More

  ಸಾಮಾಜಿಕ ನ್ಯಾಯ ಕಾಂಗ್ರೆಸ್ ಜೀವಾಳ

  ಹಿರಿಯೂರು: ಜಾತ್ಯತೀತ ತತ್ವ-ಸಾಮಾಜಿಕ ನ್ಯಾಯ ಸಿದ್ಧಾಂತ ಕಾಂಗ್ರೆಸ್ ಪಕ್ಷದ ಜೀವಾಳವಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತ ಕಾಯಲು ಪಕ್ಷ ಬದ್ಧವಾಗಿದೆ ಎಂದು ಬ್ಲಾಕ್ ಅಧ್ಯಕ್ಷ ಖಾದಿ ಜೆ.ರಮೇಶ್ ಹೇಳಿದರು.

  ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

  ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಂಗ್ರೆಸ್, ದೇಶದ ಒಳಿತಿಗಾಗಿ ಹೋರಾಡುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜನರ ವಿಶ್ವಾಸಗಳಿಸಿದ್ದು, ಪಕ್ಷ ನಿಷ್ಠೆ ಇದ್ದರೆ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನಮಾನ ನಿಶ್ಚಿತ ಎಂದರು.

  ಮುಖಂಡರಾದ ಕೃಷ್ಣಮೂರ್ತಿ, ಈರಲಿಂಗೇಗೌಡ, ಚಂದ್ರನಾಯಕ್, ಸಿದ್ದೇಶ್, ಮಮತಾ, ಶಿವಕುಮಾರ್, ಅಯೂಬ್ ಖಾನ್, ಅರುಣ್, ಜ್ಞಾನೇಶ್, ಗಿರಿಜಮ್ಮ, ಶಾಲಿನಿ, ಕಲ್ಲಹಟ್ಟಿ ಹರೀಶ್, ಸೈಯದ್ ಸಲಾವುದ್ದೀನ್, ಆರ್.ನಾಗೇಂದ್ರನಾಯ್ಕ, ಕಂದಿಕೆರೆ ಸುರೇಶ್‌ಬಾಬು, ಅಮೃತೇಶ್ವರ ಸ್ವಾಮಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts