More

    ಕರೊನಾ ವಿರುದ್ಧದ ಹೋರಾಟದಲ್ಲಿ ಸ್ಥೂಲಕಾಯದವರು ಸೋಲುತ್ತಾರಾ? ಮೃತರಲ್ಲಿ ಬೊಜ್ಜಿದ್ದವರ ಸಂಖ್ಯೆಯೇ ಹೆಚ್ಚು

    ಲಂಡನ್​: ಕರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗುತ್ತಿರುವವರ ಪ್ರಮಾಣ ಜಾಗತಿಕವಾಗಿ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಲಸಿಕೆ ಇಲ್ಲದ ಈ ಕಾಯಿಲೆಗೆ ಬಲಿಯಾಗುತ್ತಿರುವವರ ವಿವರಗಳನ್ನು ಗಮನಿಸಿದಾಗ ಹಲವು ಸಂಗತಿಗಳು ಗೊತ್ತಾಗುತ್ತಿವೆ.

    ಮೃತರಲ್ಲಿ ಹೆಚ್ಚಿನವರು ಇಳಿವಯಸ್ಸಿನವರು. ಹೃದಯ, ಶ್ವಾಸಕೋಶ ಹಾಗೂ ಮಿದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರು ಎಂಬುದು ತಿಳಿದು ಬರುತ್ತಿದ್ದು, ಸಾವಿಗೆ ಇದೇ ಮುಖ್ಯ ಕಾರಣವಾಗುತ್ತಿದೆ. ಇನ್ನೊಂದು ಅಂಶವನ್ನು ಪರಿಗಣಿಸುವುದಾದರೆ ಮೃತರಲ್ಲಿ ಹೆಚ್ಚಿನವರು ಅದರಲ್ಲೂ ಮುಕ್ಕಾಲು ಪಾಲು ಸ್ಥೂಲಕಾಯದವರಾಗಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ತಿಳಿದುಬರುತ್ತಿದೆ. ಸಾವಿಗೆ ಎರಡನೇ ಕಾರಣವಾಗಿ ಇದನ್ನು ಉದಾಹರಿಸಬಹುದು ಎನ್ನುತ್ತಾರೆ ವೈದ್ಯರು.

    ನ್ಯೂಯಾರ್ಕ್​ನಲ್ಲಿ ನಡೆಸಿದ ಅಧ್ಯಯನವು ಈ ವಿವರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಕೊರೊನಾಗೂ ಸ್ಥೂಲಕಾಯಕ್ಕೂ ಏನು ಸಂಬಂಧ ಎಂದು ಗಮನಿಸುವುದಾದರೆ, ಬೊಜ್ಜು ಅಥವಾ ಅತಿಯಾದ ದೇಹಭಾರ ಹೊಂದಿರುವವರಲ್ಲಿ ದೇಹದ ಪ್ರಮುಖ ಅಂಗಗಳಿಗೆ ಆಮ್ಲಜನಕ ಪೂರೈಕೆ ಕಷ್ಟಸಾಧ್ಯವಾಗುತ್ತದೆ. ಏಕೆಂದರೆ ಬೊಜ್ಜಿನಿಂದಾಗಿ ಡಯಾಫ್ರಮ್​ ಹಾಗೂ ಶ್ವಾಸಕೋಶಗಳ ಕಾರ್ಯ ಕುಗ್ಗುತ್ತದೆ. ಇದರಿಂದ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದಲ್ಲದೇ, ಶ್ವಾಸಕೋಶದಲ್ಲಿ ಸೋಂಕು ಅನಿಯಂತ್ರಿತವಾಗಿ ಹಬ್ಬಿ ನ್ಯೂಮೋನಿಯಾಗೆ ಕಾರಣವಾಗುತ್ತದೆ ಎಂಬುದು ಸಂಶೋಧಕರ ಮಾತು.

    ಇದಲ್ಲದೇ. ಇಟಲಿಯಲ್ಲಿ ಕೋವಿಡ್​ಗೆ ತುತ್ತಾದ ಸ್ಥೂಲಕಾಯದ ರೋಗಿಗಳಿಗೆ ಉಸಿರಾಟಕ್ಕೆ ತೊಂದರೆ ಉಂಟಾದಾಗ ಅವರನ್ನು ಮಕಾಡೆ ಮಲಗಿಸಿ ಆರೈಕೆ ಮಾಡಿದ್ದಾರೆ. ಏಕೆಂದರೆ ದೊಡ್ಡ ಹೊಟ್ಟೆಯಿದ್ದವರನ್ನು ಮಕಾಡೆ ಮಲಗಿಸಿದಾಗ ಡಯಾಫ್ರಮ್​ ಮೇಲೇರಿ ಉಸಿರಾಟ ಸರಾಗವಾಗುತ್ತದೆ.

    ಕೋವಿಡ್​ನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ 4,103 ಜನರಲ್ಲಿ ನ್ಯೂಯಾರ್ಕ್​ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಸಾವಿಗೆ ಇಳಿವಯಸ್ಸು ಮುಖ್ಯ ಕಾರಣವಾಗಿದ್ದರೆ, ಎರಡನೆಯದು ಬೊಜ್ಜು ಎಂದು ಉಲ್ಲೇಖಿಸಲಾಗಿದೆ. ಬ್ರಿಟನ್ನಿನ ಮೂರರಲ್ಲಿ ಎರಡು ಪಾಲು ಜನರು ಸ್ಥೂಲಕಾಯದವರಾಗಿರುವುದರಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ರೋಥರ್​ಹ್ಯಾಮ್​ ಇನ್​ಸ್ಟಿಟ್ಯೂಟ್​ ಆಫ್​ ಒಬೆಸಿಟಿಯ ಕ್ಲಿನಿಕಲ್​ ಮ್ಯಾನೇಜರ್​ ಆಗಿರುವ ಡಾ.ಮ್ಯಾಟ್​ ಕೇಪ್​ಹಾರ್ನ್​ ಅಭಿಪ್ರಾಯಪಡುತ್ತಾರೆ.

    ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲಿರುವ ಜನರು ಹೆಚ್ಚು ದೇಹಭಾರ ಬೆಳೆಸಿಕೊಳ್ಳಲಿಕ್ಕಿಲ್ಲ. ಆದರೆ, ನಿಯಮಿತವಾಗಿ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಒಳಿತು ಎನ್ನುತ್ತಾರೆ ತಜ್ಞರು.

    ಕಾಡು-ಮೇಡುಗಳ ದಾರಿಯಲ್ಲಿ ಕುಟುಂಬದೊಂದಿಗೆ ಊರಿಗೆ ತೆರಳುತ್ತಿದ್ದ ಬಾಲೆ ‘ಕಾಲ’ನನ್ನು ಜಯಿಸಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts