More

    ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ

    ದಿಸ್ಪುರ್ : ಅಸ್ಸಾಂನಲ್ಲಿ ಬಿಜೆಪಿ ಶಾಸಕರ ಕಾರಿನಲ್ಲಿ ಎಲೆಕ್ಟ್ರಾನಿಕ್​ ವೋಟಿಂಗ್​ ಮೆಷಿನ್​(ಇವಿಎಂ)ಗಳನ್ನು ಸಾಗಿಸಿದ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಂಬಂಧಿತ ರತಬರಿ ಕ್ಷೇತ್ರದ ಮತಗಟ್ಟೆ 179 ರಲ್ಲಿ ಮರುಮತದಾನ ಆದೇಶಿಸಿದೆ. ಅಷ್ಟೇ ಅಲ್ಲ, ಇವಿಎಂ ಸಾಗಣೆಯ ಜವಾಬ್ದಾರಿ ಹೊಂದಿದ್ದ ನಾಲ್ಕು ಪೋಲಿಂಗ್ ಅಧಿಕಾರಿಗಳನ್ನು ಕೂಡ ಆಯೋಗ ಅಮಾನತುಗೊಳಿಸಿದೆ.

    ನಿನ್ನೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡಿತು. ಅತನು ಭೂಯನ್ ಎಂಬವರು ಕರೀಮ್​ಗಂಜ್ ಜಿಲ್ಲೆಯ ಪಥರ್​ಕಂಡಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಅಭ್ಯರ್ಥಿ ಕೃಷ್ಣೇಂದು ಪೌಲ್ ಅವರ ಕಾರಿನಲ್ಲಿ ಇವಿಎಂ ಸಾಗಿಸುತ್ತಿರುವ ಬಗ್ಗೆ ನಡೆದ ಗಲಾಟೆಯ ವಿಡಿಯೋ ಹಾಕಿದ್ದರು. ಕರೋಂಗಂಜ್​ ಬಳಿ ಸ್ಥಳೀಯರು ಇವಿಎಂಗಳನ್ನು ಹೀಗೆ ಅಭ್ಯರ್ಥಿಯ ಕಾರಿನಲ್ಲಿ ಸಾಗಿಸುತ್ತಿರುವುದನ್ನು ಗಮನಿಸಿ ಗಲಾಟೆ ಆರಂಭಿಸಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: VIDEO: ಕ್ಷೇತ್ರದ ಹೆಸರು ಬದಲಿಸಬೇಡಿ ಎನ್ನುತ್ತಲೇ ಸಭೆಯಲ್ಲಿಯೇ ಪ್ರಾಣ ಬಿಟ್ಟ ಪಂಚಾಯಿತಿ ಮುಖಂಡ

    ಈ ಬಗ್ಗೆ ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಚುನಾವಣಾ ಆಯೋಗವು ಇಂಥ ದೂರುಗಳ ಮೇಲೆ ನಿರ್ಣಾಯಕವಾಗಿ ನಡೆದುಕೊಳ್ಳಬೇಕು. ಇವಿಎಂಗಳ ಬಳಕೆ ಬಗ್ಗೆ ಎಲ್ಲಾ ರಾಷ್ಟ್ರೀಯ ಪಕ್ಷಗಳು ಮರುಚಿಂತನೆ ನಡೆಸುವ ಅಗತ್ಯವಿದೆ ಎಂದಿದ್ದರು.

    ಜಿಲ್ಲಾ ಚುನಾವಣಾ ಅಧಿಕಾರಿಯು ಈ ಬಗ್ಗೆ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ “ರತಬರಿಯ ಇಂದಿರಾ ಎಂವಿ ಶಾಲೆಯ ಮತ ಕೇಂದ್ರದಿಂದ ಇವಿಎಂಗಳನ್ನು ಸ್ಟ್ರಾಂಗ್​ ರೂಂಗೆ ಸಾಗಿಸುತ್ತಿರುವಾಗ ಅಧಿಕಾರಿಗಳ ವಾಹನ ಕೆಟ್ಟು ನಿಂತಿತು. ಹೀಗಾಗಿ ಹಾದುಹೋಗುತ್ತಿದ್ದ ಖಾಸಗಿ ವಾಹನದಿಂದ ಡ್ರಾಪ್ ತೆಗೆದುಕೊಳ್ಳಲಾಯಿತು. ಆ ವಾಹನ ಪೌಲ್ ಅವರ ಕುಟುಂಬಕ್ಕೆ ಸೇರಿದ್ದು ಎಂಬುದು ತಿಳಿಯದೇ ಮತಗಟ್ಟೆ ಅಧಿಕಾರಿಗಳು ವಾಹನ ಹತ್ತಿದ್ದರು” ಎಂದು ತಿಳಿಸಲಾಗಿತ್ತು. (ಏಜೆನ್ಸೀಸ್)

    “ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

    ಬುರ್ಜ್ ಖಲೀಫಾದಲ್ಲಿ ಬ್ರೇಕ್​​ಫಾಸ್ಟ್, ಗೋಲ್ಡನ್ ಕಾಫಿ !

    VIDEO| ಎರಡು ಬೆರಳಲ್ಲಿ 234 ಬುಗುರಿ ತಿರುಗಿಸಿ ಚುನಾವಣಾ ಪ್ರಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts