ಚಲಿಸುತ್ತಿದ್ದ ರೈಲಿಗೆ ಹಠಾತ್​ ಬ್ರೇಕ್​; ಇಬ್ಬರು ಪ್ರಯಾಣಿಕರು ಸಾವು

Train
Published on

ರಾಂಚಿ: ವೇಗವಾಗಿ ಚಲಿಸುತ್ತಿದ್ದ ರೈಲೊಂದು ಹಠಾತ್​ ಎಂದು ಬ್ರೇಕ್​ ಹಾಕಿದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಾರ್ಖಂಡ್​ನ ಪರ್ಸಾಬಾದ್​ ಬಳಿ ನಡೆದಿದೆ.

ನವದೆಹಲಿ ಹಾಗೂ ಪುರಿ ನಡುವೆ ಸಂಚರಿಸುವ ಪುರುಷೋತ್ತಮ್​ ಎಕ್ಸ್​ಪ್ರೆಸ್​ನಲ್ಲಿ ಈ ಅವಘಡ ಸಂಭವಿಸಿದ್ದು, ಹಠಾತ್​ ಬ್ರೇಕ್​ ಹಾಕಿದ ಪರಿಣಾಮ ರೈಲಿನಲ್ಲಿ ಉಂಟಾದ ಜರ್ಕ್​ನಿಂದ ಇಬ್ಬರು ಪ್ರಯಾಣಿಕರು ಮರತಪಟ್ಟಿದ್ದಾರೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಪರುಷೋತ್ತಮ್​ ಎಕ್ಸ್​ಪ್ರೆಸ್​ ರೈಲು ಘಂಟೆಗೆ 130 ಕಿಲೋಮೀಟರ್​ ವೇಗದಲ್ಲಿ ಚಲಿಸುತ್ತಿತ್ತು. ಓವರ್​ಹೆಡ್​ ವಿದ್ಯುತ್​ ತಂತಿ ತುಂಡಾಗಿ ಬಿದ್ದ ಪರಿಣಾಮ ಲೋಕೋಪೈಲೆಟ್​ ತಕ್ಷಣವೇ ಎಚ್ಚೆತ್ತು ಬ್ರೇಕ್​ ಹಾಕಿದ್ದಾರೆ. ಇದರಿಂದ ಜರ್ಕ್​ ಉಂಟಾಗಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಿಂದ ಪರ್ಸಾಬಾದ್​ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರವು ನಾಲ್ಕು ಘಂಟೆಗಳು ಸ್ಥಗಿತಗೊಂಡಿದ್ದು, ಆ ನಂತರ ಪುನಾರಂಭಗೊಂಡಿತ್ತು. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ರಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net