More

    FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್​ಪೆಕ್ಟರ್​: ಸುದ್ದಿಯ ಅಸಲಿಯತ್ತೇ ಬೇರೆ!

    ನವದೆಹಲಿ: ಅಪ್ಪ ರಿಕ್ಷಾ ಓಡಿಸುವ ಏರಿಯಾದಲ್ಲೇ ಮಗಳು ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ನೇಮಕವಾಗಿದ್ದಾರೆ ಎಂಬ ವಾದದೊಂದಿಗೆ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಈ ಸ್ಟೋರಿ ಹಿಂದಿನ ಸತ್ಯಾಂಶ ಬೇರೆಯಾಗಿದೆ.

    ಐಎಎಸ್​ ಕಿ ತಯಾರಿ (IAS Ki Taiyari) ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ನಗುಮುಖದಿಂದ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ಫೋಟೋವನ್ನು ಅಪ್​ಲೋಡ್​ ಮಾಡಿ, ಹಿಂದಿ ಭಾಷೆಯಲ್ಲಿ ಅಡಿಬರಹ ಬರೆಲಾಗಿದ್ದು, ಅದರ ಸಾರ ಹೀಗಿದೆ. “ರಿಕ್ಷಾ ಚಾಲಕನ ಮಗಳು ತಂದೆ ರಿಕ್ಷಾ ಓಡಿಸುವ ಏರಿಯಾದಲ್ಲೇ ಇನ್​ಸ್ಪೆಕ್ಟರ್​ ಆಗಿದ್ದಾರೆ. ಇವರು ಅಭಿನಂದನೆಗೆ ಅರ್ಹರು” ಎಂದಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್​ ಸಹ ಆಗಿದ್ದು, ನೀವಿಲ್ಲಿ ಕಾಣಬಹುದಾಗಿದೆ.

    ಇದನ್ನೂ ಓದಿ: ಅರಬ್‌ ದೇಶಕ್ಕೂ ನಿದ್ದೆಗೆಡಿಸಿರೋ ‘ಚಿನ್ನದ ರಾಣಿ’- ಗೋಳೋ ಎನ್ನುತ್ತಿರುವ ಅಧಿಕಾರಿಗಳು

    FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್​ಪೆಕ್ಟರ್​: ಸುದ್ದಿಯ ಅಸಲಿಯತ್ತೇ ಬೇರೆ!

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದೆಲ್ಲವನ್ನೂ ಸತ್ಯ ಎನ್ನಲಾಗುವುದಿಲ್ಲ. ಹೀಗಾಗಿ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ವೈರಲ್​ ಸುದ್ದಿಯ ಅಸಲಿಯತ್ತು ಬಹಿರಂಗವಾಗಿದೆ. ಅಂದಹಾಗೆ ಫೋಟೋದಲ್ಲಿರುವ ಮಹಿಳಾ ಪೊಲೀಸ್​ ಅಧಿಕಾರಿಯ ಹೆಸರು ಪ್ರಿಯಾಂಕಾ ನೇಗಿ. ಇವರು ಹಿಮಾಚಲ ಪ್ರದೇಶದ ಬಿಲಾಸ್ಪುರ್​ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಆಗಿದ್ದು, ವೈರಲ್​ ಪೋಸ್ಟ್​ನಲ್ಲಿ ಹೇಳಿರುವಂತೆ ಇವರ ತಂದೆ ರಿಕ್ಷಾ ಚಾಲಕ ಎನ್ನುವುದು ಶುದ್ಧ ಸುಳ್ಳು.

    ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ಫೋಟೋ ಹಾಕಿ ಹುಡುಕಾಡಿದಾಗ, ಪ್ರಿಯಾಂಕಾ ನೇಗಿ ಹೆಸರಿನ ಫೇಸ್​ಬುಕ್ ಪೇಜ್​ ಪತ್ತೆಯಾಯಿತು. ಮೇ 8ರಂದೇ ಈ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದ್ದು, ತುಂಬಾ ವೈರಲ್​ ಆಗಿದೆ. ಪೇಜ್​ನಲ್ಲಿ ಉಲ್ಲೇಖವಾಗಿರುವ ಪ್ರಕಾರ ಪ್ರಿಯಾಂಕಾ ಪೊಲೀಸ್​ ಮಾತ್ರವಲ್ಲದೇ ಓರ್ವ ಅಥ್ಲೀಟಿ ಮತ್ತು ಕಬ್ಬಡಿ ಆಟಗಾರ್ತಿಯು ಆಗಿದ್ದಾರೆ.

    ಇದನ್ನೂ ಓದಿ: ಹೊಸಬರನ್ನು ಯಾಕೆ ಪರಿಚಯಿಸ್ತಾರೆ ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ …

    ಅಂತರ್ಜಾಲದಲ್ಲಿ ಪ್ರಿಯಾಂಕಾ ಕಬ್ಬಡಿ ಆಟಗಾರ್ತಿ ಎನ್ನುವ ಸಂಬಂಧ ಅನೇಕ ಮಾಧ್ಯಮ ವರದಿಗಳು ಪತ್ತೆಯಾಗಿವೆ. ಇವರು ಹಿಮಾಚಲ ಪ್ರದೇಶ ಮಹಿಳಾ ಕಬ್ಬಡಿ ತಂಡದ ಕ್ಯಾಪ್ಟನ್​ ಸಹ ಆಗಿದ್ದಾರೆ. ಅಲ್ಲದೆ, 2018ರ ಏಷಿಯನ್​ ಗೇಮ್ಸ್​ನಲ್ಲಿ ಇವರ ತಂಡ ಬೆಳ್ಳಿ ಪದಕವನ್ನು ಗೆದ್ದಿದೆ. ಆದರೆ, ಅವರ ತಂದೆ ಆಟೋ ರಿಕ್ಷಾ ಎನ್ನುವುದನ್ನು ಸಾಬೀತು ಮಾಡುವ ಯಾವೊಂದು ವರದಿಯು ಸಹ ಪತ್ತೆಯಾಗಿಲ್ಲ.

    Posted by Priyanka Negi on Tuesday, June 16, 2020

    ಪ್ರಿಯಾಂಕಾ ಕುಟುಂಬ ಹಿಮಾಚಲ ಪ್ರದೇಶದ ಸಿರ್ಮೌರ್ ಮೂಲದವರು. ತಮ್ಮ ತವರಿನಿಂದ 200 ಕಿ.ಮೀ. ದೂರದಲ್ಲಿ ಅದರ ಪೋಸ್ಟಿಂಗ್​ ಇದೆ. ಇಂಡಿಯಾ ಟುಡೆ ಖುದ್ದಾಗಿ ಅವರನ್ನು ಸಂಪರ್ಕಿಸಿ, ವೈರಲ್​ ಫೋಟೋ ಕುರಿತು ಕೇಳಿದ್ದು ಅದಕ್ಕೆ ಉತ್ತರಿಸಿದ ಪ್ರಿಯಾಂಕಾ, ನಾನೊಬ್ಬ ರಿಕ್ಷಾ ಚಾಲಕನ ಮಗಳು ಎಂದು ಹೇಳಿ ನನ್ನ ಫೋಟೋವನ್ನು ಅನೇಕರು ವೈರಲ್​ ಮಾಡಿರುವ ಬಗ್ಗೆ ನನಗೆ ತಿಳಿದಿದೆ. ಆದರೆ, ಇದು ನಿಜವಲ್ಲ. ನನ್ನ ಕುಟುಂಬದ ಬಗ್ಗೆ ಜನರು ಬರೆದಿರುವ ಕುರಿತು ನನಗೆ ಬೇಸರವಾಗಿದೆ. ನನ್ನ ಕುಟುಂಬವು ಕೆಲವು ಅಂಗಡಿಗಳನ್ನು ಹೊಂದಿದೆ ಮತ್ತು ಅದು ನಮ್ಮ ಕುಟುಂಬದ ವ್ಯವಹಾರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇಲ್ಲಿಗೆ ತಿಳಿಯುವುದೇನೆಂದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ನೇಗಿ ಕುರಿತು ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಹಾಗೂ ಇದನ್ನು ಕೆಲವರು ಪೂರ್ವಪರ ಅರಿಯದೇ ಮನಸ್ಸಿಗೆ ಬಂದದ್ದನ್ನು ಬರೆದಿದ್ದಾರೆ ಎಂಬುದು ಇಲ್ಲಿಗೆ ಸ್ಪಷ್ಟವಾಗುತ್ತದೆ. (ಏಜೆನ್ಸೀಸ್​)

    Posted by Priyanka Negi on Saturday, May 9, 2020

    ಇದನ್ನೂ ಓದಿ: ಕಟ್ಟಡದಿಂದ ಬಿದ್ದ ಕಾರ್ಮಿಕನ ತೊಡೆಸಂದು ಸೀಳಿದ ಕಬ್ಬಿಣದ ರಾಡ್: ಸಾವನ್ನೇ ಜಯಿಸಿದ ಅದೃಷ್ಠಶಾಲಿ!

    VIDEO| ಪಾಕ್​ ಧ್ವಜ ಧರಿಸಿ ಭಾರತ ಬಾವುಟವನ್ನು ಕಾಲಲ್ಲಿ ಮೆಟ್ಟಿ ನಿಂತಿರುವ ದ್ರೋಹಿ ಯಾರೆಂಬುದು ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts