More

    ಭಾರತಕ್ಕೆ ಅಮೆರಿಕದ ಹೊಸ ಅಂಬಾಸಿಡರ್​ ಆಗಲು ಲಾಸ್​ಏಂಜಲೀಸ್​ ಮೇಯರ್​ ಎರಿಕ್ ಎಂ.ಗಾರ್ಸೆಟ್ಟಿ ಹೆಸರು

    ವಾಷಿಂಗ್ಟನ್ : ಭಾರತಕ್ಕೆ ಅಮೆರಿಕದ ಅಂಬಾಸಿಡರ್​ ಆಗಲು ಲಾಸ್​ ಏಂಜಲೀಸ್​ ನಗರದ ಮೇಯರ್​ ಆದ ಎರಿಕ್ ಗಾರ್ಸೆಟ್ಟಿ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಅವರು ಪ್ರಸ್ತಾಪಿಸಿದ್ದಾರೆ. ಈ ಪ್ರಸ್ತಾವನೆಯನ್ನು ಸೆನೆಟ್​ ಅನುಮೋದಿಸಿದಲ್ಲಿ, 50 ವರ್ಷದ ಗಾರ್ಸೆಟ್ಟಿ ಅವರು ಮುಂಚಿನ ಅಂಬಾಸಿಡರ್​ ಕೆನ್ನೆತ್​ ಜಸ್ಟರ್​ ಅವರ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಈ ವಾರದ ಆರಂಭದಲ್ಲಿ ಜಸ್ಟರ್​ ಅವರನ್ನು ಅಮೆರಿಕದ ಫಾರಿನ್ ರಿಲೇಷನ್ಸ್​ ಕೌನ್ಸಿಲ್​ನ ಫೆಲ್ಲೋ ಆಗಿ ನೇಮಕ ಮಾಡಿದ್ದರಿಂದ ಭಾರತ ಅಂಬಾಸಿಡರ್​ ಸ್ಥಾನ ತೆರವಾಗಿತ್ತು. ಹಲವು ಇತರ ದೇಶಗಳ ಅಂಬಾಸಿಡರ್​ಗಳ ನಾಮನಿರ್ದೇಶನ ಮಾಡುತ್ತಾ, ಗಾರ್ಸೆಟ್ಟಿ ಅವರ ಹೆಸರನ್ನು ಭಾರತಕ್ಕಾಗಿ ಪ್ರಸ್ತಾವನೆ ಮಾಡಲಾಗಿದೆ.

    ಇದನ್ನೂ ಓದಿ: ಸೌರವ್​ ಗಂಗೂಲಿ-ನಗ್ಮಾ ಲವ್​ ಬ್ರೇಕಪ್​ ಆಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ..!

    2013 ರಿಂದ ಲಾಸ್​ ಏಂಜಲೀಸ್​ನ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎರಿಕ್ ಎಂ ಗಾರ್ಸೆಟ್ಟಿ ಅವರು, ಅಲ್ಲಿನ ಮೆಟ್ರೋ ಚೇರ್​ಮನ್​ ಕೂಡ ಆಗಿದ್ದಾರೆ. ಕ್ಲೈಮೇಟ್ ಮೇಯರ್ಸ್​ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾದ ಗಾರ್ಸೆಟ್ಟಿ ಪ್ಯಾರಿಸ್​ ಕ್ಲೈಮೇಟ್ ಒಪ್ಪಂದವನ್ನು ಅಂಗೀಕರಿಸಿದ 400 ಅಮೆರಿಕದ ಮೇಯರ್​ಗಳ ನೇತೃತ್ವ ವಹಿಸಿದ್ದಾರೆ. ಹವಾಮಾನ ಸಂಬಂಧಿತ ಕ್ರಮಗಳನ್ನು ಕೈಗೆತ್ತಿಕೊಂಡಿರುವ ಸಿ40 ಸಿಟೀಸ್​​ ಮುಖ್ಯಸ್ಥ ಕೂಡ ಆಗಿದ್ದು, ಈ ಬಗೆಗಿನ ಕಾರ್ಯವನ್ನು ಭಾರತದಲ್ಲಿ ವಿಸ್ತರಿಸುವುದರಲ್ಲಿ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್)

    ಶ್ರೀ ವಶಿಷ್ಠ ಸೊಸೈಟಿ : 8 ನಿರ್ದೇಶಕರ ಮನೆ, ಕಚೇರಿ ಮೇಲೆ ದಾಳಿ

    ‘ಇರಲಿ ಎಚ್ಚರ! ಕಿಕ್ಕಿರಿದ ಸ್ಥಳಗಳಲ್ಲಿ ಕರೊನಾ ವೇಗವಾಗಿ ಹರಡುತ್ತದೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts