ಕಾಡು-ಮೇಡುಗಳ ದಾರಿಯಲ್ಲಿ ಕುಟುಂಬದೊಂದಿಗೆ ಊರಿಗೆ ತೆರಳುತ್ತಿದ್ದ ಬಾಲೆ ‘ಕಾಲ’ನನ್ನು ಜಯಿಸಲಿಲ್ಲ

ಬಿಜಾಪುರ (ಚತ್ತೀಸಘಡ್​): ತಮ್ಮೂರನ್ನು ಸೇರಬೇಕೆಂಬುದಷ್ಟೇ ಅವರಿಗಿದ್ದ ಗುರಿ. ರಸ್ತೆಗಳಲ್ಲಿ ಸಂಚರಿಸಿದರೆ ಪೊಲೀಸರು ಅಡ್ಡಗಟ್ಟಬಹುದೆಂಬ ಭಯ. ಹೀಗಾಗಿ ಕಾಡು-ಮೇಡುಗಳಲ್ಲಿ ಅಲೆಯುತ್ತ, ಕಾಲ್ದಾರಿಯಲ್ಲಿ ಸಾಗುತ್ತ ಮುನ್ನಡೆದಿದ್ದರು. ಹೀಗವರು ಊರಿನ ದಾರಿ ಹಿಡಿದು ಮೂರು ದಿನಗಳೇ ಕಳೆದಿದ್ದವು. ಇನ್ನೊಂದು ತಾಸು ಹೆಜ್ಜೆ ಹಾಕಿದ್ದರೆ, ತಮ್ಮ ನೆಲೆಯನ್ನು ತಲುಪಿಕೊಳ್ಳುತ್ತಿದ್ದರು. ಆದರೆ, ನಡೆಯಬಾರದ್ದೊಂದು ಘಟನೆ ಘಟಿಸಿ ಹೋಯಿತು. ತಾನು ಕುಟುಂಬದೊಂದಿಗಿದ್ದರೆ ಕೊಂಚ ನೆರವಾದೀತು ಎಂದು 12 ವರ್ಷದ ಬಾಲಕಿ ತೆಲಂಗಾಣದ ಮೆಣಸಿನಕಾಯಿ ಗದ್ದೆಗಳಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದಳು. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಕೆಲಸವೂ ಇಲ್ಲವಾಯಿತು. … Continue reading ಕಾಡು-ಮೇಡುಗಳ ದಾರಿಯಲ್ಲಿ ಕುಟುಂಬದೊಂದಿಗೆ ಊರಿಗೆ ತೆರಳುತ್ತಿದ್ದ ಬಾಲೆ ‘ಕಾಲ’ನನ್ನು ಜಯಿಸಲಿಲ್ಲ