More

    ತಪ್ಪೆಸಗಿದವರಿಗೆ ಶಿಕ್ಷೆ ಆಗಲೇಬೇಕು : ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಹಾಸನ ಪ್ರಕರಣಕ್ಕೆ ಸಂಬAಧಿಸಿದAತೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ. ತಪ್ಪು ಮಾಡಿದರೆ ಶಿಕ್ಷೆ ಕೊಡುವುದಕ್ಕೆ ಸರ್ಕಾರ ಕಾದು ನಿಂತಿದೆ. ಯಾರೇ ಆಗಲಿ, ತಪ್ಪು ಮಾಡಿದರೆ ಶಿಕ್ಷೆಯಾಗಲೇಬೇಕು ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದರು.
    ನಗರದಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿ ಡಾ.ಉಮೇಶ ಜಾಧವ್ ಪರ ಮನೆ ಮನೆ ತೆರಳಿ ಮತಯಾಚನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ದೌರ್ಜನ್ಯ ಮಾಡುವವರಿಗೆ ಉಗ್ರ ಶಿಕ್ಷೆ ಆಗಬೇಕು ಎಂದರು.
    ನೇಹಾ ಹಿರೇಮಠ ವಿಚಾರದಲ್ಲಿ ಬೀದಿಗಿಳಿದ ಬಿಜೆಪಿ ಈಗೇಕೆ ಸೈಲೆಂಟ್ ಆಗಿರುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಸರ್ಕಾರವೇ ಕಠಿಣ ಹೆಜ್ಜೆ ಇಡಬೇಕು. ಸರ್ಕಾರ ಯಾರ ಕೈಯಲ್ಲಿದೆ. ಎಲ್ಲವನ್ನು ಬಿಜೆಪಿ ಕಡೆ ತೋರಿಸುವುದಾದರೆ ಸರ್ಕಾರ ಯಾಕೆ ಬೇಕು? ಎಲ್ಲ ಮೋದಿ, ಬಿಜೆಪಿ ಮಾಡಬೇಕು ಅಂತಾದ್ರೆ ಕುರ್ಚಿ ಬಿಟ್ಟು ಕೆಳಗಿಳಿಯಲಿ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
    ಸಂತ್ರಸ್ತೆಯರಿಗೆ ಸರ್ಕಾರ ರP್ಷÀಣೆ ಕೊಡಬೇಕು. ಸರ್ಕಾರ ಕೈಕಟ್ಟಿ ಕುಳಿತಿದೆಯಾ ಅಥವಾ ಏನಾದ್ರು ಹೊಂದಾಣಿಕೆ ಮಾಡಿಕೊಂಡಿದೆಯಾ ಎಂಬುದನ್ನು ರಾಜ್ಯ ಸರ್ಕಾರವೇ ಹೇಳಬೇಕು. ತP್ಷÀಣ ಕ್ರಮ ಕೈಗೊಂಡು ಉಗ್ರ ಶಿಕ್ಷೆ ಕೊಡಿಸಬೇಕು. ಪ್ರಜ್ವಲ್ ವಿದೇಶಕ್ಕೆ ಪರಾರಿ ಹಿಂದೆ ಬಿಜೆಪಿ ಕೈವಾಡ ಎಂಬುದನ್ನು ಅಲ್ಲಗಳೆದರು.
    ಪ್ರಜ್ವಲ್ ವಿದೇಶಕ್ಕೆ ಹೋಗುವಾಗ ಕೇಸ್ ಆಗಿರಲಿಲ್ಲ. ರಾಜ್ಯ ಸರ್ಕಾರ ಏನು ಮಾಡ್ತಾ ಇತ್ತು? ಸಿಡಿ, ಪೆನ್‌ಡ್ರೆÊವ್ ಮೊದಲೇ ಬಂದಿತ್ತು. ವಿದೇಶಕ್ಕೆ ಹೋಗಲು ಹೇಗೆ ಬಿಟ್ಟಿದ್ದೀರಿ? ಕರ್ನಾಟಕದ ಏರ್‌ಪೋರ್ಟ್ನಿಂದ ಹೋಗಿz್ದÁರೆ. ನಿಮ್ಮ ಇಂಟೆಲಿಜೆನ್ಸ್ ಏನು ಮಾಡುತ್ತಿತ್ತು? ಅವರಲ್ಲಿ ಡಿಪ್ಲೊಮೆಟಿಕ್ ಪಾಸ್‌ಪೋರ್ಟ್ ಇದೆ. ನಿಮ್ಮ ಸರ್ಕಾರ ಕಣ್ಮುಚ್ಚಿ ಕುಳಿತಿದ್ದರಿಂದಲೇ ಇದೆಲ್ಲ ನಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts