More

    ದಿಶಾ​ ಮರಣೋತ್ತರ ವರದಿಯಲ್ಲಿದೆ ನಿಗೂಢತೆ: ಮತ್ತೊಂದು ತಿರುವು ಪಡೆಯುತ್ತಾ ಆತ್ಮಹತ್ಯೆ ಕೇಸ್​!

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನ ಬಳಿಕ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಆತ್ಮಹತ್ಯೆ ಪ್ರಕರಣವು ಸಹ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಸುಶಾಂತ್​ ಹಾಗೂ ದಿಶಾ ಸಾವಿನ ನಡುವೆ ಸಂಬಂಧ ಇದೆ ಎಂದು ಹೇಳಲಾಗುತ್ತಿದ್ದರೂ, ಈವರೆಗೆ ಯಾವುದು ಅಧಿಕೃತವಾಗಿಲ್ಲ.

    ಎರಡು ಪ್ರಕರಣಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಇದೆಲ್ಲದರ ನಡುವೆ ದಿಶಾ ಮರಣೋತ್ತರ ವರದಿ ಬಹಿರಂಗವಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಂದಹಾಗೆ ದಿಶಾ ಮುಂಬೈ ಅಪಾರ್ಟ್​ಮೆಂಟ್​ ಒಂದರ 14ನೇ ಮಹಡಿಯಲ್ಲಿ ತನ್ನ ಗಂಡನೊಂದಿಗೆ ನೆಲೆಸಿದ್ದರು. ಅದೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ. ಆತ್ಮಹತ್ಯೆ ಸಮಯದಲ್ಲಿ ಆಕೆಯೊಂದಿಗೆ ಗಂಡ ರೋಹನ್​ ರಾಯ್​ ಇದ್ದರಂತೆ. ಜೂನ್​ 9ರಂದು ಬೆಳಗ್ಗೆ 2 ಗಂಟೆ ಸಮಯದಲ್ಲಿ ಕಟ್ಟಡದಿಂದ ಹಾರಿದರು ಎನ್ನಲಾಗಿದೆ.

    ಇದನ್ನೂ ಓದಿ: ಶೌಚಗೃಹದಲ್ಲಿ ಬಾಲಕಿಯ ವಿಡಿಯೋ ಮಾಡಿದ್ದ ಯುವಕನ ಶವ ಕಂಡು ಬೆಚ್ಚಿದ ಜನ: ಆರೋಪಿ ಸತ್ತಿದ್ಹೇಗೆ?

    ದಿಶಾ ಸಾವಿಗೀಡಾದ ಎರಡು ದಿನದ ಬಳಿಕ ಅಂದರೆ ಜೂನ್​ 11ರಂದು ಆಕೆಯ ಮರಣೋತ್ತರ ಪರೀಕ್ಷೆ ನಡೆದಿದೆ. ಎರಡು ದಿನದ ವಿಳಂಬವೇ ಇದೀಗ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಲು ಎರಡು ದಿನ ಏಕೆ ತೆಗೆದುಕೊಂಡಿತು ಎಂಬ ಪ್ರಶ್ನೆ ಇದೀಗ ಕೇಳಿಬರತೊಡಗಿದೆ. ಅಂದಹಾಗೆ ಮರಣೋತ್ತರ ಪರೀಕ್ಷೆಯು ಬೊರಿವಲಿಯ ಪೋಸ್ಟ್​-ಮಾರ್ಟಮ್​ ಕೇಂದ್ರದಲ್ಲಿ ನಡೆದಿತ್ತು.

    ಇದೀಗ ಬಹಿರಂಗವಾಗಿರುವ ಪೋಸ್ಟ್​ ಮಾರ್ಟಮ್​ ವರದಿಯ ಪ್ರಕಾರ ದಿಶಾ ಸಾವಿಗೆ ತಾತ್ಕಾಲಿಕ ಕಾರಣ ಎಂದು ಪರೀಕ್ಷೆ ನಡೆಸಿದ ವೈದ್ಯರು ಉಲ್ಲೇಖಿಸಿದ್ದಾರೆ. ಅಲ್ಲದೆ, ದಿಶಾ ತಲೆಯಲ್ಲಿ ಗಾಯವಾಗಿದ್ದು, ದೇಹದಲ್ಲಿ ಅನೇಕ ಅಸ್ವಭಾವಿಕ ಗಾಯಗಳಾಗಿವೆ ಎಂಬುದು ವರದಿಯಲ್ಲಿದೆ. ದಿಶಾ ಸಾವಿಗೆ ಪ್ರಾಥಮಿಕ ಕಾರಣ ಆಕೆ 14ನೇ ಮಹಡಿಯಿಂದ ಬಿದ್ದ ಗಾಯಗಳೇ ಎಂದು ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

    ಮರಣೋತ್ತರ ವರದಿಯಲ್ಲಿನ ಪ್ರಮುಖವಾದ ವಿಚಾರವೆಂದರೆ ಲೈಂಗಿಕ ದೌರ್ಜನ್ಯದ ಬಗ್ಗೆ. ಏಕೆಂದರೆ ನಿನ್ನೆಯಷ್ಟೇ ಮಹಾರಾಷ್ಟ್ರದ ಬಿಜೆಪಿ ಸಂಸದ ನಾರಾಯಣ ರಾಣೆ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದರು. ದಿಶಾಳ ಗುಪ್ತಾಂಗದಲ್ಲಿ ತುಂಬಾ ಗಾಯಗಳಾಗಿವೆ ಎಂಬುದನ್ನು ಪೋಸ್ಟ್​ ಮಾರ್ಟಮ್​ ವರದಿ ನೋಡಿದರೆ ತಿಳಿಯುತ್ತದೆ. ಹೀಗಾಗಿ ಆಕೆಯದ್ದು ಆತ್ಮಹತ್ಯೆಯಲ್ಲಿ. ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ, ವರದಿಯಲ್ಲಿ ನಿಖರವಾಗಿ ದಿಶಾಳ ಗುಪ್ತಾಂಗದಲ್ಲಿ ಗಾಯಗಳಾಗಿವೆ ಎಂದು ಹೇಳಿಲ್ಲ. ಆದರೆ, ಆಕೆಯ ದೇಹದಲ್ಲಿ ಅನೇಕ ಗಾಯಗಳಿವೆ. 14ನೇ ಮಹಡಿಯಿಂದ ಬಿದ್ದಿದ್ದರಿಂದ ಗಾಯಗಳಾಗಿರಬಹುದೆಂದು ಹೇಳಲಾಗಿದೆ.

    ಇದನ್ನೂ ಓದಿ: ಮಿಸ್​ ಇಂಡಿಯಾ ಫೈನಲಿಸ್ಟ್​ ಈಗ ಯುಪಿಎಸ್ಸಿ ಸಾಧಕಿ: ಮಾಡೆಲಿಂಗ್​ ಚೆಲುವೆಯ ಯಶಸ್ಸಿನ ಕತೆ ಇದು!

    ಇನ್ನು ಮಹಿಳೆಯರ ಅಸ್ವಾಭಾವಿಕ ಸಾವಿನಲ್ಲಿ ಅವರ ಯೋನಿ ಸ್ವ್ಯಾಬ್​ ಅನ್ನು ಪರೀಕ್ಷೆಗಾಗಿ ಪಡೆಯಲಾಗುತ್ತದೆ. ದಿಶಾ ಪ್ರಕರಣದಲ್ಲೂ ಪಡೆಯಲಾಗಿದ್ದು, ಅದನ್ನು ಕೆಮಿಕಲ್​ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಸುಶಾಂತ್​ ಸಾವಿನ ಬಳಿಕವು ದಿಶಾ ಸಾವು ಕೂಡ ಇದೀಗ ಭಾರಿ ಸುದ್ದಿಯಲ್ಲಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts