More

    ಕೇಂದ್ರ ಬಜೆಟ್​ 2020: ಪ್ರತಿ ಜಿಲ್ಲೆಯೂ ಎಕ್ಸ್​ಪೋರ್ಟ್​ ಹಬ್​, ಮೀನುಗಾರರ ಸಂಘಟನೆ ರಚನೆ

    ನವದೆಹಲಿ: ದೇಶದ ಪ್ರತಿ ಜಿಲ್ಲೆಗಳನ್ನೂ ಎಲೆಕ್ಟ್ರಾನಿಕ್​ ಉತ್ಪನ್ನಗಳ ಎಕ್ಸ್​ಪೋರ್ಟ್​ ಹಬ್​ ಮಾಡುವುದು ಸರ್ಕಾರದ ಗುರಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2020-21ನೇ ಸಾಲಿನ ಬಜೆಟ್​ ಮಂಡನೆಯ ಸಮಯದಲ್ಲಿ ತಿಳಿಸಿದ್ದಾರೆ.

    ದೇಶದಲ್ಲಿ ಪ್ರಾದೇಶಿಕವಾಗಿ ಎಲೆಕ್ಟ್ರಾನಿಕ್​ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಅವಶ್ಯಕತೆ ಇದೆ. ಪ್ರತಿ ರಾಜ್ಯಗಳಲ್ಲಿಯೂ ಇನ್ವೆಸ್ಟ್​ಮೆಂಟ್​ ಕ್ಲಿಯರೆನ್ಸ್​ ಸೆಲ್​ಗಳನ್ನು ತೆರೆದು ಅದರ ಮೂಲಕ ಹೂಡಿಕೆದಾರರಿಗೆ ಉಚಿತ ಸಲಹೆ ನೀಡುವತ್ತ ಸರ್ಕಾರ ಹೆಜ್ಜೆ ಹಾಕಲಿದೆ ಎಂದು ಸಚಿವೆ ತಿಳಿಸಿದ್ದಾರೆ. ಸೆಲ್​ ಫೋನ್​, ಸೆಮಿ ಕಂಡಕ್ಟರ್​ ಮತ್ತು ಎಲೆಕ್ಟ್ರಾನಿಕ್​ ಉತ್ಪನ್ನಗಳ ಉತ್ಪಾದನೆಗೆ ಬೆಂಬಲ ನೀಡುವ ಸಲುವಾಗಿ ನೂತನ ಸ್ಕೀಮ್​ವೊಂದನ್ನು ಜಾರಿಗೆ ತರುವುದಾಗಿ ತಿಳಿಸಿದರು.

    ಸಾಗರ್​ ಮಿತ್ರಾಸ್​ ಹೆಸರಿನಲ್ಲಿ ಗ್ರಾಮಗಳ ಯುವಕರಿಂದ ಮೀನುಗಾರಿಕೆಯನ್ನು ವಿಸ್ತರಣೆ ಮಾಡಲಾಗುವುದು. ಇದಕ್ಕೆಂದು 500 ಮೀನುಗಾರರ ಸಂಘಟನೆಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

    2025ರ ವೇಳೆಗೆ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದಾಗಿ ಸಚಿವೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts