More

    ನಿತ್ಯ ಭಗವಂತನ ಸ್ಮರಣೆ ಅಗತ್ಯ

    ರಾಯಚೂರು: ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲರೂ ಲೌಕಿಕ ಜೀವನದಲ್ಲಿ ಮುಳುಗಿದ್ದು, ಅದು ಅನಿವಾರ್ಯವೂ ಆಗಿದೆ. ಆದರೆ, ಭಗವಂತನ ಉಪಕಾರವನ್ನು ಸ್ಮರಿಸಲು ನಿತ್ಯ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.
    ಸತ್ಯನಾಥ ಕಾಲನಿಯಲ್ಲಿನ ಶ್ರೀ ಪ್ರಾಣದೇವರ ದೇವಸ್ಥಾನದಲ್ಲಿ ವಿಶ್ವ ಸುವರ್ಣೋತ್ಸವ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿದರು. ನಮ್ಮ ಪ್ರತಿ ಹೆಜ್ಜೆಯಲ್ಲೂ ಭಗವಂತ ನಿಂತು ಮುನ್ನಡೆಸುತ್ತಾನೆ. ಹೀಗಾಗಿ ಭಗವಂತನ ಪ್ರಜ್ಞೆ ನಮಗಿರಬೇಕು ಎಂದರು.

    ವಿಶ್ವ ಸುವರ್ಣೋತ್ಸವ

    ಅದಮಾರು ಮಠಾಧೀಶರು ಸನ್ಯಾಸ ದೀಕ್ಷೆ ಪಡೆದು 50 ವರ್ಷ ಗತಿಸಿದ ಅಂಗವಾಗಿ ವಿಶ್ವ ಸುವರ್ಣೋತ್ಸವ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಭಂಡಾರಕೇರಿ ಮಠದ ಹಿರಿಯ ಯತಿಗಳಾಗಿದ್ದ ವಿದ್ಯಾಮಾನ್ಯ ತೀರ್ಥರು ಸನಾತನ ವೈದಿಕ ಪರಂಪರೆ ಸಂರಕ್ಷಿಸಲು ವಿದ್ಯಾರ್ಥಿಗಳಿಗೆ ಗುರುಕುಲ ಸ್ಥಾಪಿಸಿದರು. ಅದನ್ನು ಅದಮಾರು ಶ್ರೀಗಳು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದರು.

    ಇದನ್ನೂ ಓದಿ:ಕೃತಿಗಳ ರೂಪದಲ್ಲಿ ಬನ್ನಂಜೆ ಜೀವಂತ, ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಸಂಸ್ಮರಣೆ

    ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮ ಆಯೋಜನೆ ಸಮಿತಿ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ನರಸಿಂಗರಾವ್ ದೇಶಪಾಂಡೆ, ಪ್ರಾಣೇಶ ಮುತಾಲಿಕ, ವೇಣುಗೋಪಾಲ ವರಪ್ಪ, ಮುರಳಿ ಪ್ಯಾಟಿ, ಹರಿ ಆಚಾರ್, ಮುಕುಂದಾಚಾರ್, ಹನುಮೇಶ ಸರಾಫ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts