More

    ಪ್ರತಿಯೊಬ್ಬರಿಗೆ ಕಾನೂನಿನ ಜ್ಞಾನಬೇಕು

    ಗೊರೇಬಾಳ: ವಿದ್ಯಾರ್ಥಿಗಳಲ್ಲಿ ಕಾನೂನಿನ ಪರಿಜ್ಞಾನ ಇರಬೇಕು, ಓದಿನ ಜತೆಗೆ ನ್ಯಾಯ ಸಮ್ಮತವಾದ ಸಾಮಾಜಿಕ ಅರಿವುಬೇಕು ಎಂದು ಸಿಂಧನೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶ ರಾದ ಕೋಟೆಪ್ಪ ಕಾಂಬಳೆ ಹೇಳಿದರು.

    ಇದನ್ನೂ ಓದಿ: http://ಪ್ರತಿಯೊಬ್ಬರಿಗೆ ಕಾನೂನಿನ ಜ್ಞಾನಬೇಕು

    ಇಲ್ಲಿನ ಶರಣಬಸವೇಶ್ವರರ ಸಭಾಭವನದಲ್ಲಿ ಈಚೆಗೆ ನೋಬೆಲ್ ಪದವಿ ಮಹಾವಿದ್ಯಾಲಯದಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹೆಣ್ಣಿಗೆ 18, ಗಂಡಿಗೆ 21, ವಯಸ್ಸು ಇದ್ದರೆ ಮಾತ್ರ ಪರಿಪೂರ್ಣ ಮದುವೆಗೆ ಸಹಕಾರಿಯಾಗುತ್ತದೆ. ಮದುವೆಯ ತಿರ್ಮಾನ ಬಂದ ಸಮಯದಲ್ಲಿ ವಧು ಮತ್ತು ವರರ ಒಮ್ಮತ ಮೇಲೆ ಜೀವನ ನಿಂತಿದೆ.

    ಈ ಹಿನ್ನೆಲೆಯಲ್ಲಿ ಇಬ್ಬರಗು ತಿಳುವಳಿಕೆ ಮುಡಿದ ನಂತರವೇ ಮದುವೆಯ ಕಾರ್ಯಕ್ರಮ ಜರುಗಿಸಬೆಕಾಗುತ್ತದೆ ಅದು ಸುಖ ಸಂಸಾರಕ್ಕೆ ಸಾಧನವಾಗುತ್ತದೆ.
    ಬಾಲ್ಯ ವಿವಾಹ, ಒಮ್ಮತವಿಲ್ಲದ ಮದುವೆಗೆ ಅವಕಾಶ ನೀಡಬೇಡಿ.

    ವರದಕ್ಷಿಣೆಯನ್ನು ತೆಗೆದುಕೊಳ್ಳುವುದು ಅಪರಾಧಕ್ಕೆ ಎಡೆಯಾಗುತ್ತದೆ. ಗುರಿಯತ್ತ ಚಿತ್ತವಿರಲಿ ಎಂದರು. ನ್ಯಾಯಾದೀಶ ಆನಂದಪ್ಪ, ಸಿವಿಲ್ ನ್ಯಾಯಾದೀಶ ಆಚಪ್ಪ ದೊಡ್ಡ ಬಸವರಾಜ, ರಾಮಣ್ಣಭೊವಿ, ಡಾ.ಶ್ಯಾಮಿದಸಾಬ್, ಹನುಮಂತ ಹಿರೇಕುರುಬರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts