More

    ಶಿರಾ ಕೈತಪ್ಪಿದ್ರೆ ಜೆಡಿಎಸ್​ ಅಸ್ತಿತ್ವಕ್ಕೇ ಕೊಡಲಿ ಏಟು ಗ್ಯಾರೆಂಟಿ : ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ

    ತುಮಕೂರು: ಶಿರಾ ಕ್ಷೇತ್ರವನ್ನು ಕಳೆದುಕೊಂಡರೆ ರಾಜ್ಯದಲ್ಲಿಯೇ ನಮ್ಮ ಸಂಘಟನೆಗೆ ಪೆಟ್ಟು ಬೀಳಲಿದೆ, ಕ್ಷೇತ್ರದ ಚುನಾವಣೆಗೆ ನಾನೇ ಉಸ್ತುವಾರಿ ವಹಿಸುತ್ತೇನೆ, ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎನ್ನುವ ಮೂಲಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒಗ್ಗಟ್ಟಿನ ಜಪ ಪಠಿಸಿದ್ದಾರೆ.

    ಬೆಂಗಳೂರಿನ ಜೆಪಿ ಭವನದಲ್ಲಿ ಶುಕ್ರವಾರ ಶಿರಾ ಕ್ಷೇತ್ರದ ಮುಖಂಡರ ಸಭೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿರುವ ಎಚ್‌ಡಿಕೆ, ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನನಗೆ ಹಿಂಸೆ ಕೊಟ್ಟಿತ್ತು ಎಂದಿರುವುದು ರಣಕಣ ರಂಗೇರಿಸಿದೆ. ಬಿಜೆಪಿ, ಕಾಂಗ್ರೆಸ್ ಬಿರುಸಿನ ಪ್ರಚಾರ ಆರಂಭಿಸಿವೆೆ, ಕ್ಷೇತ್ರ ಉಳಿಸಿಕೊಳ್ಳಲು ಕಾರ್ಯಕರ್ತರು ಶ್ರಮಿಸಬೇಕೆಂದು ರಣಕಹಳೆ ಮೊಳಗಿಸಿದ್ದಾರೆ.

    ಮಧ್ಯಾಹ್ನ 12ಕ್ಕೆ ಆರಂಭವಾದ ಸಭೆ 4ಕ್ಕೆ ಮುಗಿದಿದ್ದು ಜಿಲ್ಲಾಧ್ಯಕ್ಷ ಅಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಸ್ಥಳೀಯ ಮುಖಂಡರಾದ ಉಗ್ರೇಶ್, ಸತ್ಯಪ್ರಕಾಶ್, ಸಿ.ಆರ್.ಉಮೇಶ್, ಕಲ್ಕರೆ ರವಿಕುಮಾರ್ ಸೇರಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ನನಗೆ ಆರೋಗ್ಯ ಸರಿಯಿಲ್ಲ, ದೇವೇಗೌಡರಿಗೆ ವಯಸ್ಸಾಗಿದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಒಂದೆಡೆ ಕುಳಿತು ಚರ್ಚೆ ಮಾಡಬೇಕು ಎಂದ ಎಚ್.ಡಿ.ಕುಮಾರಸ್ವಾಮಿ ಸತತ ನಾಲ್ಕು ಗಂಟೆ ಪ್ರಮುಖರ ಜತೆ ಚರ್ಚಿಸಿದರು.

    ಉಪಚುನಾವಣೆ ಇದು ನಮಗೆ ಸತ್ವ ಪರೀಕ್ಷೆಯಾಗಿದ್ದು, ಗೆಲುವಿಗೆ ಕಾರ್ಯಕರ್ತರ ವಿಶ್ವಾಸ ಮುಖ್ಯ, ಸರ್ಕಾರ ಇ್ಲದಿರುವಾಗ ಉಪಚುನಾವಣೆ ನಡೆಸುವುದು ಸಾಮಾನ್ಯವ್ಲ, ಇದನ್ನು ಕಾರ್ಯಕರ್ತರು ಅರ್ಥಮಾಡಿಕೊಂಡು ಅಭ್ಯರ್ಥಿಯನ್ನು ಒಗ್ಗಟ್ಟಿನಿಂದ ಗೆಲ್ಲಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಕರೆನೀಡಿದರು. ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದ ಅವರು, ಜೆಡಿಎಸ್‌ನಲ್ಲಿ ಯಾವುದೇ ಚಟುವಟಿಕೆ ನಡೆಯುತ್ತ್ಲಿ ಎಂಬ ನಿರುತ್ಸಾಹ ಬೇಡ, ಸಕಲ ಸಿದ್ಧತೆಯೊಂದಿಗೆ ಕಣಕ್ಕಿಳಿಯುತ್ತೇನೆ ಎಂದು ಹುರಿದುಂಬಿಸಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮುಖಂಡರು ಸಹಿ ಹಾಕಬೇಕೆಂದ ಕಡೆ ಸಹಿ ಹಾಕುವಂತಹ ಪರಿಸ್ಥಿತಿ ಇತ್ತು. ನಾನು ಸ್ವಾಮೀಜಿ ಜತೆ ನ್ಯೂಜರ್ಸಿಗೆ ಹೊರಟಾಗ ಸರ್ಕಾರ ಬಿದ್ದುಹೋಗುತ್ತೆ, ಹೋಗಬೇಡಿ ಎಂದು ಹೇಳಿದರು, ಆದರೂ ಹೋದೆ. ಕಾಂಗ್ರೆಸ್ ಹಿಂಸೆ ಸಾಕಾಗಿತ್ತು ಎಂದು ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಗೌರಿಶಂಕರ್ ಉಸ್ತುವಾರಿ?: ಉಪಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೇ ಖುದ್ದು ಕ್ಷೇತ್ರದಲ್ಲಿ ಬೀಡುಬಿಡಬೇಕು ಹಾಗೂ ಈಗ ಸಂಘಟನೆ ಜವಾಬ್ದಾರಿಯನ್ನು ಶಾಸಕ ಡಿ.ಸಿ.ಗೌರಿಶಂಕರ್ ಅವರಿಗೆ ವಹಿಸಬೇಕು ಎಂದು ಸಭೆಯಲ್ಲಿದ್ದ ಎಲ್ಲ ಮುಖಂಡರು ಎಚ್‌ಡಿಕೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಶಿರಾದಲ್ಲಿ ಬಿಜೆಪಿ ನೇತೃತ್ವ ವಹಿಸಿದ್ದು ಇವರ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಗೆದ್ದಿರುವ ಗೌರಿಶಂಕರ್ ಜೆಡಿಎಸ್ ಸಾರಥ್ಯ ವಹಿಸಿದರೆ ಚುನಾವಣೆ ಗೆಲ್ಲಬಹುದು ಎಂಬ ಮುಖಂಡರ ಅಭಿಪ್ರಾಯಕ್ಕೆ ಕುಮಾರಸ್ವಾಮಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಡಾ.ರಾಜೇಶ್‌ಗೌಡ ಬಿಜೆಪಿ ಅಭ್ಯರ್ಥಿ? : ಮಾಜಿ ಸಂಸದ ಮೂಡಲಗಿರಿಯಪ್ಪ ಅವರ ಪುತ್ರ ಡಾ.ರಾಜೇಶ್‌ಗೌಡ ಬಿಜೆಪಿ ಮುಖಂಡರ ಜತೆ ನಿರಂತರ ಸಂಪರ್ಕದಲ್ಲಿದ್ದು ಅಭ್ಯರ್ಥಿ ಯಾಗುವುದು ಖಚಿತ ಎಂಬ ಮಾತು ಕೇಳಿಬಂದಿದೆ. ಉಪಚುನಾವಣೆ ಎದುರಿಸಲು ಆಡಳಿತ ಪಕ್ಷವೇ ಸೂಕ್ತ ಎಂಬ ಜಾಣ್ಮೆಯಿಂದ ರಾಜೇಶ್‌ಗೌಡ ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದು ಟಿಕೆಟ್ ಕೂಡ ೋಷಣೆಯಾಗಲಿದೆ ಎನ್ನಲಾಗಿದೆ, ರಾಜೇಶ್‌ಗೌಡ ಪಕ್ಷಕ್ಕೆ ಬರಲು ಹಿಂದೇಟು ಹಾಕಿದರೆ ಕಾಡುಗೊಲ್ಲ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಬಿಸಿ ಮತಗಳನ್ನು ಬಾಚಿಕೊಳ್ಳಲು ಬಿಜೆಪಿ ತಂತ್ರ ಹೆಣೆದಿದೆ.

    ಟಿಬಿಜೆ ಏಕಾಂಗಿ ಹೋರಾಟ : ಶಿರಾ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಬಲ ಬಳಸಿಕೊಂಡು ಸ್ಥಳೀಯ ಮುಖಂಡರನ್ನು ಸೆಳೆಯುವ ಕಾರ್ಯ ಆರಂಭಿಸಿರುವ ಬೆನ್ನ ಹಿಂದೆಯೇ ಮಾಜಿ ಸಚಿವ ಟಿ.ಬಿ.ಜಯಚಂದ್ರ ಶುಕ್ರವಾರ ತಾಲೂಕಿನ ಕಾರ್ಯಕರ್ತರ ಸಭೆ ನಡೆಸಿ ಚುನಾವಣೆಗೆ ಸಜ್ಜಾಗಲು ತಿಳಿಸಿದ್ದಾರೆ. ಟಿಕೆಟ್ ಖಚಿತಪಡಿಸಿಕೊಂಡಿರುವ ಟಿಬಿಜೆ ಏಕಾಂಗಿ ಹೋರಾಟ ನಡೆಸಬೇಕಿದ್ದು ಕದನ ಕುತೂಹಲ ಮೂಡಿಸಿದೆ.

    ಕಾಂಗ್ರೆಸ್ ಜತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ನಾನು ಗುಮಾಸ್ತನ ರೀತಿಯಲ್ಲಿ ಕೆಲಸ ಮಾಡಬೇಕಾಯಿತು, ಕಾರ್ಯಕರ್ತರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಆದರೆ, ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡಿದ ತೃಪ್ತಿಯಿದೆ, ಶಿರಾ ಜನರೂ ನಮ್ಮ ಪರವಾಗಿದ್ದು ಮುಖಂಡರು ನಿಸ್ವಾರ್ಥದಿಂದ ಕೆಲಸ ಮಾಡಬೇಕು.
    ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

    https://www.vijayavani.net/drugscase-zamirahmed-v-s-dr-k-sudhakar/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts