More

  ಜೋಡಿ ಕೊಲೆ ಪ್ರಕರಣ; ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ

  ನವದೆಹಲಿ: 1995ರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ(RJD) ಪಕ್ಷದ ಮಾಜಿ ಲೋಕಸಭೆ ಸದಸ್ಯ ಪ್ರಭುನಾಥ್​ ಸಿಂಗ್​ ಅವರಿಗೆ ಸುಪ್ರೀಂ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ.

  1995ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಮತ ಚಲಾಯಿಸದರೆಂಬ ಕಾರಣಕ್ಕೆ ಪ್ರಭುನಾಥ್​ ಸಿಂಗ್​ ಇಬ್ಬರು ವ್ಯಕ್ತಿಗಳನ್ನು ಅಮಾನುಷವಾಗಿ ಹೊಡೆದು ಕೊಲೆ ಮಾಡಿದ್ದರು. ಪ್ರಭುನಾಥ್​ ಸಿಂಗ್​ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹಾಗೂ ಪಟ್ನಾ ಹೈಕೋರ್ಟ್​ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್​ ಆಗಸ್ಟ್​ 18ರಂದು ತಡೆ ನೀಡಿತ್ತು.

  ಪ್ರಕಣರದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್​.ಕೆ. ಕೌಲ್​​, ಅಭಯ್​​.ಎಸ್​. ಓಕಾ, ವಿಕ್ರಮ್​ನಾಥ್​ ಅವರಿದ್ದ ತ್ರಿಸದಸ್ಯ ಪೀಠವು ಭಾರತೀಯ ದಂಡ ಸಂಹಿತೆ(IPC Section) 302, 307ರ ಅಡಿಯಲ್ಲಿ ಪ್ರಭುನಾಥ್​ ಸಿಂಗ್​ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣದ ಮೇಲಿನ ವಾದ ಆಲಿಸಿದ ತ್ರಿಸದಸ್ಯ ಪೀಠವು ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಂತ್ರಸ್ಥರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಅಪರಾಧಿಗೆ ಸೂಚಿಸಿದೆ.

  ಇದನ್ನೂ ಓದಿ: ಬಿ.ಎಸ್​.ವೈಗೆ ಸೆಡ್ಡು ಹೊಡೆಯಲು ಇಂದಿನ ಸಭೆ ಸೀಮಿತವಾಗಿದೆ: ರಾಜ್ಯ ಕಾಂಗ್ರೆಸ್​

  ಯಾರು ಈ ಪ್ರಭುನಾಥ್​ ಸಿಂಗ್​ ?

  ರಾಷ್ಟ್ರೀಯ ಜನತಾ ದಳ ಪಕ್ಷದ ಪ್ರಭಾವಿ ನಾಯಕರಾಗಿರುವ ಪ್ರಭುನಾಥ್​ ಸಿಂಗ್​ 12, 13 ಹಾಗೂ 14ನೇ ಲೋಕಸಭೆ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 1985 ರಿಂದ 95ರವರೆಗೆ ಬಿಹಾರದ ಸರನ್​ ಜಿಲ್ಲೆಯ ಮಸ್ರಖ್​ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಿಂದ 2009ರ ವರೆಗೆ ಮಹಾರಾಜ್​ಗಂಜ್​ ಲೋಕಸಭೆ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿದ್ದರು.

  ವಿಧಾನಸಭೆ ಚುನಾವಣೆಯ ಮತದಾನದ ದಿನದಂದು ಬಿಹಾರದ ಸರನ್​ ಜಿಲ್ಲೆಯ ಚಾಪ್ರಾದಲ್ಲಿ ತಮ್ಮ ವಿರುದ್ಧ ಮತ ಚಲಾಯಿಸಿದೆಂಬ ಕಾರಣಕ್ಕೆ ಪ್ರಭುನಾಥ್​ ಸಿಂಗ್​ ಇಬ್ಬರನ್ನು ಕೊಲೆ ಮಾಡಿದ್ದರು. ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ನಾಶಪಡಿಸುವುದಕ್ಕೆ ಆರೋಪಿ ಇನ್ನಿಲ್ಲದ ಪ್ರಯತ್ನ ನಡೆಸಿರುವುದನ್ನು ಗಮನಿಸಿರುವುದಾಗಿ ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯ ಹೇಳಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts