More

    ಅನುಮೋದನೆ ಪಡೆದ ಲಸಿಕೆಗಳು ಮೇಡ್​ ಇನ್​ ಇಂಡಿಯಾ ಎಂಬುದೇ ಪ್ರತಿ ಭಾರತೀಯನ ಹೆಮ್ಮೆ: ಪ್ರಧಾನಿ ಮೋದಿ

    ನವದೆಹಲಿ: ಭಾರತದ ಕಂಪೆನಿಗಳು ಸಿದ್ಧಪಡಿಸಿರುವ ಎರಡು ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿರುವುದನ್ನು “ಕರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ನಿರ್ಣಾಯಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

    ಸೆರಂ ಇನ್ಸ್ಟಿಟ್ಯೂಟ್​ನ ಕೋವಿಶೀಲ್ಡ್ ಮತ್ತು ಭಾರತ್ ಬಯೊಟೆಕ್​ನ ಕೋವಾಕ್ಸಿನ್​ ಲಸಿಕೆಗಳ ತುರ್ತು ಬಳಕೆಗೆ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ವಿ.ಜಿ.ಸೊಮಾನಿ ಅನುಮೋದನೆ ನೀಡಿದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಸರಣಿ ಟ್ಟೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ನಿರ್ಧಾರದಿಂದ ಸ್ವಸ್ಥ ಮತ್ತು ಕೋವಿಡ್ ಮುಕ್ತ ಭಾರತದ ಗುರಿ ಸಾಧಿಸಲು ಬಲ ಸಿಕ್ಕಿದೆ ಎಂದಿರುವ ಮೋದಿ, ಈ ಕಾರ್ಯದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ-ಸಂಶೋಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    “ತುರ್ತುಬಳಕೆಗೆ ಅನುಮೋದನೆ ಸಿಕ್ಕಿರುವ ಎರಡೂ ಲಸಿಕೆಗಳು `ಮೇಡ್ ಇನ್ ಇಂಡಿಯಾ’ ಆಗಿರುವುದು ಹೆಮ್ಮೆಯ ಸಂಗತಿ. ಇದು ಆತ್ಮನಿರ್ಭರ ಭಾರತ ನಿರ್ಮಾಣದ ಕನಸನ್ನು ನನಸಾಗಿಸಲು ನಮ್ಮ ವೈಜ್ಞಾನಿಕ ಸಮುದಾಯಕ್ಕಿರುವ ಇಚ್ಛಾಶಕ್ತಿಯನ್ನು ತೋರಿಸುತ್ತದೆ” ಎಂದು ಮೋದಿ ಕೊಂಡಾಡಿದ್ದಾರೆ.

    ಕಠಿಣ ಪರಿಸ್ಥಿತಿಯಲ್ಲೂ ಅಸಾಧಾರಣವಾದ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೋಲೀಸರು, ಸಫಾಯಿ ಕರ್ಮಚಾರಿಗಳಿಗೆ ಮತ್ತು ಎಲ್ಲ ಕರೊನಾ ವಾರಿಯರ್​ಗಳಿಗೂ ಮತ್ತೆ ಕೃತಜ್ಞತೆ ಸಲ್ಲಿಸಿದ್ದು, ದೇಶದ ಜನರ ಪ್ರಾಣ ಉಳಿಸುತ್ತಿರುವುದ್ದಕ್ಕೆ ನಾವು ಋಣಿಯಾಗಿರಬೇಕು ಎಂದಿದ್ದಾರೆ. (ಏಜೆನ್ಸೀಸ್)

    ಕರೊನಾ ಲಸಿಕೆ ಕಾಯುವಿಕೆ ಅಂತ್ಯ: ಕೋವಿಶೀಲ್ಡ್​, ಕೋವಾಕ್ಸಿನ್​ ಬಳಕೆಗೆ ಅನುಮೋದನೆ

    ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

    ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts