More

    ಅನುಮತಿ ಪಡೆಯದೆ ದಾಡಿ ಬಿಟ್ಟ ಸಬ್​ ಇನ್​​ಸ್ಪೆಕ್ಟರ್​ಗೆ ಏನಾಯ್ತು ನೋಡಿ..!

    ಉತ್ತರಪ್ರದೇಶ: ನೀಟಾಗಿ ಶೇವ್ ಮಾಡಿಕೊಳ್ಳಬೇಕು ಅಥವಾ ದಾಡಿ ಬಿಡಲು ಅನುಮತಿ ಪಡೆಯಬೇಕು.. ಎಂಬ ಷರತ್ತು ವಿಧಿಸಿದ್ದರೂ ಇಲ್ಲೊಬ್ಬರು ಸಬ್​ ಇನ್​ಸ್ಪೆಕ್ಟರ್ ಅದ್ಯಾವುದನ್ನೂ ಮಾಡದೆ ಈಗ ತೊಂದರೆಗೀಡಾಗಿದ್ದಾರೆ.

    ಉತ್ತರಪ್ರದೇಶದ ಬಾಘ್​ಪಟ್​ನಲ್ಲಿ 3 ವರ್ಷಗಳಿಂದ ಸಬ್​ ಇನ್​ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದ ಕಾರಣ, ಗಡ್ಡ ಬೋಳಿಸಿಕೊಂಡು ಬರುವಂತೆ ಅಥವಾ ಗಡ್ಡ ಉಳಿಸಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿತ್ತು. ಮೂರು ಮೂರು ಬಾರಿ ಈ ಬಗ್ಗೆ ನಿರ್ದೇಶನ ನೀಡಿದ್ದರೂ ಅವರು ಗಡ್ಡ ಬೋಳಿಸಲೂ ಇಲ್ಲ ಹಾಗೂ ಗಡ್ಡ ಉಳಿಸಿಕೊಂಡೇ ಕಾರ್ಯನಿರ್ವಹಿಸಲು ಮೇಲಧಿಕಾರಿಗಳಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಹೀಗಾಗಿ ಅವರನ್ನು ಇಲಾಖೆ ಅಮಾನತು ಮಾಡಿದೆ.

    ನಿಯಮಗಳ ಪ್ರಕಾರ, ಪೊಲೀಸ್​ ವೃತ್ತಿಯಲ್ಲಿ ಇರುವ ಸಿಕ್ಖರು ಮಾತ್ರ ಗಡ್ಡ ಬಿಟ್ಟಿರಲು ಅನುಮತಿ ಇದೆ. ಉಳಿದವರೆಲ್ಲ ಕ್ಲೀನ್​ ಶೇವ್ ಮಾಡಿಕೊಂಡಿರಬೇಕು. ಒಂದು ವೇಳೆ ಗಡ್ಡಧಾರಿ ಆಗಿರಬೇಕು ಎಂದರೆ ಮೇಲಧಿಕಾರಿಗಳಿಂದ ಅನುಮತಿ ಪಡೆದಿರಬೇಕು. ಆದರೆ ಇಂತೆಸರ್ ಅಲಿ ಎರಡರಲ್ಲಿ ಯಾವುದನ್ನೂ ಮಾಡದ್ದರಿಂದ ಅಮಾನತು ಮಾಡಲಾಗಿದೆ ಎಂದು ಬಾಘ್​ಪಟ್​ನ ಎಸ್​ಪಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts