More

    ಸಮ ಸಾಮಾಜಕ್ಕಾಗಿ, ಸನಾತನ ಧರ್ಮದ ವಿರುದ್ಧ ಹೋರಾಟ

    ಕುಕನೂರು: ಬುದ್ಧ, ಬಸವ, ಅಂಬೇಡ್ಕರ್ ಅವರು ಸನಾತನ ಧರ್ಮಕ್ಕೆ ಬೇಸತ್ತು ಸಾಮಾಜಿಕ ಸಮಾನತೆಗೆ ಹೋರಾಟ ಮಾಡಿದರು ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ ರಾಮಚಂದ್ರಪ್ಪ ಹೇಳಿದರು.

    ಇದನ್ನೂ ಓದಿ: ಸನಾತನ ಧರ್ಮವನ್ನು ನಾಶ ಮಾಡಲು ಘಮಂಡಿಯಾ ಒಕ್ಕೂಟ ಸಂಕಲ್ಪ ಮಾಡಿದೆ: ಪ್ರಧಾನಿ ಮೋದಿ

    ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮಾನವ ಬಂಧುತ್ವ ವೇದಿಕೆಯ ಸಂಯೋಜನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

    ಜಾತಿ ತಾರತಮ್ಯ ಮರೆತು ಎಲ್ಲರೂ ಒಂದಾಗಬೇಕು. ಯಾರೂ ಮೇಲ್ಜಾತಿ ಇಲ್ಲ. ಎಲ್ಲರೂ ಒಂದೇ ಮೂಲದವರು. ಸನಾತನ ಧರ್ಮದ ಬಗ್ಗೆ ವ್ಯಾಖ್ಯಾನ ಮಾಡುತ್ತಿದ್ದಾರೆ.

    ದೇಶದ ಪ್ರಧಾನಿ ಮಣಿಪುರ ಹಿಂಸಾ ಕೃತ್ಯದ ಬಗ್ಗೆ ಸಂಸತ್ತಿನಲ್ಲೂ ಮಾತನಾಡಲಿಲ್ಲ. ಆದರೆ ಸನಾತನ ಧರ್ಮದ ಬಗ್ಗೆ ಮಾತನಾಡಿದ ಕೂಡಲೇ ಅದಕ್ಕೆ ತಕ್ಷಣ ಪ್ರತಿಕ್ರೀಯೆ ಕೊಡುತ್ತಾರೆ.

    ಬುದ್ಧ ಹೋರಾಡಿದ್ದು ಸನಾತನ ಧರ್ಮದ ವಿರುದ್ಧ, ಬಸವಣ್ಣ ಸಹ ಬ್ರಾಹ್ಮಣ ಜನಿವಾರ ಬೀಸಾಕಿ ಸಮ ಸಮಾಜ ಲಿಂಗಾಯತ ಧರ್ಮಕ್ಕೆ ಬಂದರು ಎಂದು ಹೇಳಿದರು. ದೇಶದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಆಸೆಯಂತೆ ಸದೃಢ ಭಾರತಕ್ಕೆ ಸಂವಿಧಾನದ ಮೂಲಕ ಸಮಾನತೆ ಸಿಗುತ್ತಿದೆ.

    ಸರ್ವರಿಗೂ ಶಿಕ್ಷಣ ದೊರತ್ತಿದ್ದು, ಮೂಲಭೂತ ಹಕ್ಕುಗಳು ಜೊತೆ ಮೂಲಭೂತ ಕರ್ತವ್ಯಗಳ ಬಗ್ಗೆ ಗಮನಹರಿಸಬೇಕು ಎಂದರು. ಚಿಂತಕ ವೈ.ಎನ್.ಗೌಡ್ರ, ಸಾಹಿತಿ ಸಾವಿತ್ರಿ ಮುಜಮದಾರ, ಗ್ರಾ.ಪಂ. ಅಧ್ಯಕ್ಷ ವೀರಣ್ಣ, ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ,
    ಇಟಗಿಯ ಶಿವಶರಣ ಶ್ರೀ ಗದಿಗೆಪ್ಪಪ್ಪಜ್ಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts