More

    ಮೊದಲ ಬಾರಿಗೆ ಕರೊನಾ ರೋಗಿಯ ಶವಪರೀಕ್ಷೆ: ಬಯಲಾಯ್ತು ಭಯಾನಕ ಸಂಗತಿಗಳು!

    ಬೆಂಗಳೂರು: ಕರೊನಾ ಮಹಾಮಾರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಇದರ ತೀವ್ರತೆಯ ಬಗ್ಗೆ ಬಾರಿ ಚರ್ಚೆಯಾಗುತ್ತಿದೆ. ಈ ನಡುವೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕರೊನಾ ಸೋಂಕಿನಿಂದ ಮೃತಪಟ್ಟಿದ್ದ ರೋಗಿಯ ಶವಪರೀಕ್ಷೆ ಮಾಡಲಾಗಿದೆ. ಈ ಒಂದು ಪರೀಕ್ಷೆಯಿಂದ ಸಾಕಷ್ಟು ಗಂಭೀರವಾದ ಅಂಶಗಳು ಹೊರಬಿದ್ದಿದೆ.

    ಕರೊನಾ ಮಹಾಮಾರಿ ಹೇಗೆಲ್ಲಾ ಹರಡುತ್ತದೆ? ಸತ್ತ ಮನುಷ್ಯನಲ್ಲೂ ಕರೊನಾ ಸೋಂಕು ಇರುತ್ತದಾ? ಎನ್ನುವ ಬಗ್ಗೆ ಸಾಕಷ್ಟು ಮಾತುಗಳ ಕೇಳಿ ಬಂದಿತ್ತು. ಈ ನಡುವೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡುವ ಮೂಲಕ ಸತ್ತ 18 ಗಂಟೆಗಳ ಬಳಿಕವೂ ಶವದಲ್ಲಿ ವೈರಸ್ ಜೀವಂತವಾಗಿ ಇರುತ್ತದೆ ಎನ್ನುವಂತಹ ಭಯಾನಕ ಸಂಗತಿ ಹೊರ ಬಿದ್ದಿದೆ.

    ಇದನ್ನೂ ಓದಿ: ಆಕ್ಸ್​ಫರ್ಡ್​-ಅಸ್ಟ್ರಾಜೆನೆಕಾ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ವೇಳೆ ಸ್ವಯಂ ಸೇವಕ ಸಾವು

    ಹೆಸರಾಂತ ವಿಧಿ ವಿಜ್ಞಾನ ತಜ್ಞ ಡಾಕ್ಟರ್ ದಿನೇಶ್ ರಾವ್ ಅವರು ಈ ಸಾಹಸಕ್ಕೆ ಕೈ ಹಾಕಿ ಕರೊನಾ ಸ್ಪೋಟಕ ಅಂಶಗಳನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 62 ವರ್ಷದ ವ್ಯಕ್ತಿ ಕಳೆದ ಹತ್ತು ದಿನಗಳ ಹಿಂದೆ ಕರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತ ಪಟ್ಟಿದ್ದರು. ಆಗ ಡಾಕ್ಟರ್ ದಿನೇಶ್, ಕುಟುಂಬದವರ ಒಪ್ಪಿಗಯ ಮೇರೆಗೆ ವ್ಯಕ್ತಿಯ ಪೋಸ್ಟ್ ಮಾರ್ಟಮ್ ಮಾಡುವ ಸ್ಪೋಟಕ ಅಂಶಗಳು ಬೆಳಕಿಗೆ ತಂದಿದ್ದಾರೆ.

    ಕೋವಿಡ್ ಸೋಂಕಿನಿಂದ ಮೃತಪಟ್ಟಿದ ವ್ಯಕ್ತಿಯ ಅಂಗಾಂಗಗಳು ಸಂಪೂರ್ಣ ಹಾನಿಗೆ ಒಳಗಾಗಿತ್ತು. ಸಾಮಾನ್ಯವಾಗಿ ಮೃತಪಟ್ಟ ವ್ಯಕ್ತಿಯ ಶ್ವಾಸಕೋಶ ಮೃದುವಾಗಿರುತ್ತದೆ. ಆದರೆ, ಕರೊನಾ ಮಹಾಮಾರಿಗೆ ತುತ್ತಾಗಿ ಮೃತಪಟ್ಟ ಸೋಂಕಿತನ ಶ್ವಾಸಕೋಶ ಕಾರ್ಕ್‌ ಬಾಲ್ ನಷ್ಟು ಗಟ್ಟಿಯಾಗಿ ಹೋಗಿದೆ. ಇದರ ಜತೆಗೆ ಮೆದುಳಿನಲ್ಲಿ ರಕ್ತಸ್ರಾವಾಗಿ ಹೃದಯ, ಲಿವರ್ ಹಾಗೂ ಶ್ವಾಸನಾಳಗಳು ಸಂಪೂರ್ಣ ಹಾನಿಯಾಗಿವೆ.

    ವ್ಯಕ್ತಿ ಸತ್ತ ಬಳಿಕವೂ 18 ಗಂಟೆಗಳ ಕಾಲ ದೇಹದಲ್ಲಿ ವೈರಸ್ ಜೀವಂತವಾಗಿ ಇದ್ದು ಕರೊನಾ ಸೋಂಕು ಹರಡುವುದು ಖಚಿತ ಎಂದು ಶವ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಇನ್ನು ಒಂದೇ ಶವ ಪರೀಕ್ಷೆಯಲ್ಲಿ ಇದು ಖಚಿತ ಎಂದು ಹೇಳುವುದಕ್ಕಿಂತ ಇದೇ ರೀತಿ ಮೃತಪಟ್ಟ ಕರೊನಾ ಸೋಂಕಿತರ ಒಂದು 20 ಶವಗಳನ್ನು ಪರೀಕ್ಷೆ ನಡೆಸಿದಾಗ ಮತ್ತಷ್ಟು ರೋಚಕ ಅಂಶಗಳು ಕರೊನಾ ಬಗ್ಗೆ ಬೆಳಕಿಗೆ ಬರುತ್ತದೆ ಎನ್ನುತ್ತಾರೆ ಡಾ.ದಿನೇಶ್. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಅನುಮತಿ ಪಡೆಯದೆ ದಾಡಿ ಬಿಟ್ಟ ಸಬ್​ ಇನ್​​ಸ್ಪೆಕ್ಟರ್​ಗೆ ಏನಾಯ್ತು ನೋಡಿ..!

    ತನ್ನಿಷ್ಟದಂತೆ ಪ್ರೀತಿಸಿ ಮದುವೆಯಾದ ಯುವತಿ ಸೋಫಾಸೆಟ್​ಗಾಗಿ ಪ್ರಾಣವನ್ನೇ ಕಳೆದುಕೊಂಡಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts