More

    ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಛಬ್ಬಿ: ಬೊಮ್ಮಾಯಿ, ಜೋಶಿ, ಕಾರಜೋಳ, ಕಟೀಲ್ ಸಮ್ಮುಖದಲ್ಲಿ ಸೇರ್ಪಡೆ

    ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎಂದು ಬೇಸತ್ತು ಪಕ್ಷವನ್ನೇ ತೊರೆದ ಮಾಜಿ ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ, ಅದರ ಬೆನ್ನಿಗೇ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಅವರು ಇಂದು ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

    ಇದನ್ನೂ ಓದಿ: ಮದ್ವೆಯಾಗಿ 17 ವರ್ಷಗಳ ಬಳಿಕ ಗೊತ್ತಾಯ್ತು ಇಬ್ಬರ ನಡುವಿನ ಅಸಲಿ ಸಂಬಂಧ!

    ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿ, ಟಿಕೆಟ್ ಸಂತೋಷ್ ಲಾಡ್ ಪಾಲಾದ್ದರಿಂದ ಬೇಸತ್ತು ಕೆಪಿಸಿಸಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

    ಇದನ್ನೂ ಓದಿ: 142 ಕೆರೆಗಳನ್ನು ಪುನಶ್ಚೇತನಗೊಳಿಸಿದ ಇಂಜಿನಿಯರ್; 15 ವರ್ಷಗಳಿಂದ ಒಣಗಿದ್ದ ಕೆರೆಯಲ್ಲೂ ನೀರು!

    ಬೆಳಗ್ಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದ ನಾಗರಾಜ ಛಬ್ಬಿ ಅವರು, ನಂತರ ದೆಹಲಿಯಲ್ಲಿ ಬಿಜೆಪಿಗೆ ಸೇರಿದರು. ನಾಲ್ಕು ಬಾರಿ ಟಿಕೆಟ್ ಕೈತಪ್ಪಿದ್ದರಿಂದ ಬೇಸತ್ತು ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಒಂದು ಬಾರಿ, ಪಶ್ಚಿಮದಿಂದ ಒಂದು ಬಾರಿ, ಕಲಘಟಗಿಯಿಂದ ಎರಡು ಬಾರಿ ಟಿಕೆಟ್ ವಂಚಿತರಾದ್ದರಿಂದ ಅವರು ಈ ನಿರ್ಧಾರ ತಳೆದಿದ್ದಾರೆ.

    ನಾಪತ್ತೆ ಆಗಿದ್ದವಳ ಕಂಡು ದೇವತೆ ಅಂದುಕೊಂಡ ಜನರು!; ನೀರ ಮೇಲೆ ನಡೆದ ವಿಡಿಯೋ ವೈರಲ್

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts