More

    VIDEO | ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡ ಆರ್​ಬಿಐ ಮಾಜಿ ಗವರ್ನರ್; ರಾಹುಲ್ ಜತೆ ಹೆಜ್ಜೆ ಹಾಕಿದ ರಘುರಾಮ್ ರಾಜನ್

    ರಾಜಸ್ಥಾನ: ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಜತೆಗೆ ಹೆಜ್ಜೆ ಹಾಕಿದ್ದಾರೆ. ಇಂದು (ಡಿ.14) ಬೆಳಗ್ಗೆ ರಾಜಸ್ಥಾನದ ಸವಾಯಿ ಮಾಧೋಪುರದ ಭಡೋತಿಯಿಂದ ಆರಂಭವಾದ ಯಾತ್ರೆಯಲ್ಲಿ ರಾಘುರಾಮ್ ರಾಜನ್ ಪಾಲ್ಗೊಂಡಿದ್ದಾರೆ.

    ಆರ್​​ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಈ ಹಿಂದೆ ಬಿಜೆಪಿ ಆಡಳಿತದ ಹಣಕಾಸು, ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ತಮ್ಮ ನಿಲುವು, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದಿರಿಂದ ರಘುರಾಮ್ ರಾಜನ್ ಹಲವು ಟೀಕೆಗಳನ್ನು ಎದುರಿಸಬೇಕಾಗಿ ಬಂದಿತ್ತು. ನೋಟ್ ಬ್ಯಾನ್ ನಿರ್ಧಾರವನ್ನು ರಾಜನ್ ವಿರೋಧಿಸಿದ್ದರು. ಇದೀಗ ರಘುರಾಮ್ ರಾಜನ್ ಕಾಂಗ್ರೆಸ್ ನೇತೃತ್ವದ ಭಾರತ್ ಜೋಡೀ ಯಾತ್ರೆಯಲ್ಲಿ ಪಾಲ್ಗೊಂಡಿರುವುದು ಹಲವರ ಟೀಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

    ಹಲವು ಟೀಕೆಗಳನ್ನು ಎದುರಿಸಿದ್ದಂತಹ ಸಂದರ್ಭದಲ್ಲಿ ರಘುರಾಮ್ ರಾಜನ್ ಮಾತನಾಡುತ್ತಾ, ನಾನು ಪ್ರತಿಯೊಂದು ವಿಚಾರವನ್ನೂ ವಿಮರ್ಷೆ ಮಾಡುತ್ತೇನೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ನಾನು ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದೇನೆ ಎಂದು ಹೇಳಿದ್ದರು.

    ಸೆ. 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದೆ. ಇದೀಗ ರಾಜಸ್ಥಾನದಲ್ಲಿದ್ದು 2023ರ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts