More

    ಪರೀಕ್ಷೆ ಸಮಯ ಅಲ್ವೇ.. ಈ ಆಹಾರ ತಗೊಂಡರೆ ಫಲಿತಾಂಶ ಚೆನ್ನಾಗಿರತ್ತೆ..

    ಪರೀಕ್ಷೆ ಸಮಯ ಅಲ್ವೇ.. ಈ ಆಹಾರ ತಗೊಂಡರೆ ಫಲಿತಾಂಶ ಚೆನ್ನಾಗಿರತ್ತೆ..ಇದು ಪರೀಕ್ಷಾ ಸಮಯ. ಇಂತಹ ಸಮಯದಲ್ಲಿ ಪಾಲಕರಿಗೂ ಪರೀಕ್ಷೆ ಎದುರಿಸುವ ಒತ್ತಡವಿರುತ್ತದೆ. ಮಕ್ಕಳು ಸಮರ್ಥವಾಗಿ ಪರೀಕ್ಷೆ ಎದುರಿಸಲು ಪಾಲಿಸಬಹುದಾದ ಅಂಶಗಳತ್ತ ನೋಡೋಣ.

    ಪರೀಕ್ಷೆಯ ಸಮಯದಲ್ಲಿ ಮಕ್ಕಳ ಆಹಾರ ಸತ್ವಗುಣವನ್ನು ಹೊಂದಿರಬೇಕು. ಸಿಹಿಯಾದ, ಜಿಡ್ಡಿನಾಂಶ ಹೆಚ್ಚಿರುವ ಮತ್ತು ಉಷ್ಣಪ್ರಧಾನವಲ್ಲದ ಆಹಾರಗಳು ಸತ್ವಗುಣ ಹೊಂದಿರುತ್ತವೆ. ಹಾಲು, ತುಪ್ಪ, ಎಣ್ಣೆ, ಬೂದುಗುಂಬಳಕಾಯಿ, ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್​ನಟ್, ಶೇಂಗಾ ಇತ್ಯಾದಿ.

    ಮಕ್ಕಳು ಚಿನ್ಮುದ್ರೆಯನ್ನು ಮಾಡುತ್ತ ಓದುವುದರಿಂದ ಓದಿದ್ದನ್ನು ನೆನೆಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅಧ್ಯಯನಕ್ಕೆ ಬ್ರಾಹ್ಮಿಮುಹೂರ್ತವು ಬಹಳ ಸೂಕ್ತ ಎಂದು ಅನಾದಿಕಾಲದಿಂದಲೂ ಹೇಳಲಾಗುತ್ತದೆ. ತಡರಾತ್ರಿಯವರೆಗೆ ಓದಿ ಬೆಳಗ್ಗೆ ತಡವಾಗಿ ಏಳುವುದಕ್ಕಿಂತ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದು ಓದುವುದು ಒಳ್ಳೆಯದು. ಬ್ರಾಹ್ಮಿಮುಹೂರ್ತ ಎಂದರೆ ಸೂರ್ಯೋದಯಕ್ಕಿಂತ ಮುಕ್ಕಾಲು ಗಂಟೆ ಹಿಂದಿನ ಮುಕ್ಕಾಲು ಗಂಟೆಯ ಅವಧಿ. ರಾತ್ರಿ ಹೆಚ್ಚು ಕಾಲ ಓದಿ ಮರುದಿನ ಮಧ್ಯಾಹ್ನ ಮಲಗುವ ರೂಢಿ ಅನೇಕರಲ್ಲಿರುತ್ತದೆ. ಆದರೆ ಹಗಲು ನಿದ್ರೆ ಒಳ್ಳೆಯದಲ್ಲ. ಅದು ಆಲಸ್ಯಕ್ಕೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ಈ ಅಭ್ಯಾಸ ತ್ಯಜಿಸುವುದು ಉತ್ತಮ.

    ಅತಿಯಾದ ಖಾರ, ಕಹಿ ಅಂಶವಿರುವ ಆಹಾರಸೇವನೆ ಬೇಡ. ಅಂತೆಯೇ ಅತಿಯಾದ ಹುಳಿ ಅಂಶವಿರುವ ಆಹಾರಸೇವನೆಯೂ ಒಳ್ಳೆಯದಲ್ಲ. ಹುಳಿ ಪದಾರ್ಥವನ್ನು ಸೇವಿಸುವುದರಿಂದ ನಿದ್ರೆ ಬಂದುಬಿಡುತ್ತದೆ. ಆದರೆ ನೈಸರ್ಗಿಕವಾಗಿ ಹುಳಿಯಿರುವ ಆಹಾರಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಉದಾಹರಣೆಗೆ ಮೂಸಂಬಿ, ಕಿತ್ತಳೆ, ದ್ರಾಕ್ಷಿ, ಬಲಿತ ಮಾವಿನಹಣ್ಣು, ನೆಲ್ಲಿಕಾಯಿ ಇತ್ಯಾದಿ ಸಿಟ್ರಸ್ ಹಣ್ಣುಗಳು. ಸಿಹಿಪದಾರ್ಥಗಳಲ್ಲಿಯೂ ಸಕ್ಕರೆ ಹಾಕಿ ತಯಾರಿಸಿದ್ದಕ್ಕಿಂತ ನೈಸರ್ಗಿಕ ಸಿಹಿಪದಾರ್ಥಗಳ ಸೇವನೆ ಉತ್ತಮ. ಉದಾಹರಣೆಗೆ ಹಾಲುಗುಂಬಳಕಾಯಿ, ಬೂದುಗುಂಬಳಕಾಯಿ, ಗೆಣಸು ಇತ್ಯಾದಿ. ಅತಿಯಾಗಿ ಹಸಿವೆಯಾದ ಎಷ್ಟೋ ಹೊತ್ತಿನ ಬಳಿಕ ಊಟ ಮಾಡುವುದು ಒಳ್ಳೆಯದಲ್ಲ. ಮಕ್ಕಳು ಸಮಯಕ್ಕೆ ಸರಿಯಾಗಿ ಊಟ ಮಾಡಿದಾಗ ದೇಹದ ಜತೆಗೆ ಮಿದುಳಿಗೂ ಶಕ್ತಿ ದೊರೆಯುತ್ತದೆ.

    ಬೂದುಗುಂಬಳಕಾಯಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ಬೇಯಿಸಿಕೊಳ್ಳಬೇಕು. ಬೇಯಿಸಲು ಉಪಯೋಗಿಸಿದ ನೀರನ್ನೂ ಇರಿಸಿಕೊಳ್ಳಬೇಕು. ಬೂದುಗುಂಬಳದ ಚೂರನ್ನು ಮಿಕ್ಸಿಯಲ್ಲಿ ರುಬ್ಬಿ ಹಿಂಡಿಕೊಳ್ಳಬೇಕು. ಹಿಂಡಿಕೊಂಡ ಬೂದುಗುಂಬಳವನ್ನು ಕಾವಲಿಯಲ್ಲಿ ನೀರಿನಂಶ ಹೋಗುವವರೆಗೆ ತುಪ್ಪವನ್ನುಪಯೋಗಿಸಿ ಹುರಿದಾಗ ಅದು ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಈಗ ಬೇಯಿಸಿದ ನೀರು ಮತ್ತು ಹಿಂಡಿದ ನೀರು ಎರಡನ್ನೂ ಸೇರಿಸಿ ಬೆಲ್ಲ ಹಾಕಿ ಪಾಕ ಬರಿಸಿಕೊಳ್ಳಬೇಕು. ಅದಕ್ಕೆ ತುಪ್ಪದಲ್ಲಿ ಹುರಿದ ಬೂದುಗುಂಬಳ ಸೇರಿಸಿ, ಹಿಪ್ಪಲಿ, ಶುಂಠಿ, ದಾಲ್ಚಿನ್ನಿ, ಏಲಕ್ಕಿ, ಕಾಳುಮೆಣಸಿನ ಪುಡಿ ಹಾಗೂ ತುಪ್ಪ ಹಾಕಿ ಉರಿಯಿಂದ ಕೆಳಗಿಳಿಸಬೇಕು. ತಣ್ಣಗಾದ ನಂತರದಲ್ಲಿ ಇದಕ್ಕೆ ಜೇನುತುಪ್ಪ ಹಾಕಿಡಬೇಕು. ಬೆಳಗ್ಗೆ ಮತ್ತು ರಾತ್ರಿ ಇದನ್ನು ಒಂದು ಚಮಚದಂತೆ ಸೇವಿಸಿ ಬಿಸಿ ಹಾಲು ಕುಡಿಯುವುದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ನೆನಪಿನ ಶಕ್ತಿ ಏಕಾಗ್ರತೆಯ ಹೆಚ್ಚಳಕ್ಕೆ ಬಹಳ ಪರಿಣಾಮಕಾರಿ.

    ತೂಕ ಇಳಿಸಲು ಉಪಾಹಾರ ಬಿಟ್ಟರಾಗತ್ತ ಅಥವಾ ಊಟವನ್ನೇ ಬಿಡಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts