More

    ರೇಡಿಯೊ ಪ್ರಸರಣಾ ಕೇಂದ್ರ ಸ್ಥಾಪನೆ ಕನಸು ಸಾಕಾರ: ಬಿವೈಆರ್

    ಶಿವಮೊಗ್ಗ: ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ರೇಡಿಯೊ ಪ್ರಸರಣಾ ಕೇಂದ್ರ ಸ್ಥಾಪನೆಯ ಕನಸು ಸಾಕಾರಗೊಳ್ಳುವುದು ನಿಶ್ಚಿತವಾಗಿದೆ. ಲೋಕಸಭಾ ಸದಸ್ಯ ರಾಘವೇಂದ್ರ ಅವರ ಪ್ರಯತ್ನದಿಂದಾಗಿ ಆಕಾಶವಾಣಿ 10 ಕಿಲೋವಾಟ್ ಎಂಎಂ ಪ್ರಸರಣ ಕೇಂದ್ರ ಸ್ಥಾಪನೆಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚೆನ್ನೈನಿಂದವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.

    ನಗರದ ಸಹ್ಯಾದ್ರಿ ಕಾಲೇಜು ಎದುರಿನ ದೂರದರ್ಶನ ಕೇಂದ್ರದಲ್ಲಿ ಎ್ಎಂ ಟ್ರಾನ್ಸ್‌ಮೀಟರ್ ಸ್ಥಾಪನೆಯಾಗಲಿದೆ. ಭದ್ರಾವತಿ ಆಕಾಶವಾಣಿ ಮುಂದಿನ ತಿಂಗಳು 60ನೇ ವಸಂತಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಇದೊಂದು ಅಪರೂಪದ ಕ್ಷಣವಾಗಿದೆ. ಮನರಂಜನೆ ದೃಷ್ಟಿಯಿಂದ ಇದು ಮೈಲಿಗಲ್ಲು ಎಂದರೆ ಅಚ್ಚರಿಯಲ್ಲ.
    ಮೊಬೈಲ್, ಇಂಟರ್‌ನೆಟ್ ಹಾಗೂ ಕಂಪ್ಯೂಟರ್ ಯುಗದಲ್ಲಿ ರೇಡಿಯೋ ಬಳಕೆ ಕಡಿಮೆಯಾಗುತ್ತಿದ್ದರೂ ಕೇಂದ್ರ ಸರ್ಕಾರದ ಪ್ರಸಾರ ಭಾರತಿಯ ಆಕಾಶವಾಣಿ ಇಂದಿಗೂ ತನ್ನ ವಿಶ್ವಾಸಾರ್ಹ ಸುದ್ದಿ, ಮನರಂಜನೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಸಾರದಲ್ಲಿ ಮೊದಲ ಸ್ಥಾನದಲ್ಲಿದೆ.
    8 ವರ್ಷಗಳ ಹಿಂದೆ ಲೋಸಕಭಾ ಸದಸ್ಯ ಬಿ.ವೈ.ರಾಘವೇಂದ್ರ ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಎ್ಎಂ ಮೋಡ್‌ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ಉದ್ದೇಶದಿಂದ ಪ್ರಯತ್ನ ಆರಂಭಿಸಿದ್ದರು. ಈ ಹಿಂದೆ ವಾರ್ತಾ ಸಚಿವರಾಗಿದ್ದ ಪ್ರಕಾಶ್ ಜಾವಡೇಕರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
    ಆ ಸಂದರ್ಭದಲ್ಲಿ ಆಕಾಶವಾಣಿ ಭದ್ರಾವತಿಗೆ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಎ್ಎಂ ಟ್ರಾನ್ಸ್‌ಮೀಟರ್ ಒದಗಿಸಲಾಗಿತ್ತು. ಆದರೆ ಇದರಿಂದ 20 ಕಿಮೀವರೆಗೆ ಮಾತ್ರ ಕಾರ್ಯಕ್ರಮ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಬಳಿಕ ಬಿ.ವೈ.ರಾಘವೇಂದ್ರ 10 ಕಿಲೋ ವಾಟ್ ಎ್ಎಂ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕಳೆದ ಆರು ತಿಂಗಳಿನಿಂದ ಇದಕ್ಕೆ ಹೆಚ್ಚು ಒತ್ತು ನೀಡಿದರು.
    ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಮತ್ತು ಪ್ರಸಾರ ಭಾರತಿ ಸಿಇಒ ದ್ವಿವೇದಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರ ಲವಾಗಿ 9 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ 10 ಕಿಲೋ ವಾಟ್ ಎ್ಎಂ ಟ್ರಾನ್ಸ್‌ಮೀಟರ್ ಮಂಜೂರು ಮಾಡಿದೆ.
    ನೆರೆ ಜಿಲ್ಲೆಗಳಿಗೂ ಪ್ರಸಾರ:ನೂತನವಾಗಿ 10 ಕಿಲೋ ವಾಟ್ ಎಫ್‌ಎಂ ಟ್ರಾನ್ಸ್‌ಮೀಟರ್‌ನಿಂದ ವಾಹನಗಳಲ್ಲಿ ಪ್ರಯಾಣಿಸುವ ವೇಳೆಯೂ ಎಫ್‌ಎಂ ಕಾರ್ಯಕ್ರಮವನ್ನು ಆಲಿಸಬಹುದು. ಜಿಲ್ಲೆಯ ಎಲ್ಲ ಮೂಲೆಗಳಿಗೂ ಸ್ಪಷ್ಟ ದ್ವನಿಯೊಂದಿಗೆ ಕಾರ್ಯಕ್ರಮ ಪ್ರಸಾರವಾಗಲಿದೆ.
    150 ಕಿಲೋಮೀಟರ್‌ವರೆಗೆ ಇದರ ವ್ಯಾಪ್ತಿ ಇರುತ್ತದೆ. ಹೀಗಾಗಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಉತ್ತರ ಕನ್ನಡಜಿಲ್ಲೆಗಳ ಸಾವಿರಾರು ಮಂದಿಗೂ ಕಾರ್ಯಕ್ರಮ ತಲುಪಲಿದೆ. ಜಿಲ್ಲೆಯ ಯುವ ಪ್ರತಿಭೆಗಳು, ಜಾನಪದ ಕಲಾವಿದರು, ಮಹಿಳೆಯರು, ಮಕ್ಕಳು, ರೈತರು ಕಾರ್ಯಕ್ರಮ ನೀಡುವ ಮೂಲಕ ತಮ್ಮ ಪ್ರತಿಭೆಗೆ ವೇದಿಕೆ ಪಡೆಯಬಹುದಾಗಿದೆ. ಭದ್ರಾವತಿಯಲ್ಲಿಯೇ ಸ್ಟುಡಿಯೋ, ಧ್ವನಿ ಮುದ್ರಣಹಾಗೂ ಕಾರ್ಯಕ್ರಮ ಪ್ರಸಾರವಾಗಲಿದೆ. ಇದರಿಂದ ಭದ್ರಾವತಿ ಆಕಾಶವಾಣಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ.
    ಕೋಟಿ ಜನಕ್ಕೆ ತಲುಪಲಿದೆ ಎಫ್‌ಎಂ: ಸುಮಾರು ಒಂದು ಕೋಟಿ ಜನರು ಆಕಾಶವಾಣಿ ಎಫ್‌ಎಂ ಕೇಳಬಹುದಾಗಿದೆ. 60ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಭದ್ರಾವತಿ ಆಕಾಶವಾಣಿ ವೃದ್ಧಾಪ್ಯದತ್ತ ಹೆಜ್ಜೆ ಹಾಕುತ್ತಿಲ್ಲ. ಬದಲಿ ನವ ಯೌವ್ವನದತ್ತ ಸಾಗುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ವರ್ಚುವಲ್ ಉದ್ಘಾಟನಾ ಕಾರ್ಯಕ್ರಮ ವೀಕ್ಷಿಸಿದ ಬಳಿಕ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಲೆನಾಡು ಹೊಸತನ ಪಡೆಯುತ್ತಿದೆ. ಭದ್ರಾವತಿ ಆಕಾಶವಾಣಿಗೆ ಇದು ಹೆಮ್ಮೆಯ ದಿನವಾಗಿದೆ. ಕೇಂದ್ರ ವಾರ್ತಾ ಸಚಿವರನ್ನು ಭೇಟಿಯಾಗಿ ನಾನು ಮಾಡಿದ ಪ್ರಯತ್ನಗಳು ಫಲಿಸಿವೆ ಎಂಬ ಆತ್ಮತೃಪ್ತಿಯಿದೆ ಎಂದರು.
    ಕೇಂದ್ರ ಸರ್ಕಾರ ಮಲೆನಾಡು ಜನರಿಗೆ ದೊಡ್ಡ ಕೊಡುಗೆ ನೀಡಿದೆ. ಕೇಂದ್ರದ ನಿವೃತ್ತ ನೌಕರರಿಗೆ ಆಸ್ಪತ್ರೆ ಮಂಜೂರು ಮಾಡುವಂತೆ ಕೋರಿದ್ದೆ. ಇನ್ನು ಎರಡು ದಿನಗಳಲ್ಲಿ ಕೇಂದ್ರದಿಂದ ತಂಡವೊಂದು ಬಂದು ಪರಿಶೀಲನೆ ನಡೆಸಲಿದೆ. ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಕ್ರೀಡಾ ಸಂಕೀರ್ಣ ನಿರ್ಮಾಣವಾಗಬೇಕಿತ್ತು. ಆದರೆ ಅದಕ್ಕೆ ಅನೇಕ ಅಡೆತಡೆಗಳು ಉಂಟಾದವು. ಅಂತಿಮವಾಗಿ ವಾಜಪೇಯಿ ಬಡಾವಣೆಯಲ್ಲಿ ಸಂಕೀರ್ಣ ನಿರ್ಮಾಣ ಮಾಡಲು ತೀರ್ಮಾನಿಸಿದೆ ಎಂದು ಹೇಳಿದರು.
    ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts