More

    ಬಿಂಕದಕಟ್ಟಿಯಲ್ಲಿ  ಇವಿಎಂ ಪ್ರಾತ್ಯಕ್ಷಿಕೆ

    ಗದಗ: ತಾಲೂಕಿನ ಬಿಂಕದಕಟ್ಟಿಯ ಮತಗಟ್ಟೆ ಸಂಖ್ಯೆ  134 , 135 ಹಾಘೂ 136 ರಲ್ಲಿ ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆಯನ್ನು  ಸೋಮವಾರದಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ರಾಜ್ ಅವರು  ನಡೆಸಿಕೊಟ್ಟರು.

    ಪ್ರಾತ್ಯಕ್ಷಿಕೆಯಲ್ಲಿ ವಿದ್ಯುನ್ಮಾನ ಮತ ಯಂತ್ರ , ವಿವಿ ಪ್ಯಾಟ್ ಹಾಗೂ ಕಂಟ್ರೋಲ್ ಯುನಿಟ್ ಯಂತ್ರಗಳ ಕಾರ್ಯವಿಧಾನ ಹಾಗೂ ಮತ ಚಲಾಯಿಸುವ ಪ್ರತಿ ಹಂತಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ವಿವರಿಸಿದರು.

    18 ವರ್ಷ ವಯೋಮಾನದ ಎಲ್ಲರೂ ತಪ್ಪದೇ ಮತದಾರರ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಎಲ್ಲರೂ ಮತದಾನದ ದಿನದಂದು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಸುಭದ್ರ ಪ್ರಜಾಪ್ರಭುತ್ವ  ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಪ್ರತಿ ಮತವು ಅಮೂಲ್ಯವಾಗಿದ್ದು ಪ್ರತಿಯೊಬ್ಬರು ತಪ್ಪದೇ ತಮ್ಮ ಮತದಾನವನ್ನು ಮಾಡುವ ಮೂಲಕ ಶೇ. 100 ರಷ್ಟು ಮತದಾನವಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಮತದಾನದ ಮಹತ್ವವನ್ನು ಇತರರಿಗೂ ತಿಳಿಸುವ ಮೂಲಕ ಮತದಾನ ಜಾಗೃತಿಗೆ ಎಲ್ಲರೂ ಮುಂದಾಗಬೇಕು ಎಂದರು.

    ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ  ಯಾವುದೇ ತರಹದ ಅನುಮಾನವಿದ್ದಲ್ಲಿ  ಈಗಲೇ ಪರಿಹಾರ ಕಂಡುಕೊಳ್ಳಬೇಕು. ವಿದ್ಯುನ್ಮಾನ ಮತ ಯಂತ್ರವು ವಿಶ್ವಾಸಾರ್ಹತೆಯಿಂದ ಕೂಡಿದ್ದು, ಈ ಬಗ್ಗೆ ಯಾವುದೇ ಗೊಂದಲ ಸಾರ್ವಜನಿಕರಲ್ಲಿ ಬೇಡ. ವಿದ್ಯುನ್ಮಾನ ಮತ ಯಂತ್ರದ ಬಳಕೆಯನ್ನು  ಪ್ರಾತ್ಯಕ್ಷಿಕೆ ಮೂಲಕ ತಿಳೀಸಿಕೊಡಲಾಗುತ್ತಿದ್ದು  ಅರ್ಹ ಮತದಾರರು ಮತ ಚಲಾಯಿಸುವ ಮೂಲಕ ತಮ್ಮ ಮತವು ನಿರ್ದಿಷ್ಟ ವ್ಯಕ್ತಿಗೆ , ಪಕ್ಷಕ್ಕೆ ಹಾಗೂ ಗುರುತಿಗೆ  ಹಾಕಿರುವ ಬಗ್ಗೆ ಖಾತರಿಪಡಿಸಿಕೊಳ್ಳುವಲ್ಲಿ ವಿ.ವಿ.ಪ್ಯಾಟ್ ಯಂತ್ರ ಸಹಕಾರಿ  ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ರಾಜ್   ಎಂದರು.  

    ಈ ಸಂದರ್ಭದಲ್ಲಿ  ಬಿಂಕದಕಟ್ಟಿ ಗ್ರಾಮದ ಸ್ಥಳೀಯ ಜನಪ್ರತಿನಿಧಿಗಳು,  ಅಧಿಕಾರಿಗಳು, ಗ್ರಾಮದ ಮುಖ್ಯಸ್ಥರು, ಹಿರಿಯರು ಸಾರ್ವಜನಿಕರು  ಯುವ ಮತದಾರರು ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆಯನ್ನು  ಸ್ವತ: ಬಳಸುವ ಮೂಲಕ ವೀಕ್ಷಿಸಿದರು.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts