More

    ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕು

    ಧಾರವಾಡ: ಕಣ್ಣುಗಳು ಮಾನವ ದೇಹದ ಅತಿ ಮುಖ್ಯ ಅಂಗ. ಜೀವನ ಕಾಲದ ಶೇ. 90ರಷ್ಟು ಜ್ಞಾನ ಗ್ರಹಿಕೆ ಕಣ್ಣಿನಿಂದ ಆಗುತ್ತದೆ. ಆದ್ದರಿಂದ ಕಣ್ಣುಗಳ ಆರೋಗ್ಯವನ್ನು ಕಡೆಗಣಿಸಬಾದು. ಪ್ರತಿಯೊಬ್ಬರೂ ನೇತ್ರದಾನದ ಪ್ರತಿಜ್ಞೆ ಮಾಡಿ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ರ‍್ಯಾಪಿಡ್ ಸಂಸ್ಥೆಯ ಸಿಇಒ ಮಾಳವಿಕಾ ಹೇಳಿದರು.
    ಲಯನ್ಸ್ ಕ್ಲಬ್, ರ‍್ಯಾಪಿಡ್ ಸಂಸ್ಥೆ ಹಾಗೂ ಎಂ.ಎ0. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನಗರದ ರ‍್ಯಾಪಿಡ್ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
    ಕಣ್ಣಿನ ಆರೋಗ್ಯದ ಜೊತೆಗೆ ಪ್ರತಿಯೊಬ್ಬರೂ ನೇತ್ರದಾನದ ಶಪಥ ಮÁಡಬೇಕು. ಸ್ನೇಹಿತರು ಹಾಗೂ ಬಂಧುಗಳನ್ನು ಪ್ರೇರೇಪಿಸಬೇಕು ಎಂದರು.
    ಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷ ಜಿ.ಎಂ. ದೇಸಾಯಿ ಮಾತನಾಡಿ, ನೇತ್ರದಾನದ ಅವಶ್ಯಕತೆ ಹೆಚ್ಚುತ್ತಿದೆ. ನೇತ್ರದಾನಕ್ಕಿಂತ ಶ್ರೇಷ್ಠ ಕೆಲಸ ಮತ್ತೊಂದಿಲ್ಲ ಎಂದರು.
    ಲಯನ್ಸ್ ಕ್ಲಬ್ ಅಧ್ಯಕ್ಷೆ ಶೈಲಾ ಕರಿಗುದರಿ, ಕಾರ್ಯದರ್ಶಿ ಡಾ. ಅನಿರುದ್ಧ ಕುಲಕರ್ಣಿ, ಎಂ.ಎ0. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ವಿವೇಕ ಎಂ., ಆಡಳಿತಾಽಕಾರಿ ಹರೀಶ, ಇತರರಿದ್ದರು. ಸುಮಾರು ೧೩೦ ಜನ ಉಚಿತ ಶಿಬಿರದ ಪ್ರಯೋಜನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts