More

    ಹಬ್ಬದ ಖುಷಿ ಹೆಚ್ಚಿಸುವಂಥ ನಿರ್ಧಾರ ತಳೆದ ಕೇಂದ್ರ ಸರ್ಕಾರ; ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕ ಇಳಿಕೆ

    ದೆಹಲಿ: ಕಳೆದ ಕೆಲವು ದಿನಗಳಿಂದ ಪೆಟ್ರೋಲ್​-ಡೀಸೆಲ್​ ದರ ಏರಿಕೆ ಎಂಬ ಸುದ್ದಿಗಳನ್ನೇ ಕೇಳಿ ಕೇಳಿ ಬೇಸತ್ತಿದ್ದ ಜನರಿಗೆ ಇದೀಗ ಖುಷಿ ಪಡುವಂತಹ ವಿಷಯವೊಂದು ಹೊರಬಿದ್ದಿದೆ. ಹಾಗೆ ಸಾರ್ವಜನಿಕರಿಗೆ ಖುಷಿ ನೀಡುವಂಥ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

    ಅಂದರೆ ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ. ಪೆಟ್ರೋಲ್​ ಮೇಲೆ 5 ರೂಪಾಯಿ ಹಾಗೂ ಡೀಸೆಲ್​ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ.

    ಇದನ್ನೂ ಓದಿ: ಸಫಾರಿ ವಾಹನದ ಮುಂದೆಯೇ ರಾಜಾರೋಷವಾಗಿ ಸಾಗಿಬಂದ ಹುಲಿರಾಯ!

    ವಿಶೇಷವೆಂದರೆ ಇಂದು ಮಧ್ಯರಾತ್ರಿಯಿಂದಲೇ ಈ ಸುಂಕ ಇಳಿಕೆ ಅನ್ವಯಿಸಲಿದ್ದು, ರಾತ್ರಿ 12ರ ಬಳಿಕ ಹೊಸ ದರದಲ್ಲಿ ಪೆಟ್ರೋಲ್​-ಡೀಸೆಲ್​ ಲಭಿಸಲಿದೆ. ಪರಿಣಾಮವಾಗಿ ಬಹಳ ದಿನಗಳ ಬಳಿಕ ಪೆಟ್ರೋಲ್​-ಡೀಸೆಲ್​ ದರದಲ್ಲಿ ಕೊಂಚ ಇಳಿಕೆ ಆಗಲಿದ್ದು, ಪರಿಷ್ಕೃತ ದರದ ಕುರಿತು ಮಧ್ಯರಾತ್ರಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

    ಬ್ಲೇಡ್​ನಿಂದ APPU ಅಂತ ಕೈ ಮೇಲೆ ಕೊಯ್ದುಕೊಂಡು, ಐ ಲವ್​ ಯೂ ಅಪ್ಪು ಎಂದು ರಕ್ತದಲ್ಲಿ ಬರೆದ ವಿದ್ಯಾರ್ಥಿನಿ!

    ಸಫಾರಿ ವಾಹನದ ಮುಂದೆಯೇ ರಾಜಾರೋಷವಾಗಿ ಸಾಗಿಬಂದ ಹುಲಿರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts