More

    ಕೋವಿಡ್ ಟೆಸ್ಟ್​ ಮಾಡಿಸುವಷ್ಟರಲ್ಲಿ ಮರಗಳ್ಳ ಎಸ್ಕೇಪ್​ – ಅರಣ್ಯಾಧಿಕಾರಿಗಳ ಬಲೆಗೆ ಮತ್ತೆ ಬಿದ್ದ !

    ಕೊಡಗು: ಕೋವಿಡ್ ಟೆಸ್ಟ್​ ಮಾಡಿಸುವಷ್ಟರಲ್ಲೇ ಎಸ್ಕೇಪ್ ಆಗಿದ್ದ ಮರಗಳ್ಳ ಕೆಲವೇ ಗಂಟೆಗಳ ಅವಧಿಯಲ್ಲಿ ಅರಣ್ಯಾಧಿಕಾರಿಗಳ ಬಲೆಗೆ ಮತ್ತೆ ಬಿದ್ದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.

    ಪರಾರಿಯಾಗಲೆತ್ನಿಸಿ ಮತ್ತೆ ಸಿಕ್ಕಿಬಿದ್ದ ಮರಗಳ್ಳನನ್ನು ಮೈಸೂರು ಜಿಲ್ಲೆ ಹುಣಸೂರಿನ ಜುನೈದ್ ಪಾಷಾ(24) ಎಂದು ಗುರುತಿಸಲಾಗಿದೆ. ಸೋಮವಾರ ಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರಿ‌ನ ತೋಟದಲ್ಲಿ ಬೀಟೆ ಮರ ಕಳ್ಳತನ ಮಾಡಿದ್ದ ಆರೋಪಿ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದ ಮೂಲಕ ಅದನ್ನು ಸಾಗಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ ಜುನೈದ್ ಪಾಷಾ ನನ್ನು ಬಂಧಿಸಿದ್ದಾರೆ. ಅಲ್ಲದೆ ಅಶೋಕ್ ಲೈಲಾಂಡ್ ಗೂಡ್ಸ್ ವಾಹನ ಹಾಗೂ ಅದರಲ್ಲಿದ್ದ 9 ಬೀಟೆ ಮರದ ನಾಟವನ್ನು ವಾಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಟೀಮ್ ಇಂಡಿಯಾ ನೆಟ್ ಬೌಲರ್ ಪೊರೆಲ್‌ಗೆ ಗಾಯ, ತವರಿಗೆ ವಾಪಸ್

    ಕೋವಿಡ್ ನಿಯಮ ಪ್ರಕಾರ, ಆರೋಪಿಯನ್ನು ಟೆಸ್ಟ್​ಗಾಗಿ ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದ ವೇಳೆ ಜತೆಗೆ ಇದ್ದ ಅರಣ್ಯಇಲಾಖೆ ಸಿಬ್ಬಂದಿ ಆಲ್ಬರ್ಟ್ ಡಿಸೋಜ ,ದುರ್ಗೇಶ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ. ಆದರೆ, ಅಧಿಕಾರಿಗಳು ಮತ್ತೆ ಕಾರ್ಯಾಚರಣೆ ನಡೆಸಿ ಜುನೈದ್ ಪಾಷಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)

    ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts