More

    ಮೂರುವರೆ ಲಕ್ಷ ಲೀಡ್ ಪಕ್ಕಾ

    ಧಾರವಾಡ: ಪ್ರಲ್ಹಾದ ಜೋಶಿ ೫ನೇ ಬಾರಿ ಲೋಕಸಭಾ ಚುನಾವಣೆಗೆ ಸ್ಪಽðಸಿದ್ದಾರೆ. ಪ್ರತಿ ಬಾರಿಯೂ ಅವರ ಲೀಡ್ ಹೆಚ್ಚಾಗುತ್ತಿದೆ. ಈ ಬಾರಿ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಂಡಿದ್ದ ಜನರೇ ಸಾಕ್ಷಿ. ಜೋಶಿ ಎಲ್ಲರ ದಾಖಲೆ ಮುರಿದು ೩.೫ ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿ ಎಲ್ಲ ಸಮುದಾಯದವರನ್ನು ಪ್ರೀತಿಯಿಂದ ನೋಡಿದ್ದಾರೆ. ಊಹಾಪೋಹಗಳಿಗೆ ಜನ ಉತ್ತರ ಕೊಟ್ಟಿದ್ದಾರೆ. ನಮ್ಮ ಎಲ್ಲ ನಾಯಕರು ಸೇರಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಒಗ್ಗಟ್ಟು ಪ್ರದರ್ಶನ ಮÁಡಿದರೆ ಇಕ್ಕಟ್ಟು ಇರುವುದಿಲ್ಲ. ಹಾಗಾಗಿ ಪ್ರತಿ ಚುನಾವಣೆ ವೇಳೆ ಒಗ್ಗಟ್ಟು ಪ್ರದರ್ಶನ ಮÁಡಬೇಕಾಗುತ್ತದೆ. ಇದು ದೇಶದ ಭವಿಷ್ಯದ ಚುನಾವಣೆಯಾಗಿದ್ದು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮÁಡುವುದು ನಮ್ಮ ಗುರಿ. ಯಡಿಯೂರಪ್ಪ ಅವರು ರಾಜ್ಯದ ನಾಯಕರು. ಅವರು ಎಲ್ಲ ಕಡೆ ನಾಮಪತ್ರ ಸಲ್ಲಿಕೆಗೆ ಹೋಗಲಿದ್ದಾರೆ. ಚುನಾವಣೆಯಲ್ಲಿ ಸ್ಪಽðಸುವುದು ಎಲ್ಲರ ಹಕ್ಕು. ಅಂತಿಮ ತೀರ್ಪು ಕೊಡುವವರು ಮತದಾರರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts