More

    ಗ್ರಾಹಕರಿಗೆ ಹೆಚ್ಚುವರಿ ಹಾಲು

    ಮಂಗಳೂರು: ಕೋವಿಡ್ ಸಂಕಷ್ಟದ ಪರಿಣಾಮ ಶುಭ ಸಮಾರಂಭಗಳು ನಡೆಯದಿರುವುದು ಮತ್ತು ದೇವಸ್ಥಾನ, ಹೋಟೆಲ್ಗಳು ನಿರ್ಬಂಧಕ್ಕೆ ಒಳಗಾಗಿರುವುದರಿಂದ ರಾಜ್ಯದ ಇತರ ಕಡೆಗಳಂತೆ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಲ್ಲೂ ದೊಡ್ಡ ಪ್ರಮಾಣದಲ್ಲಿ ಹಾಲು ಉಳಿಯುತ್ತಿದೆ.
    ಪ್ರಸಕ್ತ ಒಕ್ಕೂಟದಲ್ಲಿ ದಿನಂಪ್ರತಿ 5.60 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿರುವುದು ದಾಖಲೆಯಾಗಿದೆ. ಇದರಲ್ಲಿ ದಿನಂಪ್ರತಿ ಸುಮಾರು 1.50 ಲಕ್ಷ ಲೀಟರ್ ಉಳಿಕೆಯಾಗುತ್ತಿದೆ. ಹಾಲಿನ ಸಂಗ್ರಹ ಮತ್ತು ಬಳಕೆಯ ನಡುವೆ ದೊಡ್ಡ ಅಂತರ ಸೃಷ್ಟಿಯಾಗಿದ್ದು, ಇದನ್ನು ಸರಿಪಡಿಸಲು ರೈತರಿಗೆ ನಷ್ಟವಾಗದ ಪರ್ಯಾಯ ಮಾರ್ಗಗಳ ಬಗ್ಗೆ ಒಕ್ಕೂಟದ ಆಡಳಿತ ವ್ಯವಸ್ಥೆ ಚಿಂತನೆ ನಡೆಸಿದೆ.

    ಪರ್ಯಾಯ ಮಾರ್ಗ: ತಾತ್ಕಾಲಿಕವಾಗಿ ಗ್ರಾಹಕರಿಗೆ ಪ್ರತಿ ಅರ್ಧ ಲೀಟರ್‌ಗೆ 20 ಎಂಎಲ್ ಮತ್ತು ಒಂದು ಲೀಟರ್‌ಗೆ 40 ಎಂಎಲ್ ಹೆಚ್ಚುವರಿ ಹಾಲು ಒದಗಿಸುವ ಕುರಿತು ಮಹಾಮಂಡಳಿಯಿಂದ ಬಂದಿರುವ ಸಲಹೆಗೆ ಜಿಲ್ಲಾ ಒಕ್ಕೂಟದ ನಿರ್ದೇಶಕರು ಬಹುಪಾಲು ಸಹಮತ ವ್ಯಕ್ತಪಡಿಸಿದ್ದಾರೆ.
    ಹೀಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ಒದಗಿಸುವುದರಿಂದ ಸುಮಾರು 12 ಸಾವಿರ ಲೀಟರ್ ಹೆಚ್ಚುವರಿ ಹಾಲು ವಿಲೇವಾರಿಯಾಗುತ್ತದೆ. ಆದರೆ ಒಕ್ಕೂಟಕ್ಕೆ ನಷ್ಟವಾಗುತ್ತದೆ. ಪ್ರಸಕ್ತ ಪರಿಸ್ಥಿತಿ ಎದುರಿಸಲು ಒಕ್ಕೂಟ ಸಿದ್ಧತೆ ನಡೆಸುತ್ತಿದೆ.

    ಮನೆಯಲ್ಲೇ ಯಥೇಚ್ಛವಾಗಿ ಬಳಸಿ: ಹಾಲು ಉತ್ಪಾದಕರು ಮನೆಗಳಲ್ಲಿ ಯಥೇಚ್ಛವಾಗಿ ಹಾಲು ಉಪಯೋಗಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ. ಕಠಿಣ ಪರಿಸ್ಥಿತಿ ಮುಂದುವರಿದರೆ ಹಾಲಿನ ದರ ಪರಿಷ್ಕರಣೆ ಬಗ್ಗೆ ಕೂಡ ಚರ್ಚೆ ನಡೆಯಬಹುದು. ಮಿಲ್ಕ್ ಹಾಲಿಡೇ(ವಾರದಲ್ಲಿ ನಿರ್ದಿಷ್ಟ ದಿನ ಹಾಲಿಗೆ ರಜೆ) ನೀಡುವ ಕುರಿತು ಕೂಡ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು. ಸದ್ಯ ಒಕ್ಕೂಟದ ಎದುರು ಇಂತಹ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts