More

    ಅಯೋಧ್ಯೆಯಲ್ಲಿ ಜ.16ರಿಂದ ದೈವಿಕ ಕಾರ್ಯಕ್ರಮಗಳು ಆರಂಭ – ಡಿ.30ಕ್ಕೆ ಪ್ರಧಾನಿ ಮೋದಿ ಭೇಟಿ

    ಅಯೋಧ್ಯೆ: ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇಗುಲದ ಶಂಕುಸ್ಥಾಪನೆ ಕಾರ್ಯಕ್ರಮದ ಸಿದ್ಧತೆಗಳು ಶರವೇಗದಲ್ಲಿ ನಡೆಯುತ್ತಿದ್ದು, ಜ.22 ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ಅತ್ಯಂತ ವೈಭವದಿಂದ ನಡೆಯಲಿದೆ. ಇದಕ್ಕೆ ಪೂರಕವಾಗಿ ಭವ್ಯವಾದ ದೇವಾಲಯದಲ್ಲಿ ವಿವಿಧ ದೈವಿಕ ಕಾರ್ಯಕ್ರಮಗಳು ಜ.16ರಿಂದಲೇ ಆರಂಭವಾಗುತ್ತಿವೆ. ಇದರ ವಿವರ ಇಲ್ಲಿದೆ.

    ಇದನ್ನೂ ಓದಿ: ರಾಮ ಮಂದಿರ ಕುರಿತು ಸ್ಯಾಮ್​ ಪಿತ್ರೋಡಾ ಹೇಳಿಕೆ ವಿವಾದ: ಕಾಂಗ್ರೆಸ್​ ನೀಡಿದ ಸ್ಪಷ್ಟನೆ ಏನು?

    ಜ.16 ರಿಂದ ಏಳು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳಂತೆ ಪ್ರಕ್ರಿಯೆಗಳು ದೊಡ್ಡ ಪ್ರಮಾಣದಲ್ಲಿ ನಡೆಯಲಿವೆ. ಜ. 22 ರಂದು ರಾಮಲಲ್ಲಾ (ಬಾಲರಾಮ) ರೂಪದಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗುತ್ತಿದೆ. ದೇವಾಲಯ ಟ್ರಸ್ಟ್ ಬಿಡುಗಡೆ ಮಾಡಿರುವ ಏಳು ದಿನಗಳ ವೇಳಾಪಟ್ಟಿಯು ಈ ಕೆಳಗಿನಂತಿದೆ.

    ಜ.16: ದೇವಸ್ಥಾನದ ಟ್ರಸ್ಟ್ ನೇಮಿಸಿದ ಆತಿಥೇಯರಿಂದ ಪ್ರಾಯಶ್ಚಿತ್ತ, ಸರಯು ನದಿ ದಡದಲ್ಲಿ ದಶವಿದ್ ಸ್ನಾನ, ವಿಷ್ಣು ಪೂಜೆ ಮತ್ತು ಗೋದಾನ.
    ಜ.17: ರಾಮಲಲ್ಲಾ ವಿಗ್ರಹದೊಂದಿಗೆ ಅಯೋಧ್ಯೆಯಲ್ಲಿ ಮೆರವಣಿಗೆ. ಭಕ್ತರು ಮಂಗಲ ಕಲಶದಲ್ಲಿ ಸರಯು ಜಲವನ್ನು ಹೊತ್ತು ದೇವಾಲಯವನ್ನು ತಲುಪುತ್ತಾರೆ.
    ಜ.18: ಗಣೇಶ ಅಂಬಿಕಾ ಪೂಜೆ, ವರುಣ ಪೂಜೆ, ಮಾತೃಕಾ ಪೂಜೆ, ಬ್ರಾಹ್ಮಣ ವರಣ, ವಾಸ್ತು ಪೂಜೆ ಇತ್ಯಾದಿಗಳೊಂದಿಗೆ ಔಪಚಾರಿಕ ಆಚರಣೆಗಳು ಪ್ರಾರಂಭವಾಗುತ್ತವೆ.
    ಜ.19: ಅಗ್ನಿ ಸ್ಥಾಪನ, ನವಗ್ರಹ ಸ್ಥಾಪನೆ ಮತ್ತು ಹವನ.
    ಜ.20: ದೇವಾಲಯದ ಗರ್ಭಗುಡಿಯನ್ನು ಸರಯು ನದಿಯ ಪವಿತ್ರ ನೀರಿನಿಂದ ತೊಳೆದ ನಂತರ, ವಾಸ್ತು ಶಾಂತಿ ಮತ್ತು ಅನ್ನಾಧಿವಾಸಗಳು ಇರುತ್ತವೆ.
    ಜ.21: 125 ಕಲಶಗಳೊಂದಿಗೆ ದೈವಿಕ ಸ್ನಾನದ ನಂತರ, ಶಯಾಧಿವಾಸ್ ಮಾಡಲಾಗುತ್ತದೆ.
    ಜ.22: ಬೆಳಿಗ್ಗೆ ಪೂಜೆಯ ನಂತರ, ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ ರಾಮಲಲ್ಲಾ ದೇವರ ಪ್ರತಿಷ್ಠಾಪಿಸಲಾಗುತ್ತದೆ.

    ಡಿ.30ಕ್ಕೆ ಮೋದಿ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿ.30 ರಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿರುವುದರಿಂದ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಮೋದಿಯವರು ಅಯೋಧ್ಯೆಯಲ್ಲಿ 15ಸಾವಿರ ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು, ನವೀಕೃತ ರೈಲು ನಿಲ್ದಾಣಕ್ಕೆ ಅಯೋಧ್ಯಾ ಧಾಮ್ ಎಂದು ನಾಮಕರಣ, ಉದ್ಘಾಟನೆ ಹಲವು ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿಯವರ ರೋಡ್‌ಶೋ ಸಹ ಇರುತ್ತದೆ.

    ಪ್ರಧಾನಿ ಮೋದಿಯವರಿಂದ ಡಿ.30ರಂದು ಉದ್ಘಾಟನೆ: ಅಮೃತ ಭಾರತ ಎಕ್ಸ್​ಪ್ರೆಸ್​ ವೈಶಿಷ್ಟ್ಯಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts