More

    ಅತ್ತೆ ಸೊಸೆ ಫೇಸ್​ಬುಕ್​ ವಾರ್​! ಅನ್​ಫ್ರೆಂಡ್​ ಮಾಡಿದ ಸೊಸೆಯನ್ನು ಮನೆಯೊಳಗೆ ಸೇರಿಸದ ಅತ್ತೆ ಮಾವ

    ವಾಷಿಂಗ್ಟನ್​: ಸಾಮಾಜಿಕ ಜಾಲತಾಣ ಎಲ್ಲ ಸಮಯದಲ್ಲೂ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಎಷ್ಟೋ ಜನರು ಸೋಶಿಯಲ್​ ಮೀಡಿಯಾಗಳಿಂದಲೇ ಜಗಳವಾಡಿಕೊಂಡಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಲೇ ಇರುತ್ತೇವೆ. ಫೇಸ್​ಬುಕ್​ನಲ್ಲಿ ಫ್ರೆಂಡ್ಸ್​ ಆಗಿದ್ದ ಅತ್ತೆ ಸೊಸೆ, ಅದೇ ಫೇಸ್​ಬುಕ್​ನಿಂದಾಗಿ ಸಂಬಂಧವನ್ನೇ ಮುರಿದುಕೊಂಡಿರುವ ಘಟನೆಯೊಂದು ನಡೆದಿದೆ.

    ಇದನ್ನೂ ಓದಿ: VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ…

    40 ವರ್ಷದ ಆ ಮಹಿಳೆಗೆ ಆಕೆಯ ಅತ್ತೆ ಮಾವ ಫೇಸ್​ಬುಕ್​ನಲ್ಲಿ ಫ್ರೆಂಡ್​ ಆಗಿದ್ದರಂತೆ. ಅತ್ತೆ ಮಾವನಿಂದ ದೂರದ ಊರಲ್ಲಿ ಗಂಡ ಮತ್ತು ಮಗನೊಂದಿಗಿದ್ದ ಮಹಿಳೆ ಆಗಾಗ ಕೆಲ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತಿದ್ದಳಂತೆ. ಮಗನೊಂದಿಗೆ ಮತ್ತು ಗಂಡನೊಂದಿಗೆ ಹಾಕುತ್ತಿದ್ದ ಫೋಟೋಗಳಿಗೆ ಆಕೆಯ ಮಾವ ಒಳ್ಳೆಯ ರೀತಿಯಲ್ಲಿ ಕಾಮೆಂಟ್​ ಹಾಕುತ್ತಿದ್ದರಂತೆ. ಆದರೆ ಆಕೆ ಫ್ರೆಂಡ್ಸ್​ ಜತೆ ಇರುವ ಫೋಟೋಗಳನ್ನು ಹಾಕಿದರೆ ಬೈಯುವ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದರಂತೆ. ಕೆಲ ಫೋಟೋಗಳಿಗೆ ನಿನ್ನ ಮಗ ಈ ಫೋಟೋ ನೋಡದಿದ್ದರೆ ಸಾಕು, ಏನು ಕುಡಿದು ಫೋಟೋ ತೆಗೆಸಿಕೊಂಡಿದ್ದೀಯಾ ಎಂದೆಲ್ಲ ಹಾಕಿ ಆಕೆಯ ಮನಸ್ಸಿಗೆ ನೋವುಂಟು ಮಾಡಿದ್ದರಂತೆ. ಇದರಿಂದ ನೋವಾದ ಮಹಿಳೆ ಅತ್ತೆ ಮಾವನನ್ನು ಫೇಸ್​ಬುಕ್​ನಲ್ಲಿ ಅನ್​ಫ್ರೆಂಡ್​ ಮಾಡಿದ್ದಾಳೆ.

    ಒಂದು ದಿನ ಅತ್ತೆ ಮಹಿಳೆಗೆ ಕರೆ ಮಾಡಿದ್ದಾಳೆ. ನಮ್ಮನ್ನು ಫೇಸ್​ಬುಕ್​ನಲ್ಲಿ ಏಕಾಗಿ ಅನ್​ಫ್ರೆಂಡ್​ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ನನ್ನ ಫೇಸ್​ಬುಕ್​ನಲ್ಲಿ ಕೇವಲ ಸ್ನೇಹಿತರನ್ನು ಇಟ್ಟುಕೊಳ್ಳಲು ಬಯಸುತ್ತಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಅದಕ್ಕೆ ಸಿಟ್ಟಾದ ಅತ್ತೆ ಮಾವ ಮಹಿಳೆಯೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಆಕೆ ತಮ್ಮ ಮನೆಗೆ ಬಾರದಂತೆಯೂ ತಡೆದಿದ್ದಾರೆ. ಮಗ ಮತ್ತು ಮೊಮ್ಮಗ ಬಂದರೆ ಸಾಕು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲಾಲೂ ಪ್ರಸಾದ್​ ಯಾದವ್​ ಮುಖ ಊದಿದೆ, ಶ್ವಾಸಕೋಶದಲ್ಲಿ ನೀರು ತುಂಬಿದೆ! ದೆಹಲಿಯ ಏಮ್ಸ್​ಗೆ ಶಿಫ್ಟ್​ ಸಾಧ್ಯತೆ

    ಅವರಿಗೆ 70 ವರ್ಷ ವಯಸ್ಸಾಗಿದೆ. ಆದರೂ ಮಕ್ಕಳಂತೆ ಮಾಡುತ್ತಾರೆ. 70 ದಾಟಿದ ಮೇಲೆ ಅವರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು, ಬದಲಾಗಿ ಸೋಶಿಯಲ್​ ಮೀಡಿಯಾ ಬಗ್ಗೆ ಅಲ್ಲ. ನಾನಿನ್ನೂ 40 ವರ್ಷದ ಮಹಿಳೆ. ನನಗೆ ನನ್ನ ಆಯ್ಕೆಯನ್ನು ಆರಿಸಿಕೊಳ್ಳುವ ಅಧಿಕಾರವಿದೆ. ಯಾವುದೇ ಕಾರಣಕ್ಕೂ ನಾನು ಅವರನ್ನು ಮತ್ತೆ ಫ್ರೆಂಡ್​ ಮಾಡಿಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡದಿದ್ದರೆ ಅದು ಅವರ ತಪ್ಪು ಎಂದು ಮಹಿಳೆ ವಾದಿಸಿದ್ದಾರೆ. ಇತ್ತ ಅತ್ತೆ ಮಾವ ಕೂಡ ಮಹಿಳೆಯ ವಿರುದ್ಧ ವಾದಿಸಿದ್ದಾರೆ. ಆಕೆ ನಮ್ಮನ್ನು ಫ್ರೆಂಡ್​​ ಮಾಡಿಕೊಳ್ಳುವ ತನಕ ಅವಳು ನಮ್ಮ ಸೊಸೆಯಲ್ಲ ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್​)

    ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

    ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts