More

    ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ, ಮುಖರಹಿತವನ್ನಾಗಿಸಲು ಪ್ರಯತ್ನ: ಪ್ರಧಾನಿ ಮೋದಿ

    ನವದೆಹಲಿ: ತೆರಿಗೆ ವ್ಯವಸ್ಥೆಯಲ್ಲಿ ತಡೆರಹಿತ, ನೋವುರಹಿತ ಹಾಗೂ ಮುಖರಹಿತ ಮಾಡುವುದೇ ನಮ್ಮ ಪ್ರಯತ್ನ ಎಂದ ಪ್ರಧಾನಿ ಮೋದಿ ಹೇಳಿದರು.

    ನೂತನ ತೆರಿಗೆ ಸುಧಾರಣೆ ಯೋಜನೆಗೆ ಚಾಲನೆ ನೀಡಿದ ಮಾತನಾಡಿದ ಅವರು ನೂತನ ಯೋಜನೆಯು ಕಳೆದ ಆರು ವರ್ಷಗಳಲ್ಲಿ ಕೈಗೊಂಡ ನೇರ ತೆರಿಗೆ ಸುಧಾರಣೆಗಳ ಪ್ರಯಾಣವನ್ನು ಯಶಸ್ವಿಯಾಗಿ ಮುನ್ನೆಡೆಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

    ನೂತನ ತೆರಿಗೆ ವ್ಯವಸ್ಥೆಯು ಮುಖರಹಿತ ಮೌಲ್ಯಮಾಪನ, ಮುಖರಹಿತ ಮನವಿ ಮತ್ತು ತೆರಿಗೆದಾರರ ಚಾರ್ಟರ್​ನಂತಹ ಅತಿ ದೊಡ್ಡ ಸುಧಾರಣೆಯಾಗಿದೆ. ಮುಖರಹಿತ ಮೌಲ್ಯಮಾಪನ ಹಾಗೂ ತೆರಿಗೆದಾರರ ಚಾರ್ಟ್​ ಇಂದಿನಿಂದಲೆ ಜಾರಿಗೆ ಬರಲಿದ್ದು, ಮುಖರಹಿತ ಮನವಿ ಸೇವೆಯೂ ಮುಂದಿನ ಸೆಪ್ಟೆಂಬರ್​ 25ರಿಂದ ದೊರೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಈ ಹಿಂದೆ ಕೇವಲ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದ್ದರಷ್ಟೇ. ಕೆಲವೊಮ್ಮೆ ನಿರ್ಧಾರಗಳನ್ನು ಬಲವಂತ ಅಥವಾ ಒತ್ತಡದಿಂದ ತೆಗೆದುಕೊಳ್ಳಲಾಗುತ್ತಿತ್ತು ಹಾಗೂ ಅವುಗಳನ್ನೇ ಸುಧಾರಣೆಗಳು ಎಂದು ಕರೆಯಲಾಗುತ್ತಿತ್ತು. ಈ ಕಾರಣದಿಂದಾಗಿಯೇ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ, ಈಗ ಈ ಆಲೋಚನೆ ಮತ್ತು ವಿಧಾನ ಎರಡೂ ಬದಲಾಗಿದೆ ಎಂದು ಪರೋಕ್ಷವಾಗಿ ಹಿಂದಿನ ಸರ್ಕಾರಕ್ಕೆ ಚಾಟಿ ಬೀಸಿದರು.

    ತೆರಿಗೆ ವ್ಯವಸ್ಥೆಯಲ್ಲಿ ತಡೆರಹಿತ, ನೋವುರಹಿತ ಹಾಗೂ ಮುಖರಹಿತ ಮಾಡುವುದೇ ನಮ್ಮ ಪ್ರಯತ್ನ ಎಂದ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿ ಪಥದಲ್ಲಿ ತೆರಿದಾರರ ಚಾರ್ಟರ್​ ಒಂದು ದೊಡ್ಡ ಹೆಜ್ಜೆಹಾಗಿದೆ ಎಂದರು.

    ಕಳೆದ ಆರು ವರ್ಷಗಳಲ್ಲಿ ತೆರಿಗೆ ಆಡಳಿತದಲ್ಲಿ ಹೊಸ ಆಡಳಿತ ಮಾದರಿಯ ವಿಕಸನಕ್ಕೆ ಸಾಕ್ಷಿಯಾಗಿದೆ ಭಾರತ ಸಾಕ್ಷಿಯಾಗಿದೆ. ನಾವು ತೆರಿಗೆ, ಸಂಕೀರ್ಣತೆ, ದಾವೆ ಹಾಕುವುದನ್ನು ಕಡಿತಗೊಳಿಸಿದ್ದೇವೆ ಮತ್ತು ಪಾರದರ್ಶಕತೆ, ತೆರಿಗೆ ಅನುಸರಣೆ ಮತ್ತು ತೆರಿಗೆದಾರರ ಮೇಲಿನ ನಂಬಿಕೆಯನ್ನು ಹೆಚ್ಚಿಸಿದ್ದೇವೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts