More

    ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಿ: ಸಾ.ರಾ.ಮಹೇಶ್

    ಮಡಿಕೇರಿ: ದೇಶದ ಉಳಿವಿಗಾಗಿ ಪಕ್ಷದ ತೀರ್ಮಾನದಂತೆ ಬಿಜೆಪಿಯೊಂದಿಗೆ ಮೈತ್ರಿಯಾಗಿದ್ದು, ಮೈಸೂರು-ಕೊಡಗು ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸುವಂತೆ ಜೆಡಿಎಸ್ ಚುನಾವಣಾ ಉಸ್ತುವಾರಿ ಸಾ.ರಾ.ಮಹೇಶ್ ಸೂಚಿಸಿದರು.


    ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಶನಿವಾರ ಆಯೋಜಿಸಿದ್ದ ಮುಂಚೋಣಿ ನಾಯಕರಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಜತೆ ಜೆಡಿಎಸ್‌ಗೆ ಹೆಚ್ಚಿನ ಬಿನ್ನಾಭಿಪ್ರಾಯವಿದೆ. ಆದರೆ, ಬಿಜೆಪಿ ಜತೆ ಚೆನ್ನಾಗಿದ್ದೇವೆ. ಆದ್ದರಿಂದ ಇಂದು ದೇಶದ ಉಳಿವಿಗಾಗಿ ಮತ್ತು ಮೋದಿಯವರ ಗೆಲುವಿಗಾಗಿ ಹೊಂದಾಣಿಕೆಯ ರಾಜಕಾರಣಕ್ಕೆ ಮುಂದಾಗಿದ್ದೇವೆ. ಕುಮಾರಸ್ವಾಮಿ ಮೇಲಿನ ಪ್ರೀತಿ, ಮೋದಿ ವರ್ಚಸ್ಸುನಿಂದ ಮತ ಸಿಗಲಿದೆ. ಕಾರ್ಯಕರ್ತರು ಮೈ ಚಳಿ ಬಿಟ್ಟು ಕೆಲಸ ಮಾಡಿ ಎಂದ ಅವರು, ಲೋಕಾಸಭಾ ಅಭ್ಯರ್ಥಿ ಯಧುವೀರ್‌ರವರನ್ನು ಜಿಲ್ಲೆಯಲ್ಲಿ ಹಿಂದಿಗಿಂತ ಹೆಚ್ಚಿನ ಮತದಲ್ಲಿ ಗೆಲುವು ಸಾಧಿಸಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸುವಂತೆ ತಿಳಿಸಿದರು.


    ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ಚು ಮಾಡ್ತೇವೆ ಎಂದು ಅಭ್ಯರ್ಥಿಗಳು ಬರುತ್ತಾರೆ. ಆಮೇಲೆ ಅರ್ಧಕ್ಕೆ ಬಿಟ್ಟುಹೋಗುತ್ತಾರೆ. ಈ ಅನಿವಾರ್ಯ ಕಾರಣದಿಂದ ಜೆಡಿಎಸ್‌ಗೆ ಹಿನ್ನಡೆಯಾಯಿತು. ಆದ್ದರಿಂದ ಪಕ್ಷದ ದೃಷ್ಠಿಯಿಂದ ನಿಷ್ಟೆಯಿಂದ ಕೆಲಸಮಾಡಲು ಸೂಚಿಸಿದ ಅವರು, ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷ ಕಟ್ಟುವಂತಾಗಬೇಕು. ಮೊದಲಿಂದಲು ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದ್ದೇವೆ. ಇಂದು ಜಂಟಿಯಾಗಿ ಹೋಗಲು ತೀರ್ಮಾನಿಸಿದ್ದೇವೆ ಎಂದ ಅವರು, ವೋಟ್‌ಗೋಸ್ಕರ ಕಾಂಗ್ರೆಸ್ ಏನ್ನನ್ನು ಮಾಡಲು ಸಿದ್ಧವಾಗಿದೆ. ಆದ್ದರಿಂದ ಎದುರಿಸಲು ಹೊಂದಾಣಿಕೆಯಾಗಿದ್ದೇವೆ. ಜನರಲ್ಲೂ ಕೂಡ ಬಿಜೆಪಿ-ಜೆಡಿಎಸ್ ಒಂದಾಗುವ ಕೂಗಿದೆ. ಅದರಂತೆ ಒಂದಾಗಿದ್ದೇವೆ. ಜೆಡಿಎಸ್ ಗೆಟ್ಟಿಯಾಗಿದೆ. ಅದರಂತೆ ಜಿಲ್ಲಾ ಪದಾಧಿಕಾರಿಗಳು ಕೂಡ ಗಟ್ಟಿಯಾಗಬೇಕು ಎಂದು ಸಲಹೆ ಮಾಡಿದರು.

    ಸಭೆಯಲ್ಲಿ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್, ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಡಿ.ರವಿ, ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ರಮೇಶ್, ಹಿಂದುಳಿದ ಘಟಕ ಅಧ್ಯಕ್ಷ ಶಿವದಾಸ್, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಜಾಸೀರ್ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts