More

    ನೇತ್ರದಾನಕ್ಕೆ ಮುಂದಾಗಬೇಕು : ಡಾ.ಶಿರೋಳ

    ಗದಗ: ನೇತ್ರದಾನದಿಂದ ಅಂಧನಾದ ವ್ಯಕ್ತಿಗೆ ಜಗತ್ತನ್ನು ನೋಡುವ ಬೆಳಕು ನೀಡಿದಂತಾಗಲು ಬದುಕಿದ್ದಾಗ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿ, ಇಲ್ಲವೆ ಮರಣದ ನಂತರ ಕುಟುಂಬದ ಒಪ್ಪಿಗೆ ನೀಡಿ ಎಂದು ಗದುಗಿನ ಹಿರಿಯ ತಜ್ಞ ವೈದ್ಯರಾದ ಡಾ.ಜಗದೀಶ ಶಿರೋಳ ನೇತ್ರದಾನಕ್ಕೆ ಸಾರ್ವಜನಿಕರಿಗೆ ಪ್ರೇರಣೆ ನೀಡಿ ಮಾತನಾಡಿದರು.
    ನಗರದ ನಿವಾಸಿ ಪಾಂಡುರಗಶೆಟ್ಟಿ ಕುರ (೮೪) ರವಿವಾರ ಮಧ್ಯಾನ್ಹ ವಯೋಸಹಜ ನಿಧನರಾದ ಬಳಿಕ ಗದಗ-ಬೆಟಗೇರಿ ಲೈನ್ಸ್ ಕ್ಲಬ್‌ನ ಪದಾಧಿಕಾರಿಗಳೊಂದಿಗೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ನೇತ್ರದಾನಕ್ಕೆ ಮನವಿ ಮಾಡಿಕೊಂಡರು ಕುಟುಂಬದವರು ಸಮ್ಮತಿಸಿದ ಸಂದರ್ಭದಲ್ಲಿ ಅವರು ಔಪಚಾರಿಕವಾಗಿ ಮಾತನಾಡಿದರು.
    ಕುರ ಕುಟುಂಬದವರು ನೀಡಿದ ಸಹಕಾರ ದೊಡ್ಡದು ಈ ಸಹಕಾರವು ಅಂಧರ ಬಾಳಿಕೆ ಬೆಳಕು, ಹೊಸ ಆಶಾಕಿರಣ ಮೂಡಿಸಿದಂತಾಗುವದು ಎಂದರಲ್ಲದೆ ನೇತ್ರದಾನದ ಬಗ್ಗೆ ಹೆಚ್ಚು ಪ್ರಚಾರವಾಗಬೇಕು, ಜನಾಂದೋಲನ, ಜಾಗ್ರತಿ ಮೂಡಬೇಕಿದೆ ಎಂದು ಡಾ.ಶಿರೋಳ ಹೇಳಿದರು.
    ಹುಬ್ಬಳ್ಳಿಯ ಜೋಷಿ ನೇತ್ರಾಲಯದವರು ನೇತ್ರದಾನದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಮೃತರ ಪುತ್ರರಾದ ಅರವಿಂದ ಹಾಗೂ ಮಂಜುನಾಥ ಉಪಸ್ಥಿತರಿದ್ದರು. ಗದಗ-ಬೆಟಗೇರಿ ಲೈನ್ಸ್ ಕ್ಲಬ್ ಅಧ್ಯಕ್ಷ ರಮೇಶ ಶಿಗ್ಲಿ, ಕಾರ್ಯದರ್ಶಿ ಪ್ರವೀಣ ವಾರಕರ, ಖಜಾಂಚಿ ರಾಜು ಮಲ್ಲಾಡದ, ಸದಸ್ಯರಾದ ಸಂಜಯ ರುದ್ದಂ, ಶ್ರೀನಿವಾಸ ಬಾಕಳೆ, ವಿನೋದ ಉತ್ತರಕರ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts