More

    ನಾವಂತು ಯಾವ ಆಪರೇಷನ್ ಮಾಡ್ತಿಲ್ಲ, ಕರ್ನಾಟಕ ಇಬ್ಭಾಗ ಆಗಲು ಬಿಡೋದಿಲ್ಲ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​

    ತುಮಕೂರು: ಮುಂದಿನ ಚುನಾವಣೆಯನ್ನು ನಾವು ಎದುರಿಸುತ್ತೇವೆ ಹೊರತು ಯಾವ ಆಪರೇಷನ್​​ ಮಾಡುವುದಿಲ್ಲ, ಜನರ ಆಯ್ಕೆಯ ಮೇಲೆ ಎಲ್ಲಾ ನಿರ್ಧಾರವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ.

    ಕೊರಟಗೆರೆಯಲ್ಲಿ ಮಾತನಾಡಿದ ಅವರು, ಜನರ ಮೇಲೆ ನಮಗೆ ವಿಶ್ವಾಸವಿದೆ. 2023ರಲ್ಲಿ ಜನ ನಮ್ಮನ್ನೇ ಆಯ್ಕೆ ಮಾಡುತ್ತಾರೆಂಬ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಕರ್ನಾಟಕ ಇಬ್ಭಾಗ ಆಗಲು ಬಿಡುವುದಿಲ್ಲ, ಯಾವುದೋ ಒಂದು ಅಸಮಾಧಾನಕ್ಕೆ ಕರ್ನಾಟಕವನ್ನು ಹೊಡೆಯುವಂತಹ ಕೆಲಸವನ್ನು ಮಾಡಬಾರದು ಎಂದು ಹೇಳಿದರು.

    ಪಠ್ಯಪುಸ್ತಕ ಹಿಂಪಡೆಯುವ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರಲ್ಲಿ ಹಠ ಮಾಡುವಂತಹದ್ದು ಏನು ಇಲ್ಲ.ಬಸವಣ್ಣನವರು ಯಾರು, ಏನು ಅಂತ ಅವರ ಚಿಂತನೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಂಬೇಡ್ಕರ್​ ಅವರು ಸಂವಿಧಾನವನ್ನು ಬರೆದಿದ್ದಾರೆ. ಅವರ ಚಿಂತನೆಗಳನ್ನು ಜನಸಮುದಾಯಕ್ಕೆ ತಿಳಿಸಬೇಕು. ಇದರಲ್ಲಿ ರಾಜಕೀಯ ಮಾಡಲು ಏನಿದೆ ಎಂದರು.

    ಗುಬ್ಬಿ ಶಾಸಕ ಶ್ರೀನಿವಾಸ್ ಉಚ್ಚಾಟನೆ: ಅವರ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.ಯಾವ ಪಕ್ಷಕ್ಕೆ ಸೇರ್ತಾರೆ, ಅಂತ ಅವರೇ ತೀರ್ಮಾನ ಮಾಡಲಿದ್ದಾರೆ. ನಾವು ಪರಿಶೀಲನೆ ಮಾಡಿಕೊಳ್ಳುತ್ತೇವೆ. ಕ್ಷೇತ್ರದಲ್ಲಿ ನಮಗೆ ಅವರ ಅಗತ್ಯ ಇದೆ ಅಂದರೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳು ಸಿದ್ಧರಿದ್ದೇವೆ ಎಂದು ತಿಳಿಸಿದರು.

    ಬಿಜೆಪಿ ಸೇರ್ಪಡೆ: ಬಿಜೆಪಿಗೆ ಬನ್ನಿ ಎಂದು ನನಗೆ ಯಾರೂ ಹೇಳಿಲ್ಲ, ಯಾರೂ ಕೂಡ ಸಂಪರ್ಕ ಮಾಡಿಲ್ಲ ಸದ್ಯ ಕಾಂಗ್ರೆಸ್​​ ತೊರೆಯುವ ಮಾತಿಲ್ಲ ಎಂದು ಪರಮೇಶ್ವರ್ ತಿಳಿಸಿದರು.(ದಿಗ್ವಿಜಯ ನ್ಯೂಸ್​)

    ಬಳ್ಳಾರಿ ಪಾಲಿಕೆಯಲ್ಲಿ ಹೈಡ್ರಾಮಾ: ಕಮಿಷನರ್​ಗೆ ಕನ್ನಡದಲ್ಲೇ ಮಾತಾಡಿ ಮೇಡಂ ಎಂದು ಪಾಲಿಕೆ ಸದಸ್ಯರಿಂದ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts