More

    ಪಾಕಿಸ್ತಾನ ಕೂಡ ಪ್ರಧಾನಿ ಮೋದಿ ಅವರಂತಹ ನಾಯಕನನ್ನು ಬಯಸುತ್ತಿದೆ: ಸಿಎಂ ಮೋಹನ್​ ಯಾದವ್

    ಭೋಪಾಲ್: ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ತಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕನನ್ನು ಬಯಸುತ್ತಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.

    ಭೋಪಾಲ್​ನ ಆನಂದ್ ನಗರದಲ್ಲಿರುವ ರಾಮ ಮಂದಿರದಲ್ಲಿ ನಡೆದ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದ ಮೋಹನ್​ ಯಾದವ್​ ಜಗತ್ತು ಕಣ್ಣಿಟ್ಟಿರುವಂತಹ ಸಮಯಕ್ಕೆ ಭಾರತ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ.

    ಇದನ್ನೂ ಓದಿ: ರಾಮಮಲಲ್ಲಾನ ಪ್ರತಿಷ್ಟಾಪನೆಗೆ ದಿನಗಣನೆ; ಶ್ರೀರಾಮನ ಟ್ಯಾಟೂಗೆ ಮುಗಿಬಿದ್ದ ಜನ

    ಪ್ರಧಾನಿ ಮೋದಿ ನಡೆಯುವಾಗ, ಕಾರ್ಯ ನಿರ್ವಹಿಸುವಾಗ ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಫಲಿತಾಂಶಗಳ ಮೇಲೆ ಜಗತ್ತು ಕಣ್ಣಿಟ್ಟಿರುವಂತಹ ಸಮಯಕ್ಕೆ ಭಾರತ ಸಾಕ್ಷಿಯಾಗಿದೆ. ನಾವು ಮಾತ್ರವಲ್ಲ, ನೆರೆಯ ದೇಶಗಳೂ ಇದನ್ನು ಹೇಳುತ್ತವೆ. ಪಾಕಿಸ್ತಾನದಂತಹ ಶತ್ರು ರಾಷ್ಟ್ರದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಮೋದಿ ಅವರ ನಾಯಕನಾಗಿರಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

    ರಾಮನ ನಂತರ 17 ಲಕ್ಷ ವರ್ಷಗಳಾದರೂ ರಾಮರಾಜ್ಯ ಇರಬೇಕು ಎಂಬ ಭಾವನೆ ಇದೆ. ಪ್ರತಿಯೊಬ್ಬರೂ ರಾಮನಂತಹ ಮಗನನ್ನು ಬಯಸುತ್ತಾರೆ. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಅಂಗವಾಗಿ ಮಧ್ಯಪ್ರದೇಶ ಸರ್ಕಾರ ಈಗಾಗಲೇ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ಮತ್ತು ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ ಎಂದು ಮುಖ್ಯಮಂತ್ರಿ ಮೋಹನ್​ ಯಾದವ್​ ತಿಳಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts