More

    ವಧುವರರಿಗಾಗಿ ಮಾರುಕಟ್ಟೆಗೆ ಬಂತು ಬೆಳ್ಳಿಯ ಮಾಸ್ಕ್!

    ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಈಗ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಸರ್ಕಾರಿ ಮಾರ್ಗಸೂಚಿ ಅನುಸಾರ, ಸರಳವಾಗಿ ವಿವಾಹವಾಗುವ ಜೋಡಿಯೂ ಮಾಸ್ಕ್ ಧರಿಸದೇ ಹಸೆಮಣೆ ಏರುವಂತಿಲ್ಲ.

    ಇದನ್ನು ಮನಗಂಡ ಮಹಾರಾಷ್ಟ್ರದ ಕೊಲ್ಹಾಪುರದ ಆಭರಣ ವ್ಯಾಪಾರಿಯೊಬ್ಬರು, ವಧು-ವರನಿಗಾಗಿ ಬೆಳ್ಳಿ ಮಾಸ್ಕ್ ತಯಾರಿಸಿದ್ದಾರೆ. 50 ಗ್ರಾಂ. ಬೆಳ್ಳಿಯಲ್ಲಿ ತಯಾರಿಸಿದ ಮಾಸ್ಕ್‌ಗೆ ತಲಾ 2,500 ರೂ. ದರ ನಿಗದಿಪಡಿಸಲಾಗಿದೆ.

    ಇದನ್ನೂ ಓದಿ: ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?

    ‘ಕರೊನಾ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದೆವು. 3ನೇ ಹಂತದ ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ಅಂಗಡಿ ತೆರೆಯಲು ಸರ್ಕಾರ ಅವಕಾಶ ಕೊಟ್ಟರೂ, ಖರೀದಿಗೆ ಗ್ರಾಹಕರು ಇರಲಿಲ್ಲ. ಆದರೆ, ಲಾಕ್‌ಡೌನ್ ಇದ್ದರೂ ಸರಳವಾಗಿ ವಿವಾಹಗಳು ನೆರವೇರುತ್ತಿವೆ. ಹಾಗಾಗಿ, ವಧು-ವರನಿಗಾಗಿ ಆಕರ್ಷಕ ಮಾಸ್ಕ್ ತಯಾರಿಸಬಹುದೇ ಎನ್ನುವ ಆಲೋಚನೆ ಬಂತು. ತಡಮಾಡದೇ ಮೂವರು ಕಾರ್ಮಿಕರೊಂದಿಗೆ ತಯಾರಿಸಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಒಂದು ವಾರದೊಳಗೆ ಮೂರು ಜೋಡಿ ಮಾಸ್ಕ್ ಖರೀದಿಸಿದ್ದಾರೆ. ಈಗ ಎರಡು ಜೋಡಿಯಿಂದ ಮಾಸ್ಕ್ ಖರೀದಿಗೆ ಬೇಡಿಕೆ ಬಂದಿದೆ’ ಎಂದು ಆಭರಣ ವ್ಯಾಪಾರಿ ಸಂದೀಪ ಸಾಂಗಾವಕರ ‘ವಿಜಯವಾಣಿ’ಗೆ ತಿಳಿಸಿದರು.

    ಇದನ್ನೂ ಓದಿ: ಮೀನು ಹಿಡಿಯುವಾಗ ನದಿಗೆ ಜಾರಿದ್ದ ಮೊಬೈಲ್ 8 ತಿಂಗಳ ಬಳಿಕ ಪತ್ತೆ: ಮಾಲೀಕನಿಗೆ ಕಾದಿತ್ತೊಂದು ಸರ್ಪ್ರೈಸ್​​!​

    ‘ಆಭರಣ ವ್ಯಾಪಾರಿಗಳು ಗ್ರಾಹಕರೇ ಇಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಬದಲಿಗೆ, ಜನರ ಮನದಾಳ ಅರಿತು ನಾವೇ ವ್ಯಾಪಾರಕ್ಕೆ ಪೂರಕವಾಗಿ ಅವಕಾಶ ಸೃಷ್ಟಿಸಿಕೊಳ್ಳಬೇಕು’ ಎನ್ನುತ್ತಾರೆ ಅವರು.

    ಏಳು ಕೋಳಿಗಳು ಇಟ್ಟ ಮೊಟ್ಟೆಗಳ ಒಳಗೊಂದು ವಿಚಿತ್ರ; ಮಾಲೀಕನಿಗೆ ಅಚ್ಚರಿ…ಭಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts