More

    ಐಪಿಎಲ್-14: ಇಂದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೋಲ್ಕತ ನೈಟ್‌ರೈಡರ್ಸ್‌ ಸವಾಲು

    ಶಾರ್ಜಾ: ಸತತ ಜಯದೊಂದಿಗೆ ಪ್ಲೇಆಫ್​ ಸ್ಥಾನವನ್ನು ಈಗಾಗಲೆ ಬಹುತೇಕ ಖಾತ್ರಿಪಡಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್-14ರಲ್ಲಿ ಮಂಗಳವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಎದುರಿಸಲಿದೆ. ಅರಬ್ ನಾಡಿನಲ್ಲಿ ಸತತ 2 ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಮುಗ್ಗರಿಸಿರುವ ಇವೊಯಿನ್ ಮಾರ್ಗನ್ ಪಡೆ, ಪ್ಲೇಆಫ್​ ಹಂತಕ್ಕೇರುವ ಆಸೆ ಜೀವಂತವಿಡಲು ಮತ್ತೆ ಗೆಲುವಿನ ಹಾದಿಗೆ ಮರಳಬೇಕಾಗಿದೆ. ಈ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶ ರಿಷಭ್ ಪಂತ್ ಬಳಗದ ಮುಂದಿದೆ. ಆಲ್ರೌಂಡರ್ ಆಂಡ್ರೆ ರಸೆಲ್ ಗಾಯಗೊಂಡಿರುವುದರಿಂದ ಈ ಪಂದ್ಯದಲ್ಲಿ ಆಡುವ ಬಗ್ಗೆ ಖಚಿತತೆ ಇಲ್ಲ. ರಸೆಲ್ ಗೈರಾದರೆ ಕೆಕೆಆರ್ ಹಿನ್ನಡೆ ಎದುರಿಸಲಿದೆ.

    ಟೂರ್ನಿಯ ಮೊದಲ ಚರಣದಲ್ಲಿ ತೋರಿದ ಅಮೋಘ ನಿರ್ವಹಣೆಯನ್ನೇ ಡೆಲ್ಲಿ ತಂಡ ಯುಎಇಯಲ್ಲೂ ಮುಂದುವರಿಸಿದ್ದರೆ, ಕೆಕೆಆರ್ ತಂಡ ಮೊದಲ ಚರಣಕ್ಕಿಂತ 2ನೇ ಚರಣದಲ್ಲೇ ಉತ್ತಮ ಆರಂಭವನ್ನು ಕಂಡಿದೆ. ಕಳೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋಲು ಕಂಡ ನಡುವೆಯೂ ಕೆಕೆಆರ್ ಕೊನೇ ಎಸೆತದವರೆಗೆ ನಿಕಟ ಹೋರಾಟವನ್ನೇ ಪ್ರದರ್ಶಿಸಿತ್ತು. ರಸೆಲ್ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ 4 ಓವರ್ ಕೋಟಾ ಪೂರ್ಣಗೊಳಿಸದೆ ಮೈದಾನ ತೊರೆಯದಿದ್ದರೆ, ಕೆಕೆಆರ್ ತಂಡ ಸಿಎಸ್‌ಕೆ ವಿರುದ್ಧವೂ ಗೆಲುವಿನ ಲಯ ಉಳಿಸಿಕೊಳ್ಳಬಹುದಾಗಿತ್ತು.

    ವೆಂಕಟೇಶ್ ಅಯ್ಯರ್, ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಅವರಂಥ ಭಾರತೀಯ ಬ್ಯಾಟ್ಸ್‌ಮನ್‌ಗಳು ಮಿಂಚುತ್ತಿರುವುದು ಕೆಕೆಆರ್ ಬಲ ಹೆಚ್ಚಿಸಿದ್ದರೆ, ಅತ್ತ ಡೆಲ್ಲಿ ತಂಡಕ್ಕೂ ಭಾರತೀಯ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್, ಪೃಥ್ವಿ ಷಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಅವರೇ ಶಕ್ತಿಯಾಗಿದ್ದಾರೆ ಎಂಬುದು ಗಮನಾರ್ಹ. ಇನ್ನು ಉಭಯ ತಂಡಗಳೂ ಬೌಲಿಂಗ್ ವಿಭಾಗದಲ್ಲಿ ವಿದೇಶಿ ಆಟಗಾರರನ್ನು ಹೆಚ್ಚು ನೆಚ್ಚಿಕೊಂಡಿವೆ.

    ಮುಖಾಮುಖಿ: 26
    ಡೆಲ್ಲಿ: 12
    ಕೆಕೆಆರ್: 14
    ಹಿಂದಿನ ಹಣಾಹಣಿ:
    ಅಹಮದಾಬಾದ್‌ನಲ್ಲಿ ಡೆಲ್ಲಿಗೆ 7 ವಿಕೆಟ್ ಜಯ.
    *ಆರಂಭ: ಮಧ್ಯಾಹ್ನ 3.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಟೀಮ್ ನ್ಯೂಸ್:
    ಕೆಕೆಆರ್: ಆಂಡ್ರೆ ರಸೆಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಕಣಕ್ಕಿಳಿಯದಿದ್ದರೆ ಶಕೀಬ್ ಅಲ್ ಹಸನ್ ಅಥವಾ ಬೆನ್ ಕಟ್ಟಿಂಗ್ ಆಡಬಹುದು.
    ಡೆಲ್ಲಿ: ಫಿಟ್ನೆಸ್ ಸಮಸ್ಯೆಯಿಂದ ಸ್ಟೋಯಿನಿಸ್ ಕಳೆದ ಪಂದ್ಯ ತಪ್ಪಿಸಿಕೊಂಡಾಗ ವಿದೇಶಿ ಆಟಗಾರರಿಗೆ ಬದಲಾಗಿ ಲಲಿತ್ ಯಾದವ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ 4ನೇ ವಿದೇಶಿ ಆಟಗಾರರಾಗಿ ಸ್ಯಾಮ್ ಬಿಲ್ಲಿಂಗ್ಸ್ ಕಣಕ್ಕಿಳಿಯುವ ಸಾಧ್ಯತೆ ಇದೆ.

    ಅಮ್ಮನಾದ ಬಳಿಕ ಎರಡನೇ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts