More

    ಸಮಾನತೆ ಬಸವ ತತ್ವದ ಗುಣ

    ಮುದ್ದೇಬಿಹಾಳ: ಶರೀರದಲ್ಲಿ ಯಂತ್ರ ಶಕ್ತಿ, ಮಂತ್ರ ಶಕ್ತಿ, ತಂತ್ರ ಶಕ್ತಿ, ಸಂಕಲ್ಪ ಶಕ್ತಿಯಿವೆ. ಇವು ಬೆಳಗಿನ ಸಂಚಾರದಿಂದ ಜಾಗೃತವಾಗುತ್ತವೆ. ಎಲ್ಲರನ್ನೂ ಗೌರವಿಸುವುದು, ಸಮನಾಗಿ ಕಾಣುವುದು ಬಸವ ತತ್ವದ ಗುಣವಾಗಿದೆ. ಬೆಳಗಿನ ಸಂಚಾರ, ಬಸವತತ್ವ ಅಳವಡಿಕೆ ಜೀವನವನ್ನು ಮಧುರವಾಗಿಸುತ್ತವೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚೆನ್ನವೀರ ದೇವರು ಹೇಳಿದರು.

    ಇಲ್ಲಿನ ಬಸವನಗರದಲ್ಲಿರುವ ಬಸವ ಉದ್ಯಾನವನದಲ್ಲಿ ಬಸವಪುರಾಣ ಪ್ರವಚನದ ಅಂಗವಾಗಿ 15 ದಿನಗಳ ಕಾಲ ನಡೆದ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ಬಸವ ಬೆಳಗಿನ ಸಂಚಾರ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಮುದ್ದೇಬಿಹಾಳದಲ್ಲಿ ಬಸವಪುರಾಣ ನಡೆಸಿಕೊಟ್ಟ ಕುಮಾರ ವಿರೂಪಾಕ್ಷ ಸ್ವಾಮೀಜಿಯವರು ಇಲ್ಲಿ ಕಲ್ಯಾಣದ ಅನುಭಾವ ಸೃಷ್ಠಿಸಿ ಬಸವ ತತ್ವ ಪಸರಿಸಿದ್ದಾರೆ. ಬಿಳಿ ಬಟ್ಟೆಯ ಶರಣರು ಮುದ್ದೇಬಿಹಾಳದಲ್ಲಿ ಬಸವಾನುಭಾವ ಬಿತ್ತರಿಸಿದ್ದಾರೆ. ಬಸವ ಪಾದಯಾತ್ರೆ ಯಶಸ್ವಿಯಾಗಿದೆ ಎಂದರು.

    ಧಾರವಾಡ ಜಿಲ್ಲೆ ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಬೆಳಗಿನ ಸಂಚಾರದಿಂದ ಎಲ್ಲರಿಗೂ ಸಮಾಧಾನವಾಗಿದೆ. ಮನುಷ್ಯ ಸಾರ್ಥಕವಾಗಿ ಒಂದು ದಿನ ಬದುಕಿದರೂ ಅದು ಸಾರ್ಥಕವಾದ ಬದುಕಾಗುತ್ತದೆ. ಎಲ್ಲರೂ 100 ವರ್ಷ ಬದುಕುವ ಪದ್ಧತಿ ಪಾಲಿಸಬೇಕು. ಒಳ್ಳೆಯವರನ್ನು ನೋಡ್ತಾ ಅವರ ಹಾಗೆ ಆಗಲು ಬಯಸಬೇಕು. ಇದ್ದ ಜಾಗವನ್ನೇ ಸ್ವರ್ಗ ಮಾಡಿಕೊಳ್ಳಬೇಕು ಎಂದರು.

    ಬಸವ ಬೆಳಗಿನ ಸಂಚಾರದ ಸಂಚಾಲಕ ರುದ್ರೇಶ ಕಿತ್ತೂರ ಮಾತನಾಡಿ, ಸಂಚಾರದಲ್ಲಿ ಸ್ವಾಮೀಜಿಯವರು 8ಸಾವಿರ ಜನರಿಗೆ ರುದ್ರಾಕ್ಷಿ ಕಟ್ಟಿದ್ದಾರೆ. 12ನೇ ಶತಮಾನದ ಬಸವಣ್ಣ ಕಲ್ಯಾಣಕ್ಕೆ ಮಾತ್ರ ಸೀಮಿತವಾಗದೆ ಇಂದು ಜಗತ್ತಿನೆಲ್ಲೆಡೆ ವ್ಯಾಪಿಸಿದ್ದಾನೆ. ಡಿ. 29ರಿಂದ 31ರವರೆಗೆ ನಿತ್ಯ ಬೆಳಗ್ಗೆ 5ರಿಂದ ಶಿವಯೋಗ ಹಾಗೂ ಇಷ್ಠಲಿಂಗ ಧಾರಣೆ ಮತ್ತು ಪೂಜೆ ಸ್ವಾಮೀಜಿಯವರಿಂದ ನಡೆಯುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

    ನಿವೃತ್ತ ಶಿಕ್ಷಕ ಬಸವರಾಜ ಕೋರಿ ಮಾತನಾಡಿ, ಎಲ್ಲೆಡೆ ಬಸವ ಭಾವ, ಶರಣರ ವಚನಗಳ ಪ್ರಸಾರಕ್ಕೋಸ್ಕರ ಈಗಾಗಲೇ ಬಸವ ಮಹಾಮನೆ ಟ್ರಸ್ಟ್‌ನ್ನು ನೋಂದಾಯಿಸಲಾಗಿದೆ. ಮುದ್ದೇಬಿಹಾಳದಲ್ಲಿ ಬಸವ ಭವನ ಕಟ್ಟುವ ಅಪೇಕ್ಷೆಯಿದ್ದು ಪುರಾಣ ಸಮಿತಿಯವರು ನೆರವಾಗುವುದಾಗಿ ತಿಳಿಸಿದ್ದಾರೆ ಎಂದರು.

    ಬಸವ ಸಂಚಾರದ ಯಶಸ್ಸಿಗೆ ಶ್ರಮಿಸಿದ ಮನೆಯಲ್ಲಿ ಮಹಾಮನೆ ಬಳಗದ ಪ್ರಮುಖರಾದ ಎಚ್.ಬಿ. ದಳವಾಯಿ, ಎಸ್.ಎಸ್. ಹುನಗುಂದ, ಕೆ.ಆರ್. ಕಾಮಟೆ, ಸಂಗಣ್ಣ ಕಟ್ಟಿ, ಬಿ.ಎಸ್. ಮೇಟಿ, ಭಾರತಿ ಪಾಟೀಲ, ಸರೋಜಾ ಕೋರಿ, ರಾಜೇಶ್ವರಿ ನಾಗರಾಳ, ಸುಜಾತಾ ಕರಡ್ಡಿ, ಸಂಗಮ್ಮ ದೇವರಳ್ಳಿ, ಪ್ರೀತಿ ದೇಗಿನಾಳ, ಅನ್ನಪೂರ್ಣ ಬಿರಾದಾರ, ಬಿ.ವೈ. ಲಿಂಗದಳ್ಳಿ, ಬಸಯ್ಯ ನಂದಿಕೇಶ್ವರಮಠ, ಪರಶುರಾಮ ನಾಲತವಾಡ, ದೀಪರತ್ನಶ್ರೀ, ಶಿವಸಂಗಮ್ಮ ಬಿರಾದಾರ, ಗಿರಿಜಾ ಪಾಟೀಲ, ರೇಣುಕಾ ಹಳ್ಳೂರ, ಶರಣು ಹೆಬ್ಬಾಳ, ಎಸ್.ಆರ್. ಗೌಡರ ಅವರನ್ನು ಸತ್ಕರಿಸಲಾಯಿತು.

    ಬಸವ ನಗರದ ಪ್ರಮುಖರಾದ ಟಿ. ಕೃಷ್ಣಮೂರ್ತಿ, ಎ. ಗಣೇಶ, ಶರಣಗೌಡ ಬೂದಿಹಾಳ, ಶ್ರೀಕಾಂತ ಹಿರೇಮಠ, ಎಸ್.ಎಸ್. ಅಂಗಡಿ, ಎಂ.ಬಿ. ನಾವದಗಿ, ಪ್ರಭುರಾಜ ಕಲಬುರ್ಗಿ, ಸಿ.ಪಿ. ಸಜ್ಜನ, ಸಂಗಮೇಶ ನಾವದಗಿ, ಮಹಾಂತೇಶ ಬೂದಿಹಾಳಮಠ, ರಾಜು ರಾಯಗೊಂಡ, ಗುರುಲಿಂಗಪ್ಪಗೌಡ ಪಾಟೀಲ, ಚಂದ್ರಶೇಖರ ಇಟಗಿ, ರವಿ ತಡಸದ, ಬಿ.ಎಂ. ರಾಂಪೂರ, ಬಿ.ಪಿ. ಪಾಟೀಲ, ಎಂ.ಬಿ.ಪಾಟೀಲ ಇತರರಿದ್ದರು. ಆರ್.ಜಿ. ಕಿತ್ತೂರ ನಿರ್ವಹಿಸಿದರು. ಬಿ.ವಿ. ಕೋರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts