More

    ರೌಡಿ ವಿಲ್ಸನ್​ ಗಾರ್ಡನ್ ನಾಗ ಜತೆ ರಾಮಲಿಂಗಾರೆಡ್ಡಿ ಹೆಸರು ತಳುಕು; ಪೊಲೀಸ್ ವರದಿ ವಿರುದ್ಧ ಮಾಜಿ ಗೃಹಸಚಿವರ ಅಸಮಾಧಾನ

    ಬೆಂಗಳೂರು: ರೌಡಿಶೀಟರ್​ ವಿಲ್ಸನ್​ ಗಾರ್ಡನ್ ನಾಗನ ಜತೆ ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಹೆಸರು ತಳುಕು ಹಾಕಿಕೊಂಡಿದ್ದು, ಇದಕ್ಕೆ ಕಾರಣವಾದ ಪೊಲೀಸ್ ವಿಚಾರಣಾ ವರದಿ ವಿರುದ್ಧ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಇದಕ್ಕೆ ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡು, ತಮಗೆ ಹಿಂಬರಹ ನೀಡಬೇಕು ಎಂಬುದಾಗಿ ಅವರು ಹಿರಿಯ ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾರೆ.

    ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿ, ರೌಡಿಶೀಟರ್​ ನಾಗರಾಜ ಅಲಿಯಾಸ್​ ವಿಲ್ಸನ್ ಗಾರ್ಡನ್​ ನಾಗ ಎಂಬವನ ಪೊಲೀಸ್ ಇಂಟೆರೊಗೇಷನ್ ರಿಪೋರ್ಟ್​ನಲ್ಲಿ ನನ್ನ ಹೆಸರು ನಮೂದಿಸಿರುವುದು ಕೆಲವು ಸುದ್ದಿವಾಹಿನಿಗಳ ಮೂಲಕ ತಿಳಿಯಿತು ಎಂದಿದ್ದಾರೆ. ಮಾತ್ರವಲ್ಲ, ವಿಲ್ಸನ್ ಗಾರ್ಡನ್ ನಾಗ ಯಾರು ಎಂಬುದು ನನಗೆ ಇದುವರೆಗೆ ಗೊತ್ತಿಲ್ಲ, ಆತನ ವಿಳಾಸ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೂ ಒಳಪಡುವುದಿಲ್ಲ. ಆತ ನನ್ನನ್ನು ಯಾವತ್ತೂ ಭೇಟಿಯಾಗಿಲ್ಲ ಎಂದಿದ್ದಾರೆ. ಅದಾಗ್ಯೂ ಆತನ ಪೊಲೀಸ್ ವಿಚಾರಣಾ ವರದಿಯಲ್ಲಿ ನನ್ನ ಹೆಸರು ಉಲ್ಲೇಖಿಸಿರುವುದು ಖಂಡನೀಯ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅಲ್ಲದೆ, ಈ ಕುರಿತು ಕೆಲವೊಂದು ಪ್ರಶ್ನೆಗಳನ್ನೆತ್ತಿ ಸ್ಪಷ್ಟನೆ ಕೇಳಿದ್ದಾರೆ.

    ರಾಮಲಿಂಗಾರೆಡ್ಡಿ ಅವರು ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಈ ಕೆಳಗಿನ ಪ್ರಶ್ನೆಗಳನ್ನೆತ್ತಿ ಹಿಂಬರಹ ನೀಡಿ ಎಂದು ಸ್ಪಷ್ಟನೆ ಕೇಳಿದ್ದಾರೆ.

    – ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯು ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತಹ ಗೌಪ್ಯ ಮಾಹಿತಿಯನ್ನೊಳಗೊಂಡ ಎಲ್ಲಾ ದಾಖಲೆಗಳನ್ನು ಅತ್ಯಂತ ರಹಸ್ಯವಾಗಿ ನಿರ್ವಹಿಸಬೇಕಾಗಿರುತ್ತದೆ.

    ಈ ರೌಡಿ ಶೀಟ್, ರೌಡಿ ರಿಜಿಸ್ಟರ್, ಪೊಲೀಸ್ ಇಂಟೆರೊಗೇಷನ್ ರಿಪೋರ್ಟ್‌ಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅತ್ಯಂತ ಗೌಪ್ಯವಾಗಿ ನಿಗಾವಹಿಸಿ, ನಿರ್ವಹಿಸಬೇಕಾದ್ದು ಕರ್ತವ್ಯವಾಗಿರುತ್ತದೆ.

    ಆದರೆ, ಪೊಲೀಸ್ ಇಲಾಖೆಯ ಗೌಪ್ಯ ದಾಖಲೆಗಳಲ್ಲಿ ಒಂದಾದ ಪೊಲೀಸ್ ಇಂಟೆರೊಗೇಷನ್​ ರಿಪೋರ್ಟ್ ಸುದ್ದಿವಾಹಿನಿಗಆಗೆ ಹೇಗೆ ಲಭ್ಯವಾಯಿತು?

    – ಈ ಆಧಾರರಹಿತ ದಾಖಲೆಯನ್ನು ಸುದ್ದಿಮಾಧ್ಯಮಗಳಲ್ಲಿ ಪ್ರಸಾರಕ್ಕೆ ನೀಡಲು ಕಾರಣರಾದ ಸಿಬ್ಬಂದಿ ಯಾರು?

    – ನನಗೂ ಈ ರೌಡಿ ಶೀಟರ್‌ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗನಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ನನ್ನ ಹೆಸರು ಈತನ ಪೊಲೀಸ್ ಇಂಟೆರೊಗೇಷನ್​ ರಿಪೋರ್ಟ್‌ನಲ್ಲಿ ನಮೂದಿಸಲು ಕಾರಣಗಳೇನು?

    – ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಪೊಲೀಸ್ ಇಂಟೆರೊಗೇಷನ್​ ರಿಪೋರ್ಟ್ ಅಸಲಿಯೋ ಅಥವಾ ನಕಲಿಯೋ?

    – ಇದು ನನ್ನ ತೇಜೋವಧೆಗೆ ಹೂಡಿರುವ ಹುನ್ನಾರವೇ ?

    ದತ್ತಪೀಠದ ದಾರಿಯಲ್ಲಿ ಮೊಳೆಗಳು; ಭಕ್ತರ ವಾಹನಗಳನ್ನು ಪಂಕ್ಚರ್ ಆಗಿಸುವ ಉದ್ದೇಶ?

    ನಾಲ್ಕು ತಿಂಗಳಿನಿಂದ ಸ್ನಾನವನ್ನೇ ಮಾಡದ ಯುವತಿ; ಫ್ಲ್ಯಾಟ್​ನಿಂದಲೇ ಹೊರಹಾಕಿದ ರೂಮ್​ಮೇಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts