂಭವಿಸಿಲ್ಲ ಎಂದು ಬಿಎಸ್​ಎಫ್​ ಮೂಲಗಳು ಸಹ ಮಾಹಿತಿ ಖಚಿತಪಡಿಸಿವೆ. ಹೀಗಾಗಿ ಸಾಮಾಜಿಕ ವೈರಲ್​ ಆಗಿರುವ ಫೋಟೋ ಸತ್ಯವೇ ಆದರೆ, ಅದರ ಬಗ್ಗೆ ಹರಿಬಿಡಲಾಗಿರುವ ಸುದ್ದಿ ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​​ನಿಂದ ಬಯಲಾಗಿದೆ. (ಏಜೆನ್ಸೀಸ್​)

    ಇಷ್ಟರ ಮಟ್ಟಿಗೆ ಪೂರ್ಣಗೊಂಡಿತಾ ಅಯೋಧ್ಯೆ ರಾಮಮಂದಿರ ನಿರ್ಮಾಣ? ಯಾವುದು ಈ ದೇವಾಲಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts