More

    ವಿಕಸಿತ ಭಾರತ ನೃತ್ಯ ರೂಪಕ ಪ್ರದರ್ಶನ

    ಸಾಗರ: ನಗರದ ಶ್ರೀನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಜನ ಭಾರತ ರಂಗ ಯೋಜನೆಯಡಿ ಬುಧವಾರ ಸಂಜೆ ನಾಟ್ಯತರಂಗ ಟ್ರಸ್ಟ್ನಿಂದ ನಾಟ್ಯಗುರು ವಿದ್ವಾನ್ ಜಿ.ಬಿ.ಜನಾರ್ದನ್ ಮಾರ್ಗದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ವಿವಿಧ ಯೋಜನೆಗಳನ್ನು ನೃತ್ಯರೂಪಕದ ಮೂಲಕ ಪ್ರಸ್ತುತಪಡಿಸಲಾಯಿತು.
    ಪ್ರಧಾನಿ ಮೋದಿ ಜಾರಿಗೆ ತಂದ ಸ್ವಚ್ಛ ಭಾರತ, ಉಚಿತ ಸಿಲಿಂಡರ್ ನೀಡುವ ಉಜ್ವಲ ಯೋಜನೆ, ಮೇಕ್ ಇನ್ ಇಂಡಿಯಾ, ಆಯುಷ್ಮಾನ್ ಭಾರತ, ಅಗ್ಗದ ದರದಲ್ಲಿ ಸಿಗುವ ಜನೌಷಧ ಕೇಂದ್ರ, ಕಡಿಮೆ ಬಡ್ಡಿ ದರದಲ್ಲಿ ಮನೆ ಕೊಳ್ಳಲು ಸಾಲದ ಪಿಎಂ ಆವಾಸ್ ಯೋಜನೆ, ರೈತರಿಗೆ ನೆರವಾಗುವ ಪಿಎಂ ಕಿಸಾನ್ ಸಮ್ಮಾನ್ ನಿಯೋಜನೆ, ಮಗಳನ್ನು ಉಳಿಸಿ ಬೆಳೆಸಿ, ವಿದ್ಯೆ ಕಲಿಸುವ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ, ನೀರು ಪೂರೈಕೆಯ ಜಲಜೀವನ ಮಿಷನ್ ಯೋಜನೆ, ಆಪರೇಷನ್ ಗಂಗಾ, ಆಪರೇಷನ್ ಅಜೇಯ್ ಮುಂತಾದ ವಿಷಯಗಳ ಕುರಿತು ನೃತ್ಯ ರೂಪಕ ಸಂಯೋಜಿಸಲಾಗಿತ್ತು.
    ವಿದ್ವಾನ್ ಜಿ.ಬಿ.ಜನಾರ್ದನ್ ಅವರು ಪ್ರಧಾನಿ ವೇಷದಲ್ಲಿ ಕಾಣಿಸಿಕೊಂಡರು. ಅವರ ಶಿಷ್ಯರು ನೃತ್ಯದಲ್ಲಿ ಭಾಗಿಯಾಗಿದ್ದರು. ಗಾಯಕಿಯರಾದ ಸುಷ್ಮಾ, ನಂದಿನಿ, ರಂಜಿನಿ ಹಿನ್ನೆಲೆಯಲ್ಲಿ ನೃತ್ಯಕ್ಕೆ ಪೂರಕವಾದ ಹಾಡನ್ನು ಹಾಡಿದರು. ರಂಗದಲ್ಲಿ ಸಾಯಿಬಾಬಾ ಹಿನ್ನೆಲೆ ಒದಗಿಸಿದರು. ವೇಷಭೂಷಣ ಬ್ರಹ್ಮಾಚಾರ್ ನಿರ್ವಹಿಸಿದ್ದರು. ಬಿಜೆಪಿಯ ಗಣೇಶ್ ಪ್ರಸಾದ್ ಮಾತನಾಡಿದರು.

    ಪ್ರಧಾನಿ ಮೋದಿಯವರ ಯೋಜನೆಗಳು ತಲುಪಲು ಇಂಥ ನೃತ್ಯರೂಪಕ ಹೆಚ್ಚು ಪರಿಣಾಮಕಾರಿಯಾಗಿದೆ. ಭಾಷಣಗಳಿಗಿಂತಲೂ ಈ ರೀತಿಯ ಪ್ರಯತ್ನಗಳು ಹೆಚ್ಚು ಜನರನ್ನು ತಲುಪುತ್ತವೆ. ಸರ್ಕಾರದ ಯೋಜನೆಗಳು ವ್ಯವಸ್ಥಿವಾಗಿ ಜನಕ್ಕೆ ತಲುಪಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ.
    | ಡಾ. ರಾಜನಂದಿನಿ ಕಾಗೋಡು
    ಬಿಜೆಪಿ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts