More

    ವ್ಯಾಕ್ಸಿನ್ ಹಾಕಿಸಿಕೊಂಡವರು 2 ವರ್ಷದಲ್ಲಿ ಸಾಯುತ್ತಾರೆ ಎಂಬ ಸಂದೇಶ ಫೇಕ್; ಅದನ್ನು ನಂಬಬೇಡಿ..

    ನವದೆಹಲಿ: ಕರೊನಾ ಸೋಂಕನ್ನು ದೂರವಿರಿಸುವ ಉದ್ದೇಶದಿಂದ ಮಾರುಕಟ್ಟೆಗೆ ಪರಿಚಯಿಸಲಾಗಿರುವ ವ್ಯಾಕ್ಸಿನ್‌ಗಳನ್ನು ಹಾಕಿಸಿಕೊಂಡವರು ಎರಡು ವರ್ಷಗಳಲ್ಲಿ ಸಾಯುತ್ತಾರೆಯೇ? ಆತಂಕ ಹುಟ್ಟಿಸುವ ಇಂಥದೊಂದು ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಅದು ನಿಜವಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

    ಮಂಗಳವಾರ ಈ ತಪ್ಪು ಸಂದೇಶ ಲಕ್ಷಾಂತರ ಜನರಿಗೆ ಫಾರ್ವರ್ಡ್ ಆಗಿ ವೈರಲ್ ಆಗುತ್ತಿದ್ದಂತೆಯೇ ಆ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದ ಕೇಂದ್ರ ಸರ್ಕಾರದ ಪ್ರೆಸ್ ಇನ್‌ಫರ್ಮೇಶನ್ ಬ್ಯೂರೋ (ಪಿಐಬಿ), ‘ಇದೊಂದು ನಕಲಿ ಸಂದೇಶ. ಇದನ್ನು ಯಾರೂ ನಂಬಬೇಡಿ’ ಎಂದು ಸ್ಪಷ್ಟಪಡಿಸಿದೆ.

    ‘‘ವ್ಯಾಕ್ಸಿನ್ ಹಾಕಿಸಿಕೊಂಡ ಎಲ್ಲ ಜನರೂ ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬುದಾಗಿ ಫ್ರಾನ್ಸ್‌ನ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೂಕ್ ಮಾಂಟನೀಯರ್ ಎಂಬುವವರು ಎಚ್ಚರಿಕೆ ನೀಡಿದ್ದಾರೆ’’ ಎಂದು ಆ ವೈರಲ್ ಸಂದೇಶದಲ್ಲಿ ಹೇಳಲಾಗಿತ್ತು. ಜನರು ವ್ಯಾಕ್ಸಿನೇಷನ್‌ಗೆ ನಾ ಮುಂದು ತಾಮುಂದು ಎಂದು ಸಾಲುಗಟ್ಟಿ ನಿಲ್ಲುತ್ತಿರುವ ಈ ಸಂದರ್ಭದಲ್ಲಿ ಈ ಸಂದೇಶ ವ್ಯಾಪಕ ತಪ್ಪು ಕಲ್ಪನೆಗೆ ಮತ್ತು ಆತಂಕಕ್ಕೆ ಕಾರಣವಾಗಿತ್ತು. ‘‘ಕೋವಿಡ್ ವ್ಯಾಕ್ಸಿನ್‌ಗಳು ಸಂಪೂರ್ಣ ಸುರಕ್ಷಿತವಾಗಿವೆ. ಇಂತಹ ಸುಳ್ಳು ಸಂದೇಶವನ್ನು ಯಾರೂ ಫಾರ್ವರ್ಡ್ ಮಾಡಬೇಡಿ’’ ಎಂದು ಪಿಐಬಿ ಸಾರ್ವಜನಿಕರಿಗೆ ಮನವಿ ಮಾಡಿದೆ.

    ಆಕಾಶ ನೋಡಲು ರೆಡಿಯಾಗಿ: ಸೂಪರ್‌ಮೂನ್, ರೆಡ್‌ಮೂನ್, ಚಂದ್ರಗ್ರಹಣ ಎಲ್ಲಾ ಒಂದೇ ದಿನ

    ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts